For Quick Alerts
  ALLOW NOTIFICATIONS  
  For Daily Alerts

  ನಟಿ ತಾರಾ ಕೋರಿಕೆ ಈಡೇರಿಸುತ್ತಾರಾ ಯಶ್, ಧ್ರುವ ಸರ್ಜಾ

  |

  ನಟಿ ತಾರ ಇತ್ತೀಚಿಗಷ್ಟೆ 'ಶಿವಾರ್ಜುನ' ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇದಿಕೆ ಮೇಲೆ ನಟ ಯಶ್ ಹಾಗೂ ಧ್ರುವ ಸರ್ಜಾಗೆ ಕೋರಿಕೆ ಇಟ್ಟರು.

  Tara has a special request to yash and Dhruva Sarja | Tara | Yash | Dhruva Sarja

  ಈ ಇಬ್ಬರು ನಟರು ಹೆಚ್ಚು ಸಿನಿಮಾ ಮಾಡಬೇಕು ಎನ್ನುವುದು ತಾರ ಆಸೆಯಾಗಿದೆಯಂತೆ. ಯಶ್, ಧ್ರುವ ವರ್ಷಕ್ಕೆ ಒಂದು, ಎರಡು ಸಿನಿಮಾ ಮಾಡಬೇಕು ಆದರೆ, ಅವರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ ಎಂದರು ತಾರ.

  2020ರ ಬಹು ನಿರೀಕ್ಷೆಯ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ 'KGF-2'2020ರ ಬಹು ನಿರೀಕ್ಷೆಯ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ 'KGF-2'

  ಸ್ಟಾರ್ ನಟರು ಹೆಚ್ಚು ಸಿನಿಮಾ ಮಾಡಿದರೆ, ಚಿತ್ರರಂಗ ಬೆಳೆಯುತ್ತದೆ ಎನ್ನುವುದು ತಾರ ಅಭಿಪ್ರಾಯವಾಗಿದೆ. ಹೀಗಾಗಿಯೇ ಹೆಚ್ಚು ಸಿನಿಮಾ ಮಾಡಲು ನಟರಿಗೆ ಮನವಿ ಮಾಡಿದರು. 'ಶಿವಾರ್ಜುನ' ವೇದಿಕೆ ಮೇಲೆ ತಾರ ಜೊತೆಗೆ ನಟ ಧ್ರುವ ಸರ್ಜಾ ಇದ್ದರು.

  ಇತ್ತೀಚಿಗಷ್ಟೆ ನಿರ್ಮಾಪಕರು ಕೂಡ ಸ್ಟಾರ್ ಹೀರೋಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ನಟರು ಹೆಚ್ಚು ಸಿನಿಮಾ ಮಾಡಿದರೆ, ಚಿತ್ರರಂಗಕ್ಕೆ ಲಾಭ ಇದೆ ಎನ್ನುವುದು ಅವರ ಮಾತಾಗಿತ್ತು.

  ಸ್ಟಾರ್ ನಟರ ಪೈಕಿ ಶಿವರಾಜ್ ಕುಮಾರ್ ಹೆಚ್ಚು ಸಿನಿಮಾ ಮಾಡುತ್ತಾರೆ. ಪ್ರತಿ ವರ್ಷ ಮೂರರಿಂದ ನಾಲ್ಕು ಸಿನಿಮಾಗನ್ನು ಮಿಸ್ ಇಲ್ಲದೆ ಅವರು ನೀಡುತ್ತಿದ್ದಾರೆ.

  'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ'KGF-2' ಚಿತ್ರದ 10 ನಿಮಿಷದ ದೃಶ್ಯಕ್ಕೆ ರಾಕಿ ಭಾಯ್ 6 ತಿಂಗಳ ತಯಾರಿ

  'ಕೆಜಿಎಫ್' ಸಿನಿಮಾದ ನಿರ್ಮಾಣಕ್ಕಾಗಿ ಯಶ್ ಹಾಗೂ 'ಪೊಗರು' ಸಿನಿಮಾಗಾಗಿ ಧ್ರುವ ಸರ್ಜಾ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.

  English summary
  Kannada actress Thara requested Yash and Dhruva Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X