TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
'ಬಾಹುಬಲಿ-3' ಯಾಕೆ ಮಾಡಲ್ಲ ಅಂತ ಬಹಿರಂಗ ಪಡಿಸಿದ ತಮನ್ನಾ.!
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮೆಗಾ ಸಿನಿಮಾ ಬಾಹುಬಲಿ. ಎರಡು ಭಾಗಗಳಾಗಿ ಬಂದಿದ್ದ ಈ ಸಿನಿಮಾ ಭಾರತೀಯ ಹಿರಿಮೆಯನ್ನ ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ ಕೀರ್ತಿ ಪಡೆದುಕೊಂಡಿದೆ.
'ಬಾಹುಬಲಿ ದಿ ಬಿಗಿನಿಂಗ್' ಮತ್ತು 'ಬಾಹುಬಲಿ ದಿ ಕನ್ ಕ್ಲೂಷನ್' ಎಂದು ಎರಡು ಭಾಗಗಳಲ್ಲಿ ರಾಜಮೌಳಿ ಕಥೆ ಮುಗಿಸಿಬಿಟ್ಟಿದ್ದಾರೆ. ಆದ್ರೆ, ಎರಡನೇ ಭಾಗ ತೆರೆಕಂಡು ಯಶಸ್ಸಾದ ನಂತರ ಬಾಹುಬಲಿ 3 ಮಾಡುವ ಬಗ್ಗೆ ಮಾತನಾಡಿ ನಿರ್ದೇಶಕ ರಾಜಮೌಳಿ ಚಿತ್ರ ಜಗತ್ತಿನಲ್ಲಿ ಕುತೂಹಲ ಮೂಡಿಸಿದ್ದರು.
'ಬಾಹುಬಲಿ-3' ಆಫರ್ ಗೆ ಪ್ರಭಾಸ್ ಕೊಟ್ಟ ಉತ್ತರ ಕೇಳಿ ರಾಣಾ ಕಂಗಾಲು.!
ವಿಜಯೇಂದ್ರ ಪ್ರಸಾದ್ ಕಥೆ ಮಾಡಿದ್ರೆ ಖಂಡಿತಾ ಬಾಹುಬಲಿ 3 ಮಾಡೋದಾಗಿ ಹೇಳಿ ಸಂಚಲನ ಸೃಷ್ಟಿಸಿದರು. ಆದ್ರೆ, ಮೂರನೇ ಭಾಗದ ಕಥೆ ಸಿದ್ಧವಾಗುತ್ತಾ.? ರಾಜಮೌಳಿ ತಂದೆ ಏನು ನಿರ್ಧಾರ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಟ್, ಈಗ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ತಮನ್ನಾ ಈ ಬಗ್ಗೆ ಮಾತನಾಡಿದ್ದು, 'ಬಾಹುಬಲಿ-3' ಬರಲ್ಲ ಎಂದು ಕಾರಣ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ.....
ಎಲ್ಲಿಂದ ಆರಂಭಿಸುತ್ತಾರೆ
ಬಾಹುಬಲಿ ದಿ ಬಿಗಿನಿಂಗ್ ಚಿತ್ರದಲ್ಲಿ ಕಥೆ ಆರಂಭವಾಗಿತ್ತು. ಅದಕ್ಕೆ ಕನ್ ಕ್ಲೂಷನ್ ನಲ್ಲಿ ಉತ್ತರ ಸಿಕ್ಕಿದೆ. ಪಾರ್ಟ್ 2 ಚಿತ್ರದಲ್ಲಿ ಸಿನಿಮಾ ಸುಖಾಂತ್ಯ ಕಂಡಿತ್ತು. ಅಲ್ಲಿಗೆ ಬಾಹುಬಲಿ ಕಥೆಅಂತ್ಯವಾಗಿತ್ತು. ಆದ್ರೆ, ಪ್ರೇಕ್ಷಕರು ಬೇಡಿಕೆ ಇಟ್ಟಿದ್ದಾರೆ. ಮೂರನೇ ಭಾಗ ಬರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮನ್ನಾ ಸ್ಪಷ್ಟನೆ ನೀಡಿದ್ದಾರೆ.
'ಬಾಹುಬಲಿ-3' ಬಗ್ಗೆ ರಾಜಮೌಳಿ ಚಿಂತನೆ: ಕಥೆ ಏನಿರಬಹುದು?
ಬಾಹುಬಲಿ 3 ಆರಂಭವಾಗಿಲ್ಲ ಎಂದು ನಿರಾಸೆಯಾಗಿಲ್ಲ
ಎಲ್ಲೋ ಒಂದು ಕಡೆ ಬಾಹುಬಲಿ ಮೂರನೇ ಭಾಗ ಆರಂಭವಾಗುತ್ತೆ ಎಂದೇ ಹೇಳಲಾಗುತ್ತಿತ್ತು. ಆದ್ರೆ, ಆ ಬಗ್ಗೆ ಎಲ್ಲಿಯೂ ಸ್ಪಷ್ಟನೆ ಸಿಕ್ಕರಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ 'ಬಾಹುಬಲಿ 3 ಆರಂಭವಾಗಿಲ್ಲ ಎಂದು ನನಗೆ ನಿರಾಸೆಯಾಗಿಲ್ಲ. ಯಾಕಂದ್ರೆ ನಿರ್ದೇಶಕರು ಸಿನಿಮಾ ಮಾಡುವಾಗಲೇ ಎರಡು ಭಾಗವೆಂದು ನಿರ್ಧರಿಸಿದ್ದರು. ಅದರಂತೆ ಕಥೆ ಮುಗಿಸಿದ್ದಾರೆ. ಮೂರನೇ ಭಾಗದ ಮಾತೆ ಇಲ್ಲಿ ಬರಲ್ಲ'' ಎಂದು ಹೇಳಿದ್ದಾರೆ.
'ಬಾಹುಬಲಿ' ಚಿತ್ರದ್ದು ದಾಖಲೆನೇ ಅಲ್ಲ: ಈ ಚಿತ್ರ 5000 ಕೋಟಿ ಗಳಿಸಿದೆಯಂತೆ.!
ಒಂದು ವೇಳೆ ಮೂರನೇ ಭಾಗ ಬಂದ್ರೆ.....
ಬಾಹುಬಲಿ ಮೊದಲ ಭಾಗದಲ್ಲಿ ತಮನ್ನಾ ಪಾತ್ರ ದೊಡ್ಡದಾಗಿತ್ತು. ಪ್ರಭಾಸ್ ನಂತರ ತಮನ್ನಾ ಪಾತ್ರವೇ ಆಕರ್ಷಣೆಯಾಗಿತ್ತು. ಎರಡನೇ ಭಾಗದಲ್ಲಿ ತಮನ್ನಾ ಪಾತ್ರ ಕಾಣಿಸಲೇ ಇಲ್ಲ. ಎಲ್ಲೋ ಒಂದು ಸನ್ನಿವೇಶದಲ್ಲಿ ಬಂದು ಹೋಗಿದ್ದು ಮಾತ್ರ ನೆನಪು ಮತ್ತೆ ಕ್ಲೈಮ್ಯಾಕ್ಸ್ ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದರು. ಬಹುಶಃ ಪಾರ್ಟ್ 3 ಬಂದ್ರೆ, ತಮನ್ನಾ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚು ನೀಡಬಹುದು.
'ಬಾಹುಬಲಿ'ಯ 1500 ಕೋಟಿ ದಾಖಲೆ ಉಡೀಸ್.!
'ಬಾಹುಬಲಿ' ನಂತರ 'ಸೈರಾ'
ಬಾಹುಬಲಿ ನಂತರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಚಿರಂಜೀವಿ ನಾಯಕನಾಗಿರುವ ಈ ಸಿನಿಮಾದಲ್ಲಿ ಸುದೀಪ್, ವಿಜಯ ಸೇತುಪತಿ, ಅಮಿತಾಬ್ ಬಚ್ಚನ್, ನಯನತಾರ ಸೇರಿದಂತೆ ಬಹುದೊಡ್ಡ ತಾರಬಳಗವಿದೆ. ಇದು ಮೆಗಾಸ್ಟರ್ ಅಭಿನಯಿಸುತ್ತಿರುವ 151ನೇ ಸಿನಿಮಾ. ರಾಮಚ ಚರಣ್ ತೇಜ ನಿರ್ಮಾಣ ಮಾಡುತ್ತಿದ್ದಾರೆ.