'ಸಂಭಾವನೆ' ವಿಚಾರದ ಬಗ್ಗೆ ಸಿಡಿದೆದ್ದ ನಟಿ ಸುಧಾರಾಣಿ

By Suneetha

ನಾಯಕಿಯರಿಗೆ ನೀಡುವ ಸಂಭಾವನೆ ವಿಚಾರದಲ್ಲಿ ಕನ್ನಡ ಚಿತ್ರರಂಗ ಎಡವುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ನಾಯಕರಿಗೆ ನೀಡುವಷ್ಟು ಸಂಭಾವನೆ ನಾಯಕಿಯರಿಗೆ ನೀಡಲ್ಲ ಅನ್ನೋ ಅಸಮಾಧಾನದ ಮಾತುಗಳು ಮೊದಲಿನಿಂದಲೂ ಬಂದಿದೆ. ಈಗಲೂ ಬರ್ತಾ ಇದೆ.

ಮೊದಲು ನಟಿ ರಮ್ಯಾ, ಆಮೇಲೆ ಹರ್ಷಿಕಾ ಪೂನಚ್ಚ ಆಯ್ತು ತದನಂತರ ಇತ್ತೀಚೆಗಷ್ಟೇ ನಟಿ ಐಂದ್ರಿತಾ ರೇ ಅವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿ ಬಹಳ ಸುದ್ದಿ ಮಾಡಿದ್ದರು. ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ಖ್ಯಾತ ನಟಿ ಸುಧಾರಾಣಿ ಅವರು.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

Actress Sudharani expresses displeasure over gender pay gap

ನಟಿ ಸುಧಾರಾಣಿ ಅವರು ಕೂಡ ಇದೇ ಮಾತನ್ನು ಪುನರುಚ್ಛರಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಅವರು ಸಂಭಾವನೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಸಂಭಾವನೆ ಕಡಿಮೆ ಯಾಕೆ ಅಂತ ನಟಿ ಸುಧಾರಾಣಿ ಅವರು ಎಲ್ಲರಿಗೂ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

Actress Sudharani expresses displeasure over gender pay gap

'ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಯಾವತ್ತಿಗೂ ಸಂಭಾವನೆ ಕಡಿಮೆಯೇ. ಹೆಣ್ಣನ್ನು ಭೂತಾಯಿ, ಭಾರತ ಮಾತೆಗೆ ಹೋಲಿಸುತ್ತಾರೆ. ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ನಾಯಕಿಯರಿಗೆ ಯಾವಾಗಲೂ ಕಡಿಮೆ ಪ್ರಾಮುಖ್ಯತೆ ನೀಡುತ್ತಾರೆ".[ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]

Actress Sudharani expresses displeasure over gender pay gap

"ನಟರಂತೆ ನಟಿಯರು ಕೂಡ ಕಷ್ಟಪಟ್ಟು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಆದ್ದರಿಂದ ಅವರನ್ನು ಕಡೆಗಣಿಸುವುದು ಸರಿಯಲ್ಲ" ಎಂದು ನಟಿ ಸುಧಾರಾಣಿ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Actress Sudharani expresses displeasure over gender pay gap

'ಕನ್ನಡ ಚಿತ್ರರಂಗದ ನಾಯಕಿಯರು ಬಹಳ ಹಿಂದಿನ ಕಾಲದಿಂದಲೂ ಕೂಡ ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಕೂಡ ಇದಕ್ಕೆ ಸರಿಯಾದ ಪರಿಹಾರ ದೊರೆತಿಲ್ಲ ಅನ್ನೋದು ವಿಷಾದಕರ ಸಂಗತಿ' ಎಂದು ಸುಧಾರಾಣಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kannada Actress Sudharani expresses displeasure over gender pay gap and perks for heroines in sandalwood. Actress Sudharani expresses opinion about remunaration in 'Belli Hejje' programme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X