For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಹಳ್ಳಿಯಲ್ಲಿ ಸನ್ನಿ ಲಿಯೋನ್ ಕಟೌಟ್: ಅಭಿಮಾನಿಗಳ ಪ್ರೀತಿಗೆ ಸನ್ನಿ ಫಿದಾ

  |

  ಒಂದು ಕಾಲದ ನೀಲಿ ತಾರೆ, ಬಹುಭಾಷಾ ನಟಿ ಸನ್ನಿ ಲಿಯೋನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ. ಅಡಲ್ಟ್ ಸಿನಿಮಾ ಲೋಕದಿಂದ ಹೊರಬಂದ ಬಳಿಕ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೆಯಲ್ಲ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.

  ಕರ್ನಾಟಕದಲ್ಲಿ ತನ್ನ ಕಟೌಟ್ ನೋಡಿ ಖುಷಿ ಪಟ್ಟ ಸನ್ನಿ ಲಿಯೋನ್ | Filmibeat Kannada

  ಸನ್ನಿ ಲಿಯೋನ್ ಮಾನವೀಯ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸನ್ನಿ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದರು. ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ದೇಶದಾದ್ಯಂತ ಅಭಿಮಾನಿಗಳು ಸಹ ಸಂಭ್ರಮಿಸಿದರು.

  ಕೇರಳ ಪೊಲೀಸರಿಂದ ವಿಚಾರಣೆ: ವಂಚನೆ ಆರೋಪದ ಬಗ್ಗೆ ಸನ್ನಿ ಲಿಯೋನ್ ಹೇಳಿಕೆಕೇರಳ ಪೊಲೀಸರಿಂದ ವಿಚಾರಣೆ: ವಂಚನೆ ಆರೋಪದ ಬಗ್ಗೆ ಸನ್ನಿ ಲಿಯೋನ್ ಹೇಳಿಕೆ

  ಸಾಮಾಜಿಕ ಜಾಲತಾಣದ ಮೂಲಕ ಸನ್ನಿ ಲಿಯೋನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ವಿಶೇಷ ಎಂದರೆ ಕರ್ನಾಟಕದ ಹಳ್ಳಿಯೊಂದರಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

  ಹಳ್ಳಿಯಲ್ಲಿ ಸನ್ನಿ ಲಿಯೋನ್ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗಿದೆ. ಸೀರೆಯಲ್ಲಿ ಮಿಂಚಿರುವ ಸನ್ನಿ ಲಿಯೋನ್ ಕಟೌಟ್ ಈಗ ಎಲ್ಲರ ಆಕರ್ಷಣೆಯಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಸನ್ನಿ ಲಿಯೋನ್ ಎಂದು ಬರೆಯುವ ಜೊತೆಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಕಟೌಟ್ ಗೆ ಹೂವಿನ ಹಾರವನ್ನು ಹಾಕಲಾಗಿದೆ.

  ಈ ಕಟೌಟ್ ಫೋಟೋವನ್ನು ನಟಿ ಸನ್ನಿ ಲಿಯೋನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸನ್ನಿ ಕನ್ನಡದಲ್ಲಿ ಇದುವರೆಗೂ ಕಾಣಿಸಿಕೊಂಡಿದ್ದು ಎರಡು ಹಾಡಿನಲ್ಲಿ ಮಾತ್ರ. ಆದರೂ ಕನ್ನಡದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ.

  ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರದಲ್ಲಿ ಸನ್ನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇನ್ನು ಘೋಷಣೆಯಾಗಲಿಲ್ಲ. ಸಿನಿಮಾ, ಸಾಮಾಜಿಕ ಕಾರ್ಯದ ಜೊತೆಗೆ ಸನ್ನಿ ಲಿಯೋನ್ ತನ್ನ ಕುಟುಂಬಕ್ಕು ಅಷ್ಟೆ ಸಮಯ ಕೊಡುತ್ತಾರೆ. ಮೂವರು ಮಕ್ಕಳನ್ನು ದತ್ತು ಪಡೆದಿರುವ ಸನ್ನಿಲಿಯೋನ್ ಸದ್ಯ ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದಾರೆ.

  English summary
  Actress Sunny Leone shares a cutout photo of her by fans in Karnataka village.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X