For Quick Alerts
  ALLOW NOTIFICATIONS  
  For Daily Alerts

  'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಹೊಸ ಲುಕ್... ವಾಹ್!

  By Harshitha
  |

  ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹತ್ತತ್ರ ಮೂರು ದಶಕಗಳಾಗಿವೆ. ಈಗಲೂ ನಟಿ ಸುಧಾರಾಣಿ ಎಲ್ಲರಿಗೂ 'ಮನ ಮೆಚ್ಚಿದ ಹುಡುಗಿ'. ಇಂತಿಪ್ಪ ಸುಧಾರಾಣಿಯ ವಯಸ್ಸು 40 ಅಂದ್ರೆ ನಂಬುವುದಕ್ಕೆ ಕೊಂಚ ಅಸಾಧ್ಯ.

  ಯಾಕಂದ್ರೆ, ಸುಧಾರಾಣಿಯನ್ನ ನೋಡಿದಾಗ 'ಆನಂದ್' ಸಮಯಕ್ಕೆ ಜಾರುವವರೇ ಹೆಚ್ಚು. ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿರುವಾಗಲೇ ಮದುವೆ, ಮನೆ, ಮಕ್ಕಳು ಅಂತ ಬಿಜಿಯಾದ ಸುಧಾರಾಣಿ, ಇದೀಗ ಸಣ್ಣ-ಪುಟ್ಟ ಪಾತ್ರಗಳಿಗಾಗಿ ಬಣ್ಣ ಹಚ್ಚುತ್ತಿದ್ದಾರೆ.

  '+' ಸಿನಿಮಾದಲ್ಲಿ ಅನಂತ್ ನಾಗ್ ಜೊತೆ ಮುಖ್ಯ ಭೂಮಿಕೆಯಲ್ಲಿರುವ ಸುಧಾರಾಣಿ, ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 'ಲವ್ ಯು ಆಲಿಯ' ಸಿನಿಮಾದಲ್ಲಿ ಸುಧಾರಾಣಿಯನ್ನ ನೋಡಿಬಿಟ್ರೆ, ಒಮ್ಮೆ ನೀವು ಕಳೆದುಹೋಗುವುದು ಗ್ಯಾರೆಂಟಿ. ಬೇಕಾದ್ರೆ, ಚಿತ್ರತಂಡದಿಂದ ಬಂದಿರುವ ಈ ಹೊಸ ಫೋಟೋ ನೋಡಿ....

  ಯೆಸ್, ಏಕ್ದಂ ಬಾಲಿವುಡ್ ಸ್ಟೈಲ್ ನಲ್ಲಿ ಟಿಪ್ ಟಾಪ್ ಆಗಿ ನಟಿ ಸುಧಾರಾಣಿ ಕಂಗೊಳಿಸಿದ್ದಾರೆ. ಹಿಂದೆಂದಿಗಿಂತಲೂ ಅಲ್ಟ್ರಾ ಮಾಡ್ರನ್ ಆಗಿ ಸುಧಾರಾಣಿ 'ಲವ್ ಯು ಆಲಿಯ' ಚಿತ್ರದಲ್ಲಿ ಮಿಂಚಿದ್ದಾರೆ.

  ಕೈಯಲ್ಲಿ ಹೇರ್ ಡ್ರೈಯರ್ ಮತ್ತು ಸ್ಪಾ ಸೆಟಪ್ ನೋಡಿದ ಮೇಲೆ, ಸುಧಾರಾಣಿ 'ಲವ್ ಯು ಆಲಿಯ' ಚಿತ್ರದಲ್ಲಿ ಬ್ಯೂಟಿಶಿಯನ್ ಅಂತ ಸ್ಪೆಷಲ್ ಆಗಿ ಹೇಳಬೇಕಿಲ್ಲ. ನಾಯಕ ಚಂದನ್ ಗೆ ಸುಧಾರಾಣಿ ತಾಯಿ ಪಾತ್ರ ನಿಭಾಯಿಸುತ್ತಿರುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ.

  ಈಗಿನ ಟ್ರೆಂಡ್ ಗೆ ತಕ್ಕಂತೆ, ಮಗನ ಜೊತೆ ಫ್ರೆಂಡ್ಲಿಯಾಗಿರುವ ತಾಯಿ ಪಾತ್ರದಲ್ಲಿ ಸುಧಾರಾಣಿ ಎಲ್ಲರಿಗೂ ಮಾದರಿಯಾಗುತ್ತಾರೆ ಅನ್ನುವುದು ಚಿತ್ರತಂಡದ ಆಂಬೋಣ. ಇನ್ನೂ ಇದೇ ಚಿತ್ರದಲ್ಲಿ ಡಾಕ್ಟರ್ ಆಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದರೆ, ಡ್ಯಾನ್ಸರ್ ಆಗಿ ಭೂಮಿಕಾ ಇದ್ದಾರೆ. [ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ]

  ಎಲ್ಲರ ಕಣ್ಮನ ಸೆಳೆಯುವ ಹಾಗೆ, ಚಿತ್ರದ ಎಲ್ಲಾ ನಟರಿಗೆ ಮೇಕ್ ಓವರ್ ಕೊಟ್ಟಿರುವ ಖ್ಯಾತಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರಿಗೆ ಸಲ್ಲಬೇಕು. ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ 'ಲವ್ ಯು ಆಲಿಯ' ಚಿತ್ರದ ಹಾಡುಗಳು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ. (ಫಿಲ್ಮಿಬೀಟ್ ಕನ್ನಡ)

  English summary
  Actress Sudharani is roped in to play a Beautician role in the movie 'Love You Alia'. Crazy Star Ravichandran and Bhumika Chawla are playing lead roles in the flick, which is directed by Indrajith Lankesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X