'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ': ಜಾತ್ರೆಯಲ್ಲಿ ಮಿಂಚಿದ ಮಾದಕ ನಟಿಯ ಬಳಗ

ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಕ್ರೇಜಿ ಅಭಿಮಾನಿಗಳಿದ್ದಾರೆ. ಸನ್ನಿ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಸಾಕಷ್ಟು ಅಭಿಮಾನಿ ಬಳಗಹೊಂದಿರುವ ಮಾದಕ ನಟಿ ಸನ್ನಿ ಹೆಸರಲ್ಲಿ ಮತ್ತೊಂದು ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಅದೂ ಕರ್ನಾಟಕದಲ್ಲಿ ಎನ್ನುವುದೆ ವಿಶೇಷ.

ಹೌದು, ಪಡ್ಡೆ ಹೈದರ ನಿದ್ದೆಗೆಡಿಸಿದ ಮಾದಕ ಬೆಡಗಿ ಸನ್ನಿ ಲಿಯೋನ್ ಹೆಸರಿನಲ್ಲಿ ರಾಯಚೂರಿನಲ್ಲಿ ಯುವಕ ಮಂಡಳಿಯೊಂದು ಸ್ಥಾಪನೆಯಾಗಿದೆ. ಸಿಂಧನೂರು ತಾಲ್ಲೂಕು ಹುಡಾ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಅಭಿಮಾನಿ ಮಂಡಳಿಗೆ 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ' ಎಂದು ಹೆಸರಿಟ್ಟುಕೊಂಡಿದ್ದಾರೆ.

'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ'ಯ ಫ್ಲೆಕ್ಸ್ ಆ ಊರಿನಲ್ಲೀಗ ರಾರಾಜಿಸುತ್ತಿದೆ. ಶ್ರೀಮತಿ ಸನ್ನಿ ಲಿಯೋನ್ ಅಭಿಮಾನಿಗಳು ಫ್ಲೆಕ್ಸ್ ನಲ್ಲಿ ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ.

Actress Sunny Leone Yuvaka Mandali in Raichur

'ಶ್ರೀಮತಿ ಸನ್ನಿಲಿಯೋನ್' ಗೌರವ ಸೂಚಕ ಪದ ಸಂಘದ ಹೆಸರಿನ ಆರಂಭದಲ್ಲಿ ಬಳಸಿದ್ದಲ್ಲದೆ, ಅದಕ್ಕೆ ತಕ್ಕಂತೆ ನಟಿಯ ಚಿತ್ರವನ್ನು ಫ್ಲೆಕ್ಸ್ ನಲ್ಲಿ ಮುದ್ರಿಸಿಕೊಂಡಿರುವುದು ವಿಶೇಷ. ಗ್ರಾಮದಲ್ಲಿ ಜನವರಿ 10 ರಿಂದ 13 ರ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಈ ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆಯುವಂತಾಗಿದೆ. ಸಂಘವನ್ನು ನೋಂದಣಿ ಮಾಡಿರುವ ಬಗ್ಗೆ‌ ಮಾಹಿತಿ ಸಿಕ್ಕಿಲ್ಲ. ಸಂಘದ ಉದ್ದೇಶವನ್ನು ಪದಾಧಿಕಾರಿಗಳಿಂದ ಈಗ ತಿಳಿದುಕೊಳ್ಳಬೇಕಿದೆ.

More from Filmibeat

English summary
Bollywood Actress Sunny Leone fans creates Sunny Leone Yuvaka Mandali in Raichur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X