ಅಲ್ಲು ಅರ್ಜುನ್ ಚಿತ್ರದ ಮೂಲಕ ಟಾಲಿವುಡ್ ಗೆ ಮರಳಿದ ಟಬು
ಬಾಲಿವುಡ್ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಟಬು ಈಗ ಟಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅಲ್ಲು ಅರ್ಜುನ್ ಚಿತ್ರದಲ್ಲಿ ಟಬು ನಟಿಸುತ್ತಿದ್ದಾರೆ.
ಹಾಗೆ ನೋಡಿದರೆ, ಟಬು 1991ರಲ್ಲಿಯೇ ಟಾಲಿವುಡ್ ಸಿನಿಮಾ ಮಾಡಿದ್ದರು. ವೆಂಕಟೇಶ್ ನಟನೆಯ 'ಕೂಲಿ ನಂಬರ್ 1' ಚಿತ್ರದಲ್ಲಿ ಟಬು ನಟಿಸಿದ್ದರು. ಆ ಬಳಿಕ ಬಾಲಕೃಷ್ಣ, ನಾಗಾರ್ಜುನ ಹಾಗೂ ಚಿರಂಜೀವಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ, 2008 ಬಂದ 'ಪಾಂಡವುಡು' ಅವರ ಕೊನೆಯ ತೆಲುಗು ಸಿನಿಮಾ ಆಗಿತ್ತು.
ಆದರೆ, ಈಗ 11 ವರ್ಷಗಳ ಬಳಿಕ ಮತ್ತೆ ತೆಲುಗು ಸಿನಿಮಾದಲ್ಲಿ ಟಬು ನಟಿಸುತ್ತಿದ್ದಾರೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾದಲ್ಲಿ ಟಬು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿತ್ತಿದ್ದಾರೆ.

ಸದ್ಯಕ್ಕೆ, ಈ ಚಿತ್ರವನ್ನು 'AA 19' ಎಂದು ಕರೆಯಲಾಗುತ್ತಿದೆ. ಒಂದು ಸಣ್ಣ ವಿಡಿಯೋ ಮೂಲಕ ಟಬು ಆಗಮನದ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದೆ. ಅಂದಹಾಗೆ, ಈ ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಟಬು ಸದ್ಯ ಸೈಫ್ ಅಲಿ ಖಾನ್ ಜೊತೆಗೆ 'ಜವಾನಿ ಜಾನೆಮನ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮುಂದಿನ ಬಿಡುಗಡೆಯ ಸಿನಿಮಾವಾಗಿದೆ.


Click it and Unblock the Notifications











