ಸತೀಶ್ ಜೊತೆ 'ಪರಿಮಳ ಲಾಡ್ಜ್'ನಲ್ಲಿ ಕಾಣಿಸಿಕೊಂಡ ನಟಿ ಸುಮನ್ ರಂಗನಾಥ್

Recommended Video

ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಸುಮನ್, ನೀನಾಸಂ ಸತೀಶ್..? | suman ranganath

ಸ್ಯಾಂಡಲ್ ವುಡ್ ನ ಚಿರಯೌವನೆ ನಟಿ ಸುಮನ್ ರಂಗನಾಥ್ ಬಳಿ ಸಾಕಷ್ಟು ಸಿನಿಮಾಗಳಿವೆ. ಸಿನಿಮಾದಲ್ಲಿ ಬ್ಯುಸಿ ಇರುವ ಸುಮನ್ ರಂಗನಾಥ್ ಸತೀಶ್ ಜೊತೆ ಪರಿಮಳ ಲಾಡ್ಜ್ ಸೇರಿದ್ದೇಕೆ ಅಂತ ಅಚ್ಚರಿಪಡುತ್ತಿದ್ದೀರಾ. ಪರಿಮಳ ಲಾಡ್ಜ್ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ.

ನಾಯಕ ನಿನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನೀರ್ ದೋಸೆ ಮತ್ತು ಬ್ಯಾಟಿಫುಲ್ ಮನಸುಗಳ ಖ್ಯಾತಿಯ ನಿರ್ಮಾಪಕ ಪ್ರಸನ್ನ ಈ ಮೂವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಪರಿಮಳ ಲಾಡ್ಜ್.

ಈ ಮೂವರ ಜೊತೆಗೀಗ ಪರಿಮಳ ಲಾಡ್ಜ್ ಗೆ ನಟ ಯೋಗಿ ಕೂಡ ಸೇರಿಕೊಂಡಿದ್ದಾರೆ. 7 ವರ್ಷಗಳ ಹಿಂದೆ ವಿಜಯ್ ಪ್ರಸಾದ್ ಮತ್ತು ಯೋಗಿ ಕಾಂಬಿನೇಷನ್ ನಲ್ಲಿ ಸಿದ್ಲಿಂಗು ಸಿನಿಮಾ ತೆರೆಗೆ ಬಂದಿತ್ತು. ಆ ನಂತರ ಈಗ ಮತ್ತೆ ಒಂದಾಗಿದ್ದಾರೆ ಯೋಗಿ ಮತ್ತು ವಿಜಯ್ ಪ್ರಸಾದ್ ಜೋಡಿ.

Actress Suman Ranganath Will Playing Important Role In Parimala Iagde

ವಿಶೇಷ ಅಂದ್ರೆ ನಟಿ ಸುಮನ್ ರಂಗನಾಥ್, ವಿಜಯ್ ಪ್ರಸಾದ್ ನಿರ್ದೇಶನದ ಬಹುತೇಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು, ನೀರ್ ದೋಸೆ, ತೋತಾಪುರಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪರಿಮಳ ಲಾಡ್ಜ್ ಮೂಲಕ ನಾಲ್ಕನೆ ಬಾರಿ ವಿಜಯ್ ಪ್ರಸಾದ್ ಸಿನಿಮಾದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ವಿಶೇಷ ಪಾತ್ರಗಳ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಸುಮನ್ ರಂಗನಾಥ್ ಇತ್ತೀಚಿಗಷ್ಟೆ ಕಮಲುದಾರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಹು ಬೇಡಿಕೆಯ ನಟಿಯಾಗಿರುವ ಸುಮನ್ ಪರಿಮಳ ಲಾಡ್ಜ್ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Actress Suman Ranganath will playing important role in Parimala lagde. Ninasam Sathish and Yogi starrer film. This film is directed by Vijay Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X