ಸರ್ಜಾ - ಶ್ರುತಿ ಗಲಾಟೆ ಬಗ್ಗೆ ತಾರಾ ಮಾತು : ಯಾರ ಪರ ನಿಂತರು ಈ ನಟಿ?

ಸಿನಿಮಾಗಳಲ್ಲಿ ಶಾಂತವಾಗಿದ್ದ ನಟಿ ಶ್ರುತಿ ಹರಿಹರನ್ ಈಗ ಕೋಪಗೊಂಡಿದ್ದಾರೆ. ತಮ್ಮ ಜೊತೆಗೆ ನಟ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಶೃತಿ ಹರಿಹರನ್ ಆರೋಪ ಮಾಡಿದ್ದಾರೆ.

ಈಗಾಗಲೇ ಈ ಘಟನೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಿರ್ಮಾಪಕ ಮುನಿರತ್ನ, ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೆಗೌಡ ಸೇರಿದಂತೆ ಅನೇಕರು ಈ ಘಟನೆಯ ಬಗ್ಗೆ ಮಾತನಾಡಿದ್ದು, ಅರ್ಜುನ್ ಸರ್ಜಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದರು.

ಈಗ ನಟಿ ತಾರ ಅನುರಾಧ ಈ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷ ಕಳೆದಿರುವ ಅವರು ಮೀ ಟೂ ಬಗ್ಗೆ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಅರ್ಜುನ್​ ಸರ್ಜಾ ಒಳ್ಳೆಯ, ಸಭ್ಯ ಮನುಷ್ಯ

ಅರ್ಜುನ್​ ಸರ್ಜಾ ಒಳ್ಳೆಯ, ಸಭ್ಯ ಮನುಷ್ಯ

''ಅರ್ಜುನ್​ ಸರ್ಜಾ ಅವರ ಜೊತೆಗೆ ನಾನು 'ಪ್ರೇಮಾಗ್ನಿ' ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ.'' ಎಂದು ನಟ ಅರ್ಜುನ್ ಸರ್ಜಾ ಪರ ನಟಿ ತಾರಾ ಬ್ಯಾಟಿಂಗ್ ಮಾಡಿದ್ದಾರೆ.

ನನಗೆ ಕೆಟ್ಟ ಅನುಭವ ಆಗಿಲ್ಲ

ನನಗೆ ಕೆಟ್ಟ ಅನುಭವ ಆಗಿಲ್ಲ

''ಚಿತ್ರರಂಗದಲ್ಲಿ ಮೊದಲು ಹೀಗೆಲ್ಲ ಇರಲಿಲ್ಲ. ನಾವು ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದೆವು. ನಾನಂತೂ ಹಲವು ಅತ್ಯಾಚಾರದ ದೃಶ್ಯಗಳಲ್ಲಿ ನಟಿಸಿದ್ದೇನೆ. ಒಂದು ದಿನವೂ ನನಗೆ ಯಾರ ಕಡೆಯಿಂದ ಕೆಟ್ಟ ಅನುಭವ ಆಗಿಲ್ಲ'' - ತಾರಾ ಅನುರಾಧ, ನಟಿ

ಶ್ರುತಿ ಹರಿಹರನ್​ ಬಗ್ಗೆ ಗೊತ್ತಿಲ್ಲ

ಶ್ರುತಿ ಹರಿಹರನ್​ ಬಗ್ಗೆ ಗೊತ್ತಿಲ್ಲ

''ನನಗೆ ಶ್ರುತಿ ಹರಿಹರನ್​ ಬಗ್ಗೆ ಗೊತ್ತಿಲ್ಲ. ಅವರ ಜತೆ ಯಾವುದೇ ಸಿನಿಮಾದಲ್ಲಿ ನಟಿಸಿಯೂ ಇಲ್ಲ. ಮೀ ಟೂ ಒಂದು ಒಳ್ಳೆಯ ಅಭಿಯಾನ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಅಭಿಯಾನ ಬೇರೆ ರೀತಿ ಬಳಕೆ ಆಗಬಾರದು.'' - ತಾರಾ ಅನುರಾಧ, ನಟಿ

ಏಳು ದಿನಗಳ ಕಾಲ ಗಡುವು ನೀಡಿದ ಮುನಿರತ್ನ

ಏಳು ದಿನಗಳ ಕಾಲ ಗಡುವು ನೀಡಿದ ಮುನಿರತ್ನ

ಈ ಘಟನೆಯ ಬಗ್ಗೆ ಮಾತನಾಡಿರುವ ಮುನಿರತ್ನ ''ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ನಾನು ಶ್ರುತಿ ಹರಿಹರನ್ ಗೆ ಪತ್ರ ಬರೆಯುತ್ತಿದ್ದೇನೆ. ಏಳು ದಿನಗಳ ಒಳಗಾಗಿ ಆಕೆ ಉತ್ತರ ಕೊಡಬೇಕು. ದಾಖಲೆಗಳನ್ನು ಒಂದು ವಾರದ ಒಳಗೆ ತಲುಪಿಸಬೇಕು. ಒಂದ್ವೇಳೆ ಉತ್ತರ ಕೊಡಲಿಲ್ಲ ಅಂದ್ರೆ ಆರೋಪ ಸುಳ್ಳು ಅಂತ ನಾನು ಭಾವಿಸುತ್ತೇನೆ. ಬಳಿಕ ನಮ್ಮ ಸಂಘದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ಹೇಳಿದ್ದಾರೆ.

ಶ್ರುತಿ ಹರಿಹರನ್ ಗೆ ತಲೆಕೆಟ್ಟಿದೆ ಎಂದ ಸಾರಾ ಗೋವಿಂದು

ಶ್ರುತಿ ಹರಿಹರನ್ ಗೆ ತಲೆಕೆಟ್ಟಿದೆ ಎಂದ ಸಾರಾ ಗೋವಿಂದು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು 'ಶ್ರುತಿ ಹರಿಹರನ್ ಗೆ ತಲೆಕೆಟ್ಟಿದೆ. ಆಕೆ ಹುಚ್ಚಿಯಾಗಿರಬೇಕು. ಇಂಡಸ್ಟ್ರಿಯಲ್ಲಿ ತಾನು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕದಿಂದ ಈ ರೀತಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ' ಎಂದು ಖಾರವಾಗಿ ಹೇಳಿದ್ದಾರೆ.

More from Filmibeat

English summary
Kannada actress Tara Anuradha reaction about Sruthi Hariharan's allegation. Kannada actress Sruthi Hariharan has accused actor Arjun Sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X