ಸ್ಯಾಂಡಲ್‌ವುಡ್ ನಟಿಯ ಪಾಲಿಗೆ ವಿಲನ್ ಆದ ದಂತ ವೈದ್ಯೆ

ಸ್ಯಾಂಡಲ್‌ವುಡ್ ನಟಿ ಚೇತನಾ ರಾಜ್ ತೂಕ ಕಳೆದುಕೊಳ್ಳುವ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಪ್ರಾಣವನ್ನೇ ಬಿಟ್ಟ ಘಟನೆ ಇನ್ನೂ ಹಸಿರಾಗಿರುವಾಗ ಮತ್ತೊಬ್ಬ ನಟಿಯೊಬ್ಬರು ವೈದ್ಯೆಯೊಬ್ಬರ ದೆಸೆಯಿಂದ ಮುಖದ ಅಂದ ಹಾಳು ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

'ಎಫ್‌ಐಆರ್', '6 ಟು 6' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಸ್ವಾತಿ ಸತೀಶ್ ಹಲ್ಲಿನ ಚಿಕಿತ್ಸೆಗೆಂದು ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು.

ರೂಟ್ ಕೆನಲ್‌ ಸ್ಪೆಷಲಿಸ್ಟ್ ಎಂದು ದಂತ ವೈದ್ಯೆಯೊಬ್ಬರ ಬಳಿ ಚಿಕಿತ್ಸೆ ಮಾಡಿಸಿದ್ದರು. ಚಿಕಿತ್ಸೆ ಮುಗಿದ ಬಳಿಕ ಅವರ ದವಡೆ ಊದಿಕೊಂಡಿತ್ತು. ಇನ್ನೆರಡು ದಿನದಲ್ಲಿ ಊತ ಕಡಿಮೆ ಆಗುತ್ತದೆ ಎಂದು ವೈದ್ಯರು ಹೇಳಿದ್ದರು ಆದರೆ ಚಿಕಿತ್ಸೆ ಪಡೆದು 20 ದಿನವಾದರೂ ಇನ್ನೂ ಊತ ಕಡಿಮೆ ಆಗಿಲ್ಲ.

Actress Swathi Sathishs Dental Treatment Goes Wrong Her Face Changes

ಇಂಟರ್ನೆಟ್‌ನಲ್ಲಿ ಫೈವ್ ಸ್ಟಾರ್ ಇರುವುದು ನೋಡಿ ಆ ಆಸ್ಪತ್ರೆಯನ್ನು ಚಿಕಿತ್ಸೆಗೆಂದು ಹುಡುಕಿಕೊಂಡು ಹೋಗಿದ್ದರಂತೆ ನಟಿ. ರೂಟ್ ಕೆನಲ್‌ಗೆ ಭರ್ಜರಿಯಾಗಿಯೇ ಹಣ ಕಿತ್ತ ಆಸ್ಪತ್ರೆ ತನ್ನ ಮುಖವನ್ನೂ ವಿರೂಪ ಮಾಡಿಬಿಟ್ಟಿದೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ.

ರೂಟ್ ಕೆನಲ್ ಮಾಡುವ ಮೊದಲು ವಸಡಿಗೆ ಅನಸ್ತೇಶಿಯಾ ನೀಡಬೇಕಿತ್ತು. ಆದರೆ ಅನಸ್ತೇಶಿಯಾ ಬದಲಿಗೆ ಸಾಲಿಸೈನಿಕ್ ಆಸಿಡ್ ನೀಡಿದ್ದಾರೆ ಇದರಿಂದ ಬಾಯಿಯೊಳಗಿನ ಅರ್ಧ ಭಾಗ ಬರ್ನ್ ಆಗಿದೆ. ಚಿಕಿತ್ಸೆ ಮಾಡಿದ ಎರಡು ಗಂಟೆಯಲ್ಲಿ ಊತ ಕಡಿಮೆ ಆಗುತ್ತೆ ಎಂದರೆ ನಂತರ ನಾಲ್ಕು ಗಂಟೆ ಎಂದರು, ಬಳಿಕ ಎರಡು ದಿನ, ನಾಲ್ಕು ದಿನ ಹೀಗೆ ಹೇಳುತ್ತಾ ಹೋದರು. ಈಗ ಚಿಕಿತ್ಸೆ ಮುಗಿದು 20 ದಿನಗಳಾದರು ಊತ ಕಡಿಮೆ ಆಗಿಲ್ಲ. ಆ ನಂತರ ವೈದ್ಯೆಗೆ ಕರೆ ಮಾಡಿದರೆ ತಾನು ಮುಂಬೈಗೆ ತೆರಳಿರುವುದಾಗಿ ಹೇಳಿದರು ಎಂದಿದ್ದಾರೆ ನಟಿ ಸ್ವಾತಿ.

ಆ ನಂತರ ನೋವು ತಡೆದುಕೊಳ್ಳಲಾರದೆ ನಾನು ಬೇರೆ ಆಸ್ಪತ್ರೆಗೆ ತೆರಳಿದೆ. ಅಲ್ಲಿ ಟೆಸ್ಟ್ ಮಾಡಿಸಿದಾಗ ನನಗೆ ಅನಸ್ತೇಶಿಯಾ ಬದಲು ಸಾಲಿಸೈನಿಕ್ ಆಸಿಡ್ ನೀಡಿರುವುದು ಗೊತ್ತಾಯಿತು. ನಂತರ ಪ್ರಶ್ನೆ ಮಾಡಿದರೆ ಈಗ ಓರಿಕ್ಸ್‌ ಡೆಂಟಲ್‌ ವೈದ್ಯೆ ತಪ್ಪಿನಿಂದ ಜಾರಿಕೊಳ್ಳುತ್ತಿದ್ದಾರೆ. ಇದರಲ್ಲಿ ನಮ್ಮ ತಪ್ಪೇನು ಇಲ್ಲ, ನಿಮ್ಮ ತ್ವಚೆಯೇ ಬಹಳ ಸೂಕ್ಷ್ಮವಾಗಿದೆ ಎಂದು ಹೇಳುತ್ತಿದ್ದಾರೆ. ರೋಗಿಗಳಿಗೆ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪರವಾನಗಿ ರದ್ದು ಮಾಡಬೇಕು, ಆಸ್ಪತ್ರೆಗಳನ್ನು ಬೀಗ ಹಾಕಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ ವಿರೂಪವಾಗಿರುವ ಕಾರಣ ಸಿನಿಮಾಗಳಲ್ಲಿ ನಟಿಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ನಟಿ. ತಮ್ಮ ಮುಖ ಮೊದಲಿನಂತಾಗುವುದೋ ಇಲ್ಲವೋ ಎಂಬ ಒದ್ದಾಟ ಅವರದ್ದು. ಇದೀಗ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾತಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada movie actress Swathi Sathish's dental treatment goes wrong. her face changes due to treatment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X