ಯಶ್ ಜೊತೆಗಿನ ಕ್ರೇಜಿ ವೀಡಿಯೋ ಬಿಟ್ಟು ಶಾಕ್ ಕೊಟ್ಟ ಹಾಲಿವುಡ್ ನಟಿ ಟೆಟಿಯಾನಾ
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿ 2ನೇ ಶೆಡ್ಯೂಲ್ ಶೂಟ್ ಶುರುವಾಗಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಸಿದ್ಧವಾಗುತ್ತಿದೆ.
'ಟಾಕ್ಸಿಕ್' ಹಾಲಿವುಡ್ ಸ್ಟೈಲ್ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಎನ್ನುವುದು ಗೊತ್ತಾಗುತ್ತಿದೆ. ಹಾಲಿವುಡ್ ಪೊಡಕ್ಷನ್ ಡಿಸೈನರ್, ಸ್ಟಂಟ್ ಮಾಸ್ಟರ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೆಲ ಬ್ರಿಟೀಷ್ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಆಗುತ್ತಿದೆ.

ಎರಡು ವರ್ಷಗಳ ಹಿಂದೆ ಹಾಲಿವುಡ್ ನಟ, ನಿರ್ದೇಶಕ ಜೆಜೆ ಪೆರ್ರಿ ಜೊತೆ ಯಶ್ ಅಮೆರಿಕದ ತರನ್ ಟ್ಯಾಕ್ಟಿಕಲ್ ಇನ್ನೋವೇಶನ್ಸ್ ಸ್ಟುಡಿಯೋದಲ್ಲಿ ಯಶ್ ಕಾಣಿಸಿಕೊಂಡಿದ್ದರು. ಗನ್ ಹಿಡಿದು ಟಾರ್ಗೆಟ್ ಕಡೆ ಗುಂಡು ಹಾರಿಸಿ ಸದ್ದು ಮಾಡಿದ್ದರು. ಆಗಲೇ ಯಶ್ ಮುಂದಿನ ಚಿತ್ರದಲ್ಲಿ ಜೆಜೆ ಪೆರ್ರಿ ಕೆಲಸ ಮಾಡುವ ಬಗ್ಗೆ ಸುಳಿವು ಸಿಕ್ಕಿತ್ತು. ಇತ್ತೀಚೆಗೆ 'ಟಾಕ್ಸಿಕ್' ಚಿತ್ರದ ಮುಂಬೈ ಶೆಡ್ಯೂಲ್‌ನಲ್ಲಿ ಜೆಜೆ ಪೆರ್ರಿ ಭಾಗಿ ಆಗಿರುವುದು ಗೊತ್ತೇಯಿದೆ.
ಅವತ್ತು ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಸಹ ಯಶ್ ಜೊತೆ ಅಲ್ಲಿ ಕಾಣಿಸಿಕೊಂಡಿದ್ದರು. ಈಗ ಅವತ್ತಿನ ಒಂದು ಫನ್ ವೀಡಿಯೋವನ್ನು ಆಕೆ ಶೇರ್ ಮಾಡಿದ್ದಾರೆ. ಒಂದು ದಿನ ಮೊದಲೇ ಯಶ್ ಜೊತೆಗಿನ ಆಕ್ಷನ್ ವೀಡಿಯೋ ಪೋಸ್ಟ್ ಮಾಡುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಳಿವು ನೀಡಿದ್ದರು. ಆಕೆಯ ಪೋಸ್ಟ್ ನೋಡಿ ಅಭಿಮಾನಿಗಳು ಕಾದು ಕೂತಿದ್ದರು. ಆದರೆ ಈಗ ನಿರಾಸೆಯಾಗಿದೆ.
ನಟಿ ಟೆಟಿಯಾನಾ ಗೈದರ್ ವೀಡಿಯೋ ಹಂಚಿಕೊಂಡಿರುವುದು ನಿಜ. ಆದರೆ ಅದರಲ್ಲಿ ಆಕೆ ಗನ್ ಹಿಡಿದು ಫೈರ್ ಮಾಡುತ್ತಿರುವುದನ್ನು ನೋಡಬಹುದು. ಆ ಸಮುಯದಲ್ಲಿ ಯಶ್ ಅಲ್ಲೇ ಇದ್ದರು ಇನ್ನುವುದು ವೀಡಿಯೋದಲ್ಲಿ ಗೊತ್ತಾಗುತ್ತಿದೆ. ಇನ್ನು 'KGF- 2' ಚಿತ್ರದ ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್ ಡೈಲಾಗ್ ವೀಡಿಯೋ ಮಿಕ್ಸ್ ಮಾಡಿ ವೀಡಿಯೋ ಹಂಚಿಕೊಂಡಿದ್ದಾರೆ. ಇದೇನಾ ನೀವು ಹೇಳಿದ ವೀಡಿಯೋ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಇನ್ನು ವೀಡಿಯೋದಲ್ಲಿ ಯಶ್ ಜೊತೆಗೆ ಬ್ರಿಟೀಷ್ ಕಾರ್ ರೇಸರ್ ಲೆವಿಸ್ ಹ್ಯಾಮಿಲ್ಟನ್ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಅಂದಹಾಗೆ ನಟಿ ಟೆಟಿಯಾನಾ ಗೈದರ್ ಹಾಲಿವುಡ್‌ನ Bosch: Legacy ಸೇರಿದಂತೆ ಕೆಲ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ.
'ಟಾಕ್ಸಿಕ್' ಚಿತ್ರದ ವಿಚಾರಕ್ಕೆ ಬಂದರೆ ಸದ್ಯ ಚಿತ್ರತಂಡ ಮುಂಬೈನಲ್ಲಿ ಬೀಡುಬಿಟ್ಟಿದೆ. ಆಗಸ್ಟ್ 8ಕ್ಕೆ ಬೆಂಗಳೂರಿನಲ್ಲಿ ಪೂಜೆ ಸಲ್ಲಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು. ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಿ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಸೆಟ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿದ ಆರೋಪ ಸಹ ಕೇಳಿಬಂದಿದೆ. ಇದೇ ಕಾರಣಕ್ಕೆ ಚಿತ್ರತಂಡದ ವಿರುದ್ಧ ದೂರು ಸಹ ದಾಖಲಾಗಿದೆ.
ಮುಂಬೈ ಶೆಡ್ಯೂಲ್‌ನಲ್ಲಿ ಬಾಲಿವುಡ್ ನಟಿ ಕಿಯಾರಾ ಅದ್ವಾನಿ ಸಹ ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಯಶ್ ಹಾಗೂ ಕಿಯಾರಾ ಹೋಗಿ ಬರುವ ವೀಡಿಯೋಗಳು ವೈರಲ್ ಆಗುತ್ತಿದೆ. ಆದರೆ ಸೆಟ್ ಒಳಗಿನ ಯಾವುದೇ ಫೋಟೊ, ವೀಡಿಯೋ ಹೊರ ಬರದಂತೆ ಚಿತ್ರತಂಡ ಎಚ್ಚರ ವಹಿಸಿದೆ. ಇನ್ನು ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ.
ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಎಂದು ಹಿಂದೆ ಹೇಳಲಾಗಿತ್ತು. ಆದರೆ ಚಿತ್ರೀಕರಣ ತಡವಾಗುತ್ತಿರುವುದರಿಂದ ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡಲಾಗಿದೆ. ಇನ್ನು ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ತಮಿಳು ನಟಿ ನಯನತಾರಾ ನಟಿಸಿದ್ದಾರೆ.


Click it and Unblock the Notifications











