For Quick Alerts
  ALLOW NOTIFICATIONS  
  For Daily Alerts

  'ಬಸಣ್ಣಿ' ಬೆಡಗಿ ತಾನ್ಯ ಹೋಪ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್?

  |

  ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್ ಆಗುವುದು ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. 24 ಗಂಟೆಗಳ ಬಳಿಕ ತಮ್ಮ ಖಾತೆಯನ್ನು ವಾಪಸ್ ಪಡೆಯುವಲ್ಲಿ ಯಶಸ್ಸಾಗಿದ್ದರು.

  ಇದೀಗ, ಕನ್ನಡ ನಟಿ ತಾನ್ಯ ಹೋಪ್ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎನ್ನಲಾಗಿದೆ. ನಟಿಯ ಇನ್ಸ್ಟಾ ಖಾತೆಯ ಪ್ರೋಫೈಲ್ ಫೋಟೋ ಇದ್ದಕ್ಕಿದ್ದಂತೆ ಬದಲಾಗಿದೆ. ಇದನ್ನು ನೆಟ್ಟಿಗರು ಗಮನಿಸಿದ್ದಾರೆ. ಆದರೆ, ಈ ಬಗ್ಗೆ ನಟಿಗೆ ಸುಳಿವು ಸಿಕ್ಕಿಲ್ಲ.

  ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌

  ಇದಕ್ಕೂ ಮುಂಚೆ ಕನ್ನಡದ ಹಲವು ಸೆಲೆಬ್ರಿಟಿಗಳ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ವಸಿಷ್ಠ ಸಿಂಹ, ಮಾನ್ವಿತಾ ಕಾಮತ್, ಆಶಿಕಾ ರಂಗನಾಥ್, ಚಂದನ್ ಶೆಟ್ಟಿ ಅವರ ಇನ್ಸ್ಟಾ ಖಾತೆ ಸಹ ಹ್ಯಾಕ್ ಮಾಡಿದ್ದರು. ಬಳಿಕ, ಸೈಬರ್ ಟೀಂನ ಸಹಾಯದಿಂದ ಖಾತೆ ಸರಿ ಹೋಗಿತ್ತು.

  ಕೆಲವು ಖಾಸಗಿ ಲಿಂಕ್‌ಗಳನ್ನು ಕ್ಲಿಕ್ ಮಾಡಿದ್ರೆ ಈ ರೀತಿ ಹ್ಯಾಕ್ ಆಗುವುದು ಸಹಜ ಎಂದು ಸೈಬರ್ ತಜ್ಞರು ಹಲವು ಕಡೆ ತಿಳಿಸಿದ್ದಾರೆ. ಈ ಕಡೆ ತಾನ್ಯ ಹೋಪ್ ಖಾತೆಯ ಮೇಲೆ ಅನುಮಾನ ಉಂಟಾಗಿದ್ದು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

  ವರಲಕ್ಷ್ಮಿ ಶರತ್ ಕುಮಾರ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆ ಹ್ಯಾಕ್ವರಲಕ್ಷ್ಮಿ ಶರತ್ ಕುಮಾರ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆ ಹ್ಯಾಕ್

  ದಿಯಾ ನಂತರ ಇದೊಂದು ಅದ್ಬುತವಾದ ಕಥೆ | Prithvi Amber | Filmibeat Kannada

  ದರ್ಶನ್ ನಟನೆಯ 'ಯಜಮಾನ' ಸಿನಿಮಾದಲ್ಲಿ 'ಬಸಣ್ಣಿ ಬಾ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ್ದ ನಟಿ ನಂತರ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಅಮರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲೂ ತಾನ್ಯ ಅಭಿನಯಿಸಿದ್ದಾರೆ.

  English summary
  South actress Tanya Hope Instagram Account Got Hacked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X