»   » 'ಕಳ್ ಮಂಜ'ನ ಕಳ್ಳಿ ಉದಯತಾರಾಗೆ ಕಂಕಣಭಾಗ್ಯ

'ಕಳ್ ಮಂಜ'ನ ಕಳ್ಳಿ ಉದಯತಾರಾಗೆ ಕಂಕಣಭಾಗ್ಯ

Posted By:
Subscribe to Filmibeat Kannada
ಕನ್ನಡದ ಜೋಕಾಲಿ, ಪ್ರೀತ್ಸೆ ಪ್ರೀತ್ಸೆ, ಕಳ್ ಮಂಜ ಹಾಗೂ ನೀಲಿ ಬಾನಲ್ಲಿ ಚಿತ್ರಗಳಲ್ಲಿ ಅಭಿನಯಿಸಿರುವ ತಾರೆ ಉದಯತಾರಾಗೆ ಕಂಕಣಭಾಗ್ಯ ಕೂಡಿಬಂದಿದೆ. ದುಬೈ ಮೂಲಕ ಪೈಲಟ್ ಜುಬಿನ್ ಜೋಸೆಫ್ ಕೈಹಿಡಿಯಲಿದ್ದಾರೆ ಉದಯತಾರಾ.

ಕೇರಳ ಮೂಲದ ಈ ತಾರೆ ಹಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಕಳ್ ಮಂಜ ಚಿತ್ರದ ಈಕೆಗೆ ಸಾಕಷ್ಟು ಹೆಸರು ತಂದುಕೊಟ್ಟಂತಹ ಚಿತ್ರ. ಉದಯತಾರಾ ಹಾಗೂ ಬುಬಿನ್ ನಿಶ್ಚಿತಾರ್ಥ ಕೊಟ್ಟಾಯಂನಲ್ಲಿ ಇತ್ತೀಚೆಗೆ ನೆರವೇರಿತು.

ಇವರಿಬ್ಬರ ಮದುವೆ ಸಂಭ್ರಮ ಕೊಚ್ಚಿಯಲ್ಲಿ ಮೇ 16ರಂದು ನಡೆಯಲಿದೆ. ಮದುವೆ ಬಳಿಕ ಬಣ್ಣದ ಜಗತ್ತಿಗೆ ಗುಡ್ ಬೈ ಹೇಳುವುದಾಗಿ ಉದಯತಾರಾ ತಿಳಿಸಿದ್ದಾರೆ. ಮೂಲತಃ ಕೇರಳದವರಾದ ಉದಯತಾರಾ ಸ್ವಸ್ಥಳ ಕೊಟ್ಟಾಯಂ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭಾಶಯ. (ಒನ್‌ಇಂಡಿಯಾ ಕನ್ನಡ)

English summary
Kannada and Tamil actress Udhayathara to enter nuptial knot. The wedding is set for 16 May at Kaduthuruthi near Cochin. She got engaged to a pilot Jubin Jospeh, based in Dubai, at a grand function in Kottayam in Kerala recently.
Please Wait while comments are loading...