»   » ಚಿತ್ರಗಳಲ್ಲಿ ತಾಪಸಿ ಪನ್ನು ರೂಪರಾಶಿ ಅನಾವರಣ

ಚಿತ್ರಗಳಲ್ಲಿ ತಾಪಸಿ ಪನ್ನು ರೂಪರಾಶಿ ಅನಾವರಣ

By: ಉದಯರವಿ
Subscribe to Filmibeat Kannada

ದಕ್ಷಿಣದ ತಾರೆಗಳಲ್ಲಿ ದೆಹಲಿ ಸುಂದರಿ ತಾಪಸಿ ತಮ್ಮದೇ ಆದಂತಹ ಒನಪು ವೈಯಾರದ ಪಾತ್ರಗಳಿಗೆ ಹೆಸರಾದವರು. ಸದ್ಯಕ್ಕೆ ತೆಲುಗು, ತಮಿಳಿನಲ್ಲಿ ಬಿಜಿಯಾಗಿರುವ ಈ ತಾರೆ ಕನ್ನಡಕ್ಕೆ ಎಂಟ್ರಿ ಕೊಡ್ತೀನಿ ಎಂದು ಹೇಳುತ್ತಲೇ ಇದ್ದಾರೆ. ಆದರೆ ಯಾವಾಗ ಎಂಬುದು ಮಾತ್ರ ಇನ್ನೂ ಸ್ಪಷ್ಟತೆ ಇಲ್ಲ.

ಬೆಳ್ಳಿತೆರೆಗೆ ಅಡಿಯಿಡುವುದಕ್ಕೂ ಮುನ್ನ ಮಾಡೆಲಿಂಗ್ ಜಗತ್ತಿನಲ್ಲಿ ಹಂಸದಂತೆ ಹೆಜ್ಜೆ ಹಾಕುತ್ತಿದ್ದರು. ತಾಪಸಿ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಹೇಳಿಕೊಳ್ಳುವಷ್ಟು ಹಿಟ್ ಆಗದಿದ್ದರೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಷ್ಟು ಗ್ಲಾಮರ್ ಮಾತ್ರ ಇದ್ದೇ ಇದೆ.

ಪಂಜಾಬಿ ಮೂಲದ ಈ ಬೆಡಗಿ ಕುಟುಂಬ ನೆಲೆನಿಂತಿರುವುದು ದೆಹಲಿಯಲ್ಲಿ. ಇಂಜಿನಿಯರಿಂ ಪದವಿ ಪಡೆದಿರುವ ತಾಪಸಿ ಆರಂಭದಲ್ಲಿ ಸಾಫ್ಟ್ ವೇರ್ ಪ್ರೊಫೆಷನಲ್ ಆಗಿ ಬಳಿಕ ಮಾಡೆಲಿಂಗ್ ಕ್ಷೇತ್ರದ ಕಡೆಗೆ ಹೆಜ್ಜೆ ಹಾಕಿದವರು. ಅಲ್ಲಿಂದ ಬಣ್ಣದ ಜಗತ್ತಿಗೆ ಅಡಿಯಿಟ್ಟರು.

ತಾಪಸಿ ಅಂದಚೆಂದಗಳು ವರ್ಣಿಸಲಸಾಧ್ಯ

ಕೆಂಪು ಬಣ್ಣದ ಡ್ರೆಸ್ ನಲ್ಲಿ ತಾಪಸಿ ಅಂದಚೆಂದಗಳು ವರ್ಣಿಸಲು ಸಾಧ್ಯವಿಲ್ಲ ಬಿಡಿ. ರೆಡ್ ಎಫ್ ಎಂ ವಾಹಿನಿಯ ಬ್ರ್ಯಾಂಡ್ ಅಂಬಾಸಿಡರ್ ಆದಾಗಿನಿಂದಲೂ ಕೆಂಪು ಅವರ ನೆಚ್ಚಿನ ಬಣ್ಣ.

ಫೆಮೀನಾ ಮಿಸ್ ಬ್ಯೂಟಿಫುಲ್ ಸ್ಕಿನ್

ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ 'ಫೆಮೀನಾ ಮಿಸ್ ಬ್ಯೂಟಿಫುಲ್ ಸ್ಕಿನ್' ಹಾಗೂ 'ಫೆಮೀನಾ ಮಿಸ್ ಫ್ರೆಶ್ ಫೇಸ್ ಪಾಂಟಲೂನ್ಸ್' ಎಂಬೆರಡು ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸಂಭಾವನೆ ದಿಢೀರ್ ಎಂದು ಏರಿಕೆ

ತೆಲುಗಿನಲ್ಲಿ ಈಕೆ ಅಭಿನಯಿಸಿದ 'ಮಿ.ಪರ್ಫೆಕ್ಟ್ ' ಸಕ್ಸಸ್ ಆದ ಬಳಿಕ ತಾಪಸಿ ಸಂಭಾವನೆ ದಿಢೀರ್ ಎಂದು ಏರಿಕೆಯಾಗಿತ್ತು.

ರು.60 ಲಕ್ಷ ಎಣಿಸುವ ತಾಪಸಿ

ರು.38 ರಿಂದ ರು.42 ಲಕ್ಷಕ್ಕೆ ಹೊಂದಿಕೊಳ್ಳುತ್ತಿದ್ದ ತಾಪಸಿ ಏಕ್ ದಮ್ ರು.60 ಲಕ್ಷಕ್ಕೆ ಜಿಗಿದರು. ಸಂಭಾವನೆ ರೂಪದಲ್ಲಿ ರು.50 ಲಕ್ಷ ತೆಗೆದುಕೊಂಡರೆ ಉಳಿದ ರು.10 ಲಕ್ಷ ಹೋಟೆಲ್ ಖರ್ಚುವೆಚ್ಚಕ್ಕೆ ಸಮರ್ಪಯಾಮಿಯಂತೆ.

ತಾಪಸಿ ಸೌಂದರ್ಯ ರಹಸ್ಯ

ಜಿಮ್ಮು ಗಿಮ್ಮು ಕಸರತ್ತು ಅಂತ ಏನೂ ಮಾಡದಿದ್ದರೂ ತಮ್ಮ ಸೊಂಟದ ಸುತ್ತಳತೆಯಲ್ಲಿ ಮಾತ್ರ ಬಳ್ಳಿಯಷ್ಟೂ ಬದಲಾವಣೆ ಆಗಿಲ್ಲ.

ಓಡಾಟವೇ ತಾಪಸಿ ಸೌಂದರ್ಯ ಗುಟ್ಟು

ಫಿಟ್ ನೆಸ್ ವಿಚಾರದಲ್ಲಿ ತಾಪಸಿ ಪರ್ಫೆಕ್ಟ್. ಮುಂಬೈನಿಂದ ಕೇರಳಕ್ಕೆ ಅಲ್ಲಿಂದ ಪಾಂಡಿಚೆರಿ, ಬಾದಾಮಿ, ಗೋವಾ ಎಂದು ಜೆಟ್ ಸ್ಪೀಡ್‌ನಲ್ಲಿ ಹಾರಾಡುವುದೇ ಇದಕ್ಕೆ ಕಾರಣ ಎನ್ನುತ್ತಾರೆ. ಇದೇ ತಮ್ಮ ಫಿಟ್ ನೆಸ್ ಮಂತ್ರ , ಎಲ್ಲಾ ಪ್ರಯಾಣದ ಮಹಿಮೆ ಎನ್ನುತ್ತಾರೆ ಇಪ್ಪತ್ತೈದರ ಪೆಣ್ಣು ತಾಪಸಿ.

ಬಿಕಿನಿಯಲ್ಲಿ ತಾಪಸಿ ಮೈಮಾಟ

ಬಿಕಿನಿ ಬ್ಲೌಜ್ ನಲ್ಲಿ ತಾಪಸಿ ಮೈಮಾಟದ ಅಂದಚೆಂದ ದುಪ್ಪಟ್ಟು ಎನ್ನುತ್ತಾರೆ ಅವರ ಅಭಿಮಾನಿಗಳು. ಗ್ರೀನ್ ಕಲರ್ ಔಟ್ ಫಿಟ್ ನಲ್ಲಿ ಅವರ ಸೌಂದರ್ಯಕ್ಕೆ ಸಾಟಿಯುಂಟೇ?

English summary
New Delhi-based model Taapsee Pannu became an actress with K Raghavendra Rao's romantic musical Jhummandi Naadam in 2010. This software professional-turned-model has come a long way and become one of the most sought after actresses in Tollywood. In a short span of five years, she has one Hindi, three Tamil and nine Telugu movies for her credit. Thanks to the glamorous expression of this oomph girl.
Please Wait while comments are loading...