For Quick Alerts
  ALLOW NOTIFICATIONS  
  For Daily Alerts

  ಶಾರ್ಟ್ಸ್ ನಲ್ಲಿ ತ್ರಿಷಾ ಕೃಷ್ಣನ್ ವಿಶ್ವರೂಪ ಪ್ರದರ್ಶನ

  By ಶಂಕರ್, ಚೆನ್ನೈ
  |

  ದಕ್ಷಿಣ ಭಾರತ ಚಿತ್ರರಂಗದಲ್ಲಿ ದಶಕಗಳ ಕಾಲ ಮಹಾರಾಣಿಯಂತೆ ಮೆರೆದ, ಮೆರೆಯುತ್ತಿರುವ ತಾರೆ ತ್ರಿಷಾ. ತೆಲುಗು, ತಮಿಳಿನ ಎಲ್ಲಾ ದೊಡ್ಡ ಹೀರೋಗಳ ಜೊತೆಗೆ ಅಭಿನಯಿಸಿದ ಖ್ಯಾತಿ ಈ ತಾರೆಯದು. ಆದರೆ ಮಾಗುತ್ತಿರುವ ಪ್ರಾಯ, ಹೊಸ ತಾರೆಗಳ ಸ್ಪರ್ಧೆಯ ಕಾರಣ ಅವಕಾಶಗಳು ಪಾತಾಳಕ್ಕಿಳಿಯುತ್ತಿವೆ.

  ಈಗಿನ ಸ್ಥಿತಿಯಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾದರೆ ಕೇವಲ ನಟನೆಯೊಂದಿದ್ದರೆ ಸಾಕಾಗುವುದಿಲ್ಲ. ಗ್ಲಾಮರ್ ಪ್ರದರ್ಶಿಸಬೇಕಾಗುತ್ತದೆ ಎಂಬುದನ್ನು ತ್ರಿಷಾ ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ. ಇತ್ತೀಚೆಗೆ ತಮಿಳಿನ 'Endrendrum Punnagai' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಶಾರ್ಟ್ಸ್ ನಲ್ಲಿ ಬಂದು ಎಲ್ಲರ ಗಮನಸೆಳೆದರು.

  ಈ ಕಾರ್ಯಕ್ರಮಕ್ಕೆ ಮಹಾನ್ ನಟ ಕಮಲ್ ಹಾಸನ್, ಖ್ಯಾತ ನಿರ್ದೇಶಕ ಬಾಲ ಮುಂತಾದವರೂ ಹಾಜರಾಗಿದ್ದರು. ಆದರೂ ಎಲ್ಲರ ಕಣ್ಣು ಬಿದ್ದದ್ದು ಮಾತ್ರ ತ್ರಿಷಾ ಅವರ ಗ್ಲಾಮರ್ ವಿಶ್ವರೂಪ ಪ್ರದರ್ಶನದ ಮೇಲೆ. ಸಿನಿಮಾ ತಾರೆಗಳಿಗೆ ಇದೆಲ್ಲಾ ಸಾಮಾನ್ಯ ಅನ್ನಿಸಿದರೂ ತಮ್ಮ ಹಾಟ್ ಲುಕ್ ಮೂಲಕ ಎಲ್ಲರ ಕಣ್ಣು ತಂಪು ಮಾಡಿದರು. ಸ್ಲೈಡ್ ಶೋನಲ್ಲಿ ಚಿತ್ರಗಳ ಮೇಲೆ ಒಂದು ಲುಕ್ ಹಾಕಿ...

  ಮಾಡೆಲಿಂಗ್ ನಿಂದ ಬಂದ ತಾರೆ

  ಮಾಡೆಲಿಂಗ್ ನಿಂದ ಬಂದ ತಾರೆ

  ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ಸೆಸ್ ಆದ ಬಳಿಕ ಬೆಳ್ಳಿತೆರೆ ಕಡೆಗೆ ತಮ್ಮ ಗಮನಹರಿಸಿದರು ತ್ರಿಷಾ. ಒಂದು ಸಣ್ಣ ಪೋಷಕ ಪಾತ್ರದ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ತ್ರಿಷಾ ಇದೊಂದು ಬಲು ಬೇಡಿಕೆಯಲ್ಲಿರುವ ನಟಿ.

  ರು.1 ಕೋಟಿಗೂ ಅಧಿಕ ಚಾರ್ಜ್ ಮಾಡುವ ತ್ರಿಷಾ

  ರು.1 ಕೋಟಿಗೂ ಅಧಿಕ ಚಾರ್ಜ್ ಮಾಡುವ ತ್ರಿಷಾ

  ಈಕೆ ಚಿತ್ರವೊಂದಕ್ಕೆ ರು.1 ಕೋಟಿಗೂ ಅಧಿಕ ಚಾರ್ಚ್ ಮಾಡುತ್ತಾರೆ ಎಂಬ ಸುದ್ದಿ ಇದೆ. ಶ್! ಯಾರಿಗೂ ಹೇಳಬೇಡಿ ಆದಾಯ ಇಲಾಖೆ ಅಧಿಕಾರಿಗಳ ಕಿವಿಗೆ ಬಿದ್ದರೆ ಕಷ್ಟ.

  ತ್ರಿಷಾ ಬಗ್ಗೆ ಮಿಡ್ ನೈಟ್ ವಾರ್ತೆಗಳು

  ತ್ರಿಷಾ ಬಗ್ಗೆ ಮಿಡ್ ನೈಟ್ ವಾರ್ತೆಗಳು

  ತ್ರಿಷಾ ಬಗ್ಗೆ ಆಗಾಗ ಮಿಡ್ ನೈಟ್ ವಾರ್ತೆಗಳು ಬಿತ್ತರವಾಗುತ್ತಿವೆ. ಅವುಗಳಲ್ಲಿ ದೀಪಾವಳಿ ಆಚರಿಸಿದ ಸುದ್ದಿ ಎಂದರೆ ತೆಲುಗಿನ ಆಜಾನುಬಾಹು ನಟ ರಾಣಾ ದಗ್ಗುಬಾಟಿ ಜೊತೆ ಕುಚ್ ಕುಚ್ ವ್ಯವಹಾರ.

  ಮದುವೆ ಈಗಲೇ ಏನೂ ಅರ್ಜೆಂಟ್ ಇಲ್ಲವಂತೆ

  ಮದುವೆ ಈಗಲೇ ಏನೂ ಅರ್ಜೆಂಟ್ ಇಲ್ಲವಂತೆ

  ಮದುವೆ ಬಗ್ಗೆ ತ್ರಿಶಾ ಏನೇನು ಅರ್ಜೆಂಟ್ ಇಲ್ಲವಂತೆ. ಮದುವೆ, ನಿಶ್ಚಿತಾರ್ಥ, ಹನಿಮೂನು ಎಲ್ಲವೂ ಚಂದ್ರಮಾಮನಷ್ಟೆ ದೂರ ಎನ್ನುತ್ತಾರೆ.

  ಮೀನಿನ ಹಚ್ಚೆ ಹಾಕಿಸಿಕೊಂಡಿರುವ ತ್ರಿಷಾ

  ಮೀನಿನ ಹಚ್ಚೆ ಹಾಕಿಸಿಕೊಂಡಿರುವ ತ್ರಿಷಾ

  ಎದೆ, ಕೈ ಕಾಲಿನ ಮೇಲೆ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ ತ್ರಿಷಾ. ಅದರಲ್ಲೂ ಎದೆ ಮೇಲಿನ ಮೀನಿನ ಹಚ್ಚೆಯಂತೂ ಎಲ್ಲರನ್ನೂ ಕಾಡುತ್ತಿದೆ. ಮೀನಿನ ಹೆಜ್ಜೆಗೂ ಹೆಣ್ಣಿನ ಮನಸ್ಸಿಗೂ ಅದೇನೋ ನಂಟು ಅಂತಾರಲ್ಲಾ ಹಾಗೆ.

  ಶಿವಣ್ಣ ಸೆಂಚುರಿ ಹೊಡೆದರೂ ಕನ್ನಡಕ್ಕೆ ಬರಲಿಲ್ಲ

  ಶಿವಣ್ಣ ಸೆಂಚುರಿ ಹೊಡೆದರೂ ಕನ್ನಡಕ್ಕೆ ಬರಲಿಲ್ಲ

  ಕನ್ನಡಕ್ಕೆ ಬರ್ತೀನಿ ಬರ್ತೀನಿ ಎಂದು ಹೇಳಿ ವರ್ಷಗಳೇ ಉರುಳಿ ಹೋಗುತ್ತಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಅಭಿನಯಿಸುತ್ತಾರೆ ಎಂಬ ಸುದ್ದಿ ಇತ್ತು. ಶಿವಣ್ಣ ಸೆಂಚುರಿ ಹೊಡೆದದ್ದೂ ಆಯಿತು. ತ್ರಿಶಾ ಮಾತ್ರ ಬರಲಿಲ್ಲ.

  ತ್ರಿಷಾ ಬಾಲಿವುಡ್ ಕನಸು ನುಚ್ಚುನೂರು

  ತ್ರಿಷಾ ಬಾಲಿವುಡ್ ಕನಸು ನುಚ್ಚುನೂರು

  ತ್ರಿಷಾ ಬಾಲಿವುಡ್ ಕನಸು ನುಚ್ಚುನೂರಾಗಿದೆ. ಆಕೆ ಅಭಿನಯದ ಬಾಲಿವುಡ್ ಚಿತ್ರ 'ಕಠಾ ಮೀಠಾ' ಮಕಾಡೆ ಮಲಗಿದ ಮೇಲೆ ಬಾಲಿವುಡ್ ಬಾಗಿಲು ಬಂದ್ ಆಯಿತು.

  English summary
  Actress Trisha Krishnan hot new avtar at Endrendrum Punnagai audio launch. Tamil movie Endrendrum Punnagai audio launch held at Sathyam Theatres, Chennai on October 24th, 2013. The Audio was released by Padmashree Dr. Kamal Haasan and received by Director Bala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X