For Quick Alerts
  ALLOW NOTIFICATIONS  
  For Daily Alerts

  ಮುದ್ದಾದ ಮಗಳು ಜಾನಕಿ ಜೊತೆ ಕಾಣಿಸಿಕೊಂಡ ನಟಿ ಶ್ರುತಿ ಹರಿಹರನ್

  |

  Recommended Video

  ಟೌನ್ ಹಾಲ್ ಮುಂದೆ ಮಗಳ ಜೊತೆ ಶೃತಿ ಹರಿಹರನ್ | SHRUTHI HARIHARAN | FILMIBEAT KANNADA

  ಸ್ಯಾಂಡಲ್ ವುಡ್ ನ ಟ್ಯಾಲೆಂಟೆಡ್ ನಟಿ ಶ್ರುತಿ ಹರಿಹರನ್ ಈಗ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ತಾಯ್ತನ ಎಂಜಾಯ್ ಮಾಡುತ್ತಿರುವ ಶ್ರುತಿ ಇತ್ತೀಚಿಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದರು. ಪತಿಯ ಜೊತೆ ಬೆಂಗಳೂರಿಗೆ ಆಗಮಿಸಿದ್ದ ಶ್ರುತಿ ಮುದ್ದಾದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.

  ಇತ್ತೀಚಿಗೆ ಶ್ರುತಿ ಮದ್ದಾದ ಮಗುವಿನ ಪುಟ್ಟ ಪಾದಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಮಗುವಿನ ಫೋಟೋವನ್ನು ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಕುತೂಹಲಕ್ಕೆ ತೆರೆಬಿದ್ದಿದೆ. ಮುದ್ದಾದ ಕಂದಮ್ಮನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನೆ ಸಮಯದಲ್ಲಿ ಸೆರೆಹಿಡಿದ ಶ್ರುತಿ ಮಗಳ ಫೋಟೋ ವೈರಲ್ ಆಗಿದೆ.

  ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?

  ಅಂದ್ಹಾಗೆ ಶ್ರುತಿ ಮಗಳಿಗೆ ಜಾನಕಿ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿಗಷ್ಟೆ ನಾಮಕರಣದ ಫೋಟೋವನ್ನು ಶೇರ್ ಮಾಡಿದ್ದರು. ಶ್ರುತಿ ಸದ್ಯ ಕೇರಳಾದಲ್ಲಿ ನೆಲೆಸಿದ್ದಾರೆ. ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಕಲರಿಪಟ್ಟು ಕಲಾವಿದ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ನೃತ್ಯ ನಿರ್ದೇಶಕ. ಪತಿ ರಾಮ್ ಮಗಳು ಜಾನಕಿ ಜೊತೆ ಶ್ರುತಿ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

  Actress Sruthi Hariharan Daughter Janakis Photo Revealed

  ಶ್ರುತಿ ಸದ್ಯ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಮಿ ಟೂ ಪ್ರಕರಣದ ನಂತರ ಅವಕಾಶಗಳು ಕೂಡ ಕಡಿಮೆಯಾಗಿದೆ. ಇತ್ತೀಚಿಗಷ್ಟೆ ಶ್ರುತಿ ಅಭಿನಯದ ಕೊನೆಯ ಸಿನಿಮಾ 'ಮನೆ ಮರಾಟಕ್ಕಿದೆ' ರಿಲೀಸ್ ಆಗಿದೆ. ಸದ್ಯ ಮಗಳ ಆರೈಕೆಯಲ್ಲಿರುವ ಶ್ರುತಿ ಸಧ್ಯದಲ್ಲೇ ಚಿತ್ರರಂಗದ ಕಡೆ ಮುಖ ಮಾಡುವ ಸಾಧ್ಯತೆ ಇದೆ.

  English summary
  Kannada actress Sruthi Hariharan daughter janaki's photo revealed.
  Monday, December 16, 2019, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X