ಸ್ಯಾಂಡಲ್ ವುಡ್ ನಲ್ಲಿ ಐಟಂ ಬಾಗಿಲು ತೆಗೆದ ಶೇಷಮ್ಮ

By ಜೀವನರಸಿಕ

ಜೋಗಿ ಪ್ರೇಮ್ ಏನಾದ್ರೂ ಒಂದು ಪ್ರಯತ್ನ ಮಾಡ್ತಾನೇ ಇರ್ತಾರೆ. ಡೈರೆಕ್ಷನ್ ಬಿಟ್ರೆ ಸಿಂಗಿಂಗು, ಸಿಂಗಿಂಗ್ ಬಿಟ್ರೆ ಆಕ್ಟಿಂಗ್, ಆಕ್ಟಿಂಗ್ ಬಿಟ್ರೆ ಗಿಮಿಕ್ಕು. ಆದರೆ ಈಗ ಯಾವುದನ್ನೂ ಬಿಡದೆ ಮಾಡ್ತಿದ್ದಾರೆ ಜೋಗಿ ಪ್ರೇಮ್. ಕನ್ನಡಕ್ಕೆ ಬಾಲಿವುಡ್ ನಟಿಯರನ್ನ ಸಾಲು ಸಾಲಾಗಿ ಕರೆಸಿದ ಖ್ಯಾತಿ ರವಿಚಂದ್ರನ್, ಉಪೇಂದ್ರ ನಂತರ ಪ್ರೇಮ್ ಗೆ ಸಲ್ಲುತ್ತೆ.

ಜೋಗಿ ಪ್ರೇಮ್ ಈಗ ಹೊಸ ಅವತಾರಗಳಲ್ಲಿ ಹೊಸ ಹೊಸ ವಿಶೇಷತೆಗಳೊಂದಿಗೆ ಬರ್ತಿದ್ದಾರೆ. ಅದು 'ಡಿಕೆ' ಸಿನಿಮಾ ಮೂಲಕ. 'ಡಿ ಕೆ' ಅಂದ್ರೆ ಏನು ಅಂದ್ರೆ ಚಿತ್ರತಂಡದವ್ರು ಏನನ್ನೂ ಬಿಟ್ಟುಕೊಡಲ್ಲ. ಪ್ರೇಮ್ ಮಾತ್ರ ಡಿ ಕೆ ಅಂದ್ರೆ ಶಿವಕುಮಾರೂ ಅಲ್ವೋ ಸುರೇಶ್ ಅಲ್ವೋ ಗೊತ್ತಿಲ್ಲ. ಆದ್ರೆ ಇಲ್ಲಿ ಯಾರನ್ನೂ ಹರ್ಟ್ ಮಾಡಲ್ಲ ಅಂತಾರೆ. ಇದೊಂಥರಾ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿನೋಡಿಕೊಂಡಂಗೆ. [ಸ್ಯಾಂಡಲ್ ವುಡ್ ಗೆ ಹಾಟ್ ಬೆಡಗಿ ಸನ್ನಿ ಲಿಯೋನ್]

ಆದ್ರೆ ಡಿ ಕೆ ಚಿತ್ರದ ನಿರ್ಮಾಪಕಿ ರಕ್ಷಿತಾ ಫುಲ್ ಖುಷಿಯಲ್ಲಿ ಕಾಸು ಹಾಕ್ತಿದ್ದಾರೆ. ಯಾಕಂದ್ರೆ ಇಲ್ಲಿ ಪ್ರೇಮ್ ರನ್ನ ಸಖತ್ ಡಿಫ್ರೆಂಟಾಗಿ ತೋರಿಸೋ ಕಥೆ ಇಟ್ಕೊಂಡಿದ್ದಾರೆ ನಿರ್ದೇಶಕ ಉದಯಪ್ರಕಾಶ್. ಡಿಕೆ ಸಿನಿಮಾಗೆ ಸನ್ನಿ ಲಿಯೋನ್ ಅನ್ನೋ ಮಾದಕತಾರೆ ಬರ್ತಾರೆ ಅನ್ನೋದ್ರ ಜೊತೆಗೆ ಮತ್ತೊಂದಷ್ಟು ವಿಶೇಷತೆಗಳಿವೆ ಸ್ಲೈಡ್ ನಲ್ಲಿ ಸರಿಸಿ ನೋಡಿ.

ಹಾಟ್ ಹಾಟ್ ಸನ್ನಿ ಬೆಂಗಳೂರಿಗೆ

ಹಾಟ್ ಹಾಟ್ ಸನ್ನಿ ಬೆಂಗಳೂರಿಗೆ

ಮಾದಕ ಮೈಮಾಟದ ನೀಲಿ ಚಿತ್ರಗಳ ಪೋಲಿರಾಣಿ ಸನ್ನಿ ಲಿಯೋನ್ ಡಿ ಕೆ ಚಿತ್ರದಲ್ಲಿ ಐಟಂ ಡಾನ್ಸ್ ಮಾಡಲಿದ್ದಾರೆ. ಸನ್ನಿ ಐಟಂ ಡಾನ್ಸ್ ಮಾಡೋದೇನೂ ಬೇಡ, ಅವ್ರು ಡಾನ್ಸ್ ಮಾಡಿದ್ರೇನೇ ಅದು ಐಟಂ ಡಾನ್ಸ್ ಅಂತಿದ್ದಾರೆ ಪಡ್ಡೆಗಳು.

ಆಗಸ್ಟ್ 1,2,3ಕ್ಕೆ ಸನ್ನಿ ಡಾನ್ಸ್

ಆಗಸ್ಟ್ 1,2,3ಕ್ಕೆ ಸನ್ನಿ ಡಾನ್ಸ್

ಡಿ ಕೆ ಚಿತ್ರಕ್ಕೆ ಸನ್ನಿ ಲಿಯೋನ್ ಡಾನ್ಸ್ ಇರೋದು ಆಗಸ್ಟ್ ನ ಮೊದಲ ಮೂರು ದಿನ. ಈ ದಿನಗಳಲ್ಲಿ ಬೆಂಗಳೂರಿನ ಹೀಟು ಹೆಚ್ಚಾಗಲಿದೆ ಅಂತಿದ್ದಾರೆ ಗಾಂಧಿನಗರದ ಹವಾಮಾನ ವರದಿಗಾರರು.

ಸ್ವತಃ ಪ್ರೇಮ್ ಅಡ್ವಾನ್ಸ್ ಕೊಟ್ಟು ಬಂದಿದ್ದಾರೆ

ಸ್ವತಃ ಪ್ರೇಮ್ ಅಡ್ವಾನ್ಸ್ ಕೊಟ್ಟು ಬಂದಿದ್ದಾರೆ

ಸನ್ನಿ ಲಿಯೋನ್ಗೆ ಅಡ್ವಾನ್ಸ್ ಕೊಟ್ಟು ಬಂದಿದ್ದಾರಂತೆ ಗಿಮಿಕ್ ಕಿಂಗ್ ಜೋಗಿ ಪ್ರೇಮ್. ಇನ್ನೇನಿದ್ರೂ ಬೆಂಗಳೂರಿಗೆ ಬರೋ ಸನ್ನಿಯನ್ನ ನೋಡಿ ಮಂಡಿಗೆ ಮೆಲ್ಲೋದಷ್ಟೇ ಬಾಕಿ.

ಸನ್ನಿ ಐಟಂ ಸಾಂಗ್ ಗೆ ಪ್ರೇಮ್ ಸಾಹಿತ್ಯ

ಸನ್ನಿ ಐಟಂ ಸಾಂಗ್ ಗೆ ಪ್ರೇಮ್ ಸಾಹಿತ್ಯ

ಬಾಗಿಲು ತೆಗಿಯೇ ಸೇಸಮ್ಮ ಅಂತ ಶುರುವಾಗೋ ಲಿರಿಕ್ಸ್ ಗಳನ್ನ ಸ್ವತಃ ಪ್ರೇಮ್ ಸನ್ನಿಯ ಐಟಂ ಸಾಂಗ್ ಗಾಗಿ ಬರೆದಿದ್ದಾರಂತೆ. ಚಿತ್ರದಲ್ಲಿರೋ ಐದು ಹಾಡುಗಳಲ್ಲಿ ಈ ಹಾಡನ್ನ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆಯಂತೆ.

ಡಿ ಕೆ ಆದ್ರೆ ಶಿವಕುಮಾರಾ? ಗೊತ್ತಿಲ್ಲ

ಡಿ ಕೆ ಆದ್ರೆ ಶಿವಕುಮಾರಾ? ಗೊತ್ತಿಲ್ಲ

ಡಿಕೆ ಅಂತ ಹೆಸರಿಟ್ಟಿರೋ ಟೀಂ ಆಬ್ ಕಿ ಬಾರ್ ಮೇರಾ ಸರ್ಕಾರ್ ಅಂತಿದೆ. ಇನ್ನು ರಾ ಲವ್ ಸ್ಟೋರಿ ಅಂತ ಬೇರೆ ಬರೆದುಕೊಂಡಿದೆ. ರಾಜಕೀಯದಲ್ಲಿ ಲವ್ ಸ್ಟೋರೀನಾ? ಡಿಕೆಶಿ ಅವರದ್ದಾ ಅಂದ್ರೆ, ನೋ ನೋ ನಮಗ್ಗೊತ್ತಿಲ್ಲ ಅಂತಾರೆ ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್.

More from Filmibeat

English summary
Bollywood hottie Sunny Leone is all set to shake a leg in an item number for a forthcoming Kannada film 'DK', which is directed by Prem. Sunny making her Kannada debut with the item song in 'DK'. The song "Bagilu Tegeye Sheshamma..." (Open the door Sheshamma) picturised in August, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X