ಯೋಧ ಗುರು ಕುಟುಂಬದ ನೆರವಿಗೆ ಬಂದ ಸುಮಲತಾ
ಪುಲ್ವಾಮಾ ದಾಳಿಯಿಂದ ಬಲಿಯಾದ ಯೋಧರಲ್ಲಿ ಕರ್ನಾಟಕದ ಗುರು ಕೂಡ ಒಬ್ಬರು. ಈ ವೀರ ಭಾರತೀಯ ಪುತ್ರನ ಅಂತಿಮ ಸಂಸ್ಕಾರ ಇದೀಗ ನಡೆಯುತ್ತಿದೆ.
ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್
ಮಂಡ್ಯದ ಯೋಧ ಗುರು ಕುಟುಂಬದ ನೆರವಿಗೆ ನಟಿ ಸುಮಲತಾ ಬಂದಿದ್ದಾರೆ. ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಸುಮಲತಾ ಹೇಳಿದ್ದಾರೆ. ಗುರು ಅವರ ಕುಟುಂಬದ ಬಳಿ ಯಾವುದೇ ಜಮೀನು ಇರಲಿಲ್ಲ. ಹೀಗಾಗಿ ಅಂತಿಮ ಸಂಸ್ಕಾರ ಎಲ್ಲಿ ನಡೆಯುವುದು ಎಂಬ ಗೊಂದಲ ಇತ್ತು. ಈ ವೇಳೆ ಸುಮಲತಾ ಅಂತ್ಯ ಸಂಸ್ಕಾರಕ್ಕೆ ತಾವೇ ಭೂಮಿ ನೀಡುವುದಾಗಿ ತಿಳಿಸಿದ್ದರು.
ಬಳಿಕ ಜಿಲ್ಲಾಡಳಿತ ಸರ್ಕಾರಿ ಜಮೀಮಿನಲ್ಲಿ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಿದೆ. ಆದರೆ, ತಮ್ಮ ಮಾತಿನಂತೆ ನಡೆದುಕೊಳ್ಳುವುದಾಗಿ ಹೇಳಿದ ಸುಮಲತಾ ಅರ್ಧ ಎಕರೆ ಜಾಗವನ್ನು ಗುರು ಕುಟುಂಬಕ್ಕೆ ನೀಡುವುದಾಗಿ ಪ್ರಕಟಿಸಿದರು.

ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಇರುವ ಜಮೀನಿನಲ್ಲಿ ಅರ್ಧ ಎಕರೆ ಜಮೀನನ್ನು ಯೋಧ ಗುರು ಅವರ ಕುಟುಂಬಕ್ಕೆ ನೀಡಲಾಗುತ್ತಿದೆ. ಮಂಡ್ಯದ ಸೊಸೆಯಾಗಿ ಇದು ನನ್ನ ಕರ್ತವ್ಯ ಎಂದು ಸುಮಲತಾ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಸದ್ಯ, ಸುಮಲತಾ ತಮ್ಮ ಪುತ್ರ ಅಭಿಷೇಕ್ ನಟನೆಯ 'ಅಮರ್' ಚಿತ್ರದ ಚಿತ್ರೀಕರಣಕ್ಕಾಗಿ ಮಲೇಷ್ಯಾದಲ್ಲಿ ಇದ್ದು, ವಾಪಸ್ ಬಂದ ಬಳಿಕವೇ ಗುರು ಕುಟುಂಬದ ಹೆಸರಿಗೆ ಜಮೀನು ರಿಜಿಸ್ಟರ್ ಮಾಡಿಸಲಿದ್ದಾರಂತೆ.


Click it and Unblock the Notifications











