'ನಮ್ಮೆಲ್ಲರ ಹಸಿವು ನೀಗಿಸುವ ದೈವ, ನಿನಗೆ ನನ್ನ ಪ್ರಣಾಮಗಳು' - ಸುಮಲತಾ

'ನೀನು ರೈತನಾಗದಿದ್ದರೂ ಪರವಾಗಿಲ್ಲ, ರೈತರನ್ನು ಗೌರವಿಸು......' ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನಾಚರಣೆ. ಈ ವಿಶೇಷ ದಿನದಲ್ಲಿ ಪ್ರತಿಯೊಬ್ಬರು ಅನ್ನದಾತರನ್ನು ಸ್ಮರಿಸಬೇಕು.

ರಾಷ್ಟ್ರೀಯ ರೈತರ ದಿನಾಚರಣೆಗೆ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ, ''ನಮ್ಮೆಲ್ಲರ ಹಸಿವು ನೀಗಿಸುವ ದೈವ, ನಿನಗೆ ನನ್ನ ಪ್ರಣಾಮಗಳು'' ಎಂದಿದ್ದಾರೆ.

''ಹಗಲಿರುಳು ತನ್ನ ಬೆವರು ಸುರಿಸಿ, ನಮ್ಮೆಲ್ಲರ ಹಸಿವು ನೀಗಿಸುವ ದೈವ, ನಿನಗೆ ನನ್ನ ಪ್ರಣಾಮಗಳು. "... ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೆ ನಿಂತಿದೆ ಧರ್ಮ, ಉಳುವಾ ಯೋಗಿಯ ನೋಡಲ್ಲಿ." ಸಮಸ್ತ ರೈತ ಬಾಂಧವರಿಗೆ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

Actress Sumalatha Wishes to Farmers on National Farmers Day

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ರೈತರ ದಿನಾಚರಣೆಗೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ''ರೈತರು ನಿಜವಾದ ವೀರರಾಗಿದ್ದಾರೆ ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ. ರೈತ ದಿನಾಚರಣೆಯ ಶುಭಾಶಯಗಳು' ಎಂದು ವಿಶ್ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ಸುಮಲತಾ ಗೆದ್ದಿದ್ದರು. ಮಂಡ್ಯದ ಅಭಿವೃದ್ದಿ ವಿಚಾರದಲ್ಲಿ ಅಂಬರೀಶ್ ಅವರಂತೆ ಹಾಗು ಅವರ ಕನಸುಗಳನ್ನು ನೆರವೇರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Mandya MP, Actress wishes to farmers on national Farmers Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X