ಚಲನಚಿತ್ರ ಅಕಾಡೆಮಿಗೆ ನಟಿ ತಾರಾ ರಾಜೀನಾಮೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಗಿದ ಕೂಡಲೆ (ಡಿ.27) ಅವರು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. "ಅನಾರೋಗ್ಯದ ನಿಮಿತ್ತ ಹಾಗೂ ತಾವು ಗರ್ಭಿಣಿಯಾಗಿರುವ ಕಾರಣ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ" ಎಂದು ತಾರಾ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 2012ರಲ್ಲಿ ತಾರಾ ಅವರು ಸಹಜ ಹೆರಿಗೆ ಮೂಲಕ ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ಅವರ ರಾಜೀನಾಮೆ ಪತ್ರವನ್ನು ಸರ್ಕಾರ ಇನ್ನೂ ಅಂಗೀಕರಸಿಲ್ಲ. ಅದನ್ನು ತಡೆಹಿಡಿಯಲಾಗಿದೆ ಎಂಬ ಮಾಹಿತಿಯೂ ಇದೆ.
ಟಿಎಸ್ ನಾಗಾಭರಣ ಅವರ ಬಳಿಕ ಅಧಿಕಾರ ಸ್ವೀಕರಿಸಿದ ತಾರಾ ಅವರು ಚಲನಚಿತ್ರ ಅಕಾಡೆಮಿಗೆ ತಮ್ಮದೇ ವರ್ಚಸ್ಸಿನ ಮೂಲಕ ಹೊಸ ಕಳೆತಂದರು. ಅಕಾಡೆಮಿಯ 'ಬೆಳ್ಳಿಹೆಜ್ಜೆ' ಹಾಗೂ ವಾರ್ಷಿಕ ಚಲನಚಿತ್ರೋತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ಆಗಿರುವ ತಾರಾ ಅವರು ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ. (ಏಜೆನ್ಸೀಸ್)
More from Filmibeat
English summary
Kannada actress Tara Anuradha has resigned from the post of president of the Karnataka Chalanachitra Academy. But the Government however has not yet accepted her resignation and kept it pending.


Click it and Unblock the Notifications











