twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ಸಾಮೂಹಿಕ ಅತ್ಯಾಚಾರ: ಮಂಡ್ಯ ಸಂಸದೆ ಸುಮಲತಾ ಹೇಳಿದ್ದೇನು?

    |

    ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ನಟಿ, ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ''ಇಂತಹ ಪ್ರಕರಣದಲ್ಲಿ ಬೇಗ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದಿದ್ದಾರೆ.

    ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಸುಮಲತಾ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದವರು ಜೊತೆ ಮಾತನಾಡಿದ ಸಂಸದೆ ''ಇಂತಹ ವಿಷಯಗಳು ಈಗಲೂ ನಡೆಯುತ್ತಿದೆ ಎನ್ನುವುದು ಬಹಳ ನೋವುಂಟು ಮಾಡಿದೆ. ಎಷ್ಟೇ ಕಠಿಣ ನಿಯಮ, ಕಾನೂನು ರೂಪಿಸಿದರೂ ತಂದರೂ ಅದನ್ನು ಜಾರಿಗೆ ತರುವಲ್ಲಿ ಹಿನ್ನಡೆಯಾಗುತ್ತಿದೆ. ಇಂತಹ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು.'' ಎಂದು ಅಭಿಪ್ರಾಯ ಪಟ್ಟರು.

    ''ಇಂತಹ ವಿಚಾರದಲ್ಲಿ ಎಷ್ಟು ಬೇಗ ಸಾಧ್ಯವೂ ಅಷ್ಟು ಬೇಗ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಆ ಭಯ ಇರಲ್ಲ. ಮತ್ತೆ ಮತ್ತೆ ಇಂತಹ ಕೃತ್ಯಗಳನ್ನು ಮಾಡಲು ಮುಂದಾಗ್ತಾರೆ. ಈ ತನಿಖೆ ಬೇಗ ಮುಗಿಸಿ ತುಂಬಾ ಕಠಿಣವಾದ ಶಿಕ್ಷೆಗೆ ಗುರಿ ಮಾಡಬೇಕು'' ಎಂದು ಮಂಡ್ಯ ಸಂಸದೆ ಸುಮಲತಾ ಒತ್ತಾಯಿಸಿದರು.

    actress-sumalatha-condemns-gang-rape-on-student-in-mysuru

    ''ಅತ್ಯಾಚಾರ ಪ್ರಕರಣದಲ್ಲಿ ಹೆಣ್ಣು ಮಕ್ಕಳದ್ದು ತಪ್ಪು ಎಂದು ದೂಷಿಸುವುದು ಸರಿಯಲ್ಲ. ಇಂತಹ ಮನೋಭಾವನೆಯನ್ನು ನಾನು ಖಂಡಿಸುತ್ತೇನೆ. ಕಠಿಣವಾದ ಕಾನೂನು ಮಾತ್ರ ಅದನ್ನು ತಡೆಯಲು ಸಾಧ್ಯ'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕಾಮುಕರನ್ನು ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು- ಶ್ರುತಿ ಆಕ್ರೋಶಕಾಮುಕರನ್ನು ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು- ಶ್ರುತಿ ಆಕ್ರೋಶ

    ಮೈಸೂರು ಸಾಮೂಹಿಕ ಅತ್ಯಾಚಾರ ಘಟನೆಯನ್ನು ಸಾಕಷ್ಟು ನಟಿಯರು ಖಂಡಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಹಿರಿಯ ನಟಿ ತಾರಾ, ''ಈ ಘಟನೆ ಖಂಡನೀಯ. ಆ ಕುಟುಂಬದವರ ನೋವು ನಮಗೆ ಅರ್ಥವಾಗುತ್ತಿದೆ. ನಾನೊಬ್ಬ ಹೆಣ್ಣು ಮಗಳಾಗಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬಲ್ಲೆ. ಯುವತಿಯ ಜೊತೆಯಲ್ಲಿದ್ದ ಹುಡುಗನ ಮೇಲೆ ಹಲ್ಲೆ ಮಾಡಿರುವುದು ಬಹಳ ಅಸಹ್ಯ. ಈ ಕೇಸ್‌ನ ಆರೋಪಿಗಳನ್ನು ತಕ್ಷಣ ಹಿಡಿದು ಶಿಕ್ಷೆ ಕೊಡಿಸಬೇಕು'' ಎಂದು ಆಗ್ರಹಿಸಿದರು.

    ಅತ್ಯಾಚಾರವನ್ನು ಖಂಡಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಹಿರಿಯ ನಟಿ ಶ್ರುತಿ, ''ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡಿಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ. ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು? ಇಂತಹ ಅನಿಷ್ಟ ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ? ಹುಟ್ಟಿನಿಂದ ಸಾವಿನವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ'' ಎಂದು ಆಕ್ರೋಶ ಹೊರಹಾಕಿದ್ದಾರೆ.

    English summary
    Sandalwood Actress and Mandya MP Sumalatha Condemns Gang Rape on Student in Mysuru.
    Saturday, August 28, 2021, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X