For Quick Alerts
  ALLOW NOTIFICATIONS  
  For Daily Alerts

  ಡಿ ಗ್ಲಾಮ್ ಲುಕ್‌ನಲ್ಲಿ 'ಪೆಟ್ರೋಮ್ಯಾಕ್ಸ್'ಗೆ ಬಂದ ಸುಮನ್ ರಂಗನಾಥ್

  |

  ತೆರೆಮೇಲೆ ಮಿಂಚುವ ತಾರೆಯರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳೊದು ತುಂಬಾ ಮುಖ್ಯ. ಕೆಲವರು ತೆರೆಮೇಲೆ ತೆಳ್ಳಗೆ ಬಳುಕೊ ಬಳ್ಳಿಯಂತೆ ಕಾಣಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಮದುವೆ ಆದಮೇಲೆ ಹೆಚ್ಚಾಗಿ ಈ ಬಗ್ಗೆ ಗಮನ ಕೊಡದೆ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಆದರೆ ಇದೆಲ್ಲದಕ್ಕು ತದ್ವಿರುದ್ದದಂತಿರುವ ನಟಿ ಅಂದ್ರೆ ಅವರು ಸುಮನ್ ರಂಗನಾಥ್.

  1989 ರಲ್ಲಿ ಸಿಬಿಐ ಶಂಕರ್ ಸಿನಿಮಾ ಮೂಲಕ ಚಿತ್ರರಂಗ ಎಂಟ್ರಿ ಪಡೆದ ನಟಿ ಸುಮನ್ ಈಗಾಗಲೇ 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವರ್ಷ 45 ದಾಟಿದರೂ ಸುಮನ್ ಬ್ಯೂಟಿ ಮೊದಲಿಗಿಂತ ಒಂದಿಷ್ಟು ಕಡಿಮೆಯಾಗಿಲ್ಲ. ಅದೇ ಮೈಮಾಟ, ಅದೇ ಗ್ಲಾಮರ್‌ ಕಾಪಾಡಿಕೊಂಡು ಬಂದಿರೋ ಸುಮನ್ ರಂಗನಾಥ್ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಈಗಲೂ ಅದೇ ಛಾಪು ಉಳಿಸಿಕೊಂಡಿದ್ದಾರೆ.

  ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸುಮನ್ ರಂಗನಾಥ್ ಈಗ ಪೆಟ್ರೋಮ್ಯಾಕ್ಸ್ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಈಗಾಗಲೇ ವಿಜಯ್ ಪ್ರಸಾದ್ ನಿರ್ದೇಶನದ ಸಿದ್ಲಿಂಗು, ನೀರ್‌ದೋಸೆ, ತೋತಾಪುರಿ ಚಿತ್ರಗಳಲ್ಲಿ ಅಭಿನಯಿಸಿರುವ ಸುಮನ್ ವಿಜಯ್ ಪ್ರಸಾದ್ ನಿರ್ದೇಶನದಲ್ಲೇ ಮೂಡಿಬರುತ್ತಿರುವ ಪೆಟ್ರೋಮ್ಯಾಕ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೇ ವಿಶೇಷ ಪಾತ್ರವೊಂದರಲ್ಲಿ ಸುಮನ್ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ.

  ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯ ಪೆಟ್ರೋಮ್ಯಾಕ್ಸ್ ಚಿತ್ರ ಬಹಳ ಹಿಂದೆಯೇ ಶೂಟಿಂಗ್ ಆರಂಭಿಸಿ ಮುಕ್ತಾಯ ಹಂತ ತಲುಪಿದೆ. ಸಾಕಷ್ಟು ದೊಡ್ಡ ಕಲಾವಿದರು, ಹಿರಿಯ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಮತ್ತಷ್ಟು ಕಲಾವಿದರು ಸಿನಿಮಾ ತಂಡ ಸೇರ್ಪಡೆಯಾಗಿದ್ದು ಅದರಲ್ಲಿ ಒಬ್ಬರು ಸುಮನ್ ರಂಗನಾಥ್. ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸುಮನ್ ಕಾಣಿಸಿಕೊಳ್ಳಲಿದ್ದು, ತುಂಬ ಪ್ರಾಮುಖ್ಯತೆ ಇರುವ ಪಾತ್ರ ಇದಾಗಿರುತ್ತೆ ಎಂದು ಚಿತ್ರತಂಡ ತಿಳಿಸಿದೆ.

  ಚಿತ್ರದುರ್ಗ ಮೂಲದ ಸುಬ್ಬಲಕ್ಷ್ಮಿ ಎಂಬ ಪಾತ್ರದಲ್ಲಿ ಸುಮನ್ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಡಿ ಗ್ಲಾಮ್ ಪಾತ್ರವಾಗಿದ್ದು ಮೇಕಪ್ ಇಲ್ಲದೇ ಸುಮನ್ ಈ ಪಾತ್ರದಲ್ಲಿ ನಟಿಸಬೇಕಿದೆ. ಒಂದು ಹಾಡಿನಲ್ಲಿ ಮಾತ್ರ ಸುಮನ್ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರದಲ್ಲಿ ಸುಮನ್ ಗೆಟಪ್ ತುಂಬ ವಿಭಿನ್ನವಾಗಿರುತ್ತೆ. ಈ ಹಿಂದಿನ ಸಿನಿಮಾಗಿಂತಲೂ ಸುಮನ್ ಲುಕ್ಕು, ನಟನೆ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಪಾತ್ರ ಕೊಟ್ಟರು ಅದನ್ನು ನಿರಾಕರಿಸದೇ ಸವಾಲಾಗಿ ತೆಗೆದುಕೊಂಡು ಮಾಡುವ ನಟಿ ಸುಮನ್ ಸುಬ್ಬಲಕ್ಷ್ಮಿ ಪಾತ್ರವನ್ನು ಹಾಗೆಯೇ ನಿಭಾಯಿಸಿದ್ದಾರೆ.

  Actress Suman Ranganath cameo in Petromax

  ಇನ್ನು ಪೆಟ್ರೋಮ್ಯಾಕ್ಸ್ ಸಿನಿಮಾದ ಟ್ರೇಲರ್ ಮತ್ತು ಟೀಸರ್‌ಗಳು ಈಗಾಗಲೇ ಬಿಡುಗಡೆಯಾಗಿದ್ದು, ಪಕ್ಕಾ ಎಂಟರ್‌ಟೈನರ್ ಸಿನಿಮಾ ಅನ್ನೋದನ್ನ ಗೊತ್ತುಮಾಡಿದೆ. ಟ್ರೇಲರ್ ನಲ್ಲಿ ಬರುವಂತಹ ಒಂದಷ್ಟು ಚೇಷ್ಠೆ ಸಂಭಾಷಣೆಗಳು ಮುಜುಗರ ಮೂಡಿಸಿದರೂ ಇದರೊಂದಿಗೆ ಗಂಭೀರವಾದ ವಿಷಯವೂ ಸಿನಿಮಾದಲ್ಲಿ ಇದೆ ಅನ್ನೋದು ಚಿತ್ರತಂಡದ ಮಾತು. ಸಿನಿಮಾದಲ್ಲಿ ಪೆಟ್ರೋಮ್ಯಾಕ್ಸ್ ಎಂದರೇ ಬದುಕು ಮತ್ತು ಬೆಳಕು ಎಂದರ್ಥ. ಸಿನಿಮಾದಲ್ಲಿ ಪಾತ್ರಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಪೆಟ್ರೋಮ್ಯಾಕ್ಸಿಗೂ ಇದೆಯಂತೆ.

  ಹಾಡುಗಳಿಗೆ ಸಂಗೀತ ನಿರ್ದೇಶನವನ್ನು ಅನೂಪ್ ಸೀಳಿನ್ ಮಾಡಿದ್ದು, ಛಾಯಾಗ್ರಹಣವನ್ನು ನಿರಂಜನ್‌ಬಾಬು ಮಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ ಈ ಸಿನಿಮಾಕ್ಕಿದೆ. ಈ ಸಿನಿಮಾದಲ್ಲಿ ಖ್ಯಾತ ನಟಿ ಹರಿಪ್ರಿಯಾ, ಕಾರುಣ್ಯಾ ರಾಮ್, ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ. ಗೊಂಬೆಗಳ ಲವ್ ಸಿನಿಮಾ ಖ್ಯಾತಿಯ ನಟ ಅರುಣ್, ನಾಗಭೂಷಣ್, ಭುವಿ ಪೋಷಕ ಪಾತ್ರಗಳಲ್ಲಿ ಇದ್ದಾರೆ.ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಆದಷ್ಟು ಬೇಗ ಈ ಸಿನಿಮಾ ತೆರೆಮೇಲೆ ಬಂದು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ. ಹಾಗೆ ಸಿನಿಮಾಗೆ ಆಡಿಯನ್ಸ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.

  English summary
  Kannada actress Suman Ranganath cameo in Vijaya Prasad directorial Petromax movie.
  Saturday, November 20, 2021, 16:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X