ತೆಲುಗಿನ ಒಂದೇ ಸಿನಿಮಾದಲ್ಲಿ ಕನ್ನಡದ ಇಬ್ಬರು ನಟಿಯರು
ಕನ್ನಡ ನಟಿಯರ ಟಾಲಿವುಡ್ ಪ್ರವೇಶ ಹೆಚ್ಚಾಗುತ್ತಿದೆ. ಸ್ಯಾಂಡಲ್ ವುಡ್ ನ ಇಬ್ಬರು ನಟಿಯರು ಈಗ ತೆಲುಗಿನ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರವಿ ತೇಜಾ ನಟನೆಯ 'ಡಿಸ್ಕೋ ರಾಜ' ಸಿನಿಮಾದಲ್ಲಿ ನಟಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾಗೆ ಈಗ ಮತ್ತೊಬ್ಬ ನಾಯಕಿಯ ಆಯ್ಕೆ ಆಗಿದೆ. ವಿಶೇಷ ಅಂದರೆ, ಆಕೆಯೂ ಕೂಡ ಕನ್ನಡದವರೇ.
'ವಜ್ರಕಾಯ' ಸಿನಿಮಾದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದ, ನಭಾ ನಟೇಶ್ ಈಗ ತೆಲುಗು ನಲ್ಲಿ ಫೇಮಸ್ ಆಗಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಿನಿಮಾದ ಮೂಲಕ ನಭಾ ಸೌಂಡ್ ಮಾಡುತ್ತಿದ್ದಾರೆ.

ಆ ಸಿನಿಮಾದ ಬಿಡುಗಡೆಗೆ ಮುಂಚೆಯೇ 'ಡಿಸ್ಕೋ ರಾಜ' ಸಿನಿಮಾಗೆ ಸಹಿ ಹಾಕಿದ್ದಾರೆ. ತೆಲುಗಿನ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಸುಂದರಿಯರು ಒಂದಾಗಿದ್ದಾರೆ.
'ಡಿಸ್ಕೋ ರಾಜ' ಸಿನಿಮಾದ ಮತ್ತೊಬ್ಬ ನಾಯಕಿಯಾಗಿ ಆರ್ ಎಕ್ಸ್ ಸುಂದರಿ ಪಾಯಲ್ ರಜಪೂತ್ ಕಾಣಿಸಿಕೊಂಡಿದ್ದಾರೆ.
English summary
Actress Tanya Hope and Nabha Natesh will be playing lead role in Disco Raja movie.


Click it and Unblock the Notifications