»   » ಶಿವಣ್ಣನಿಗೆ ಅಮ್ಮನಾಗಿ ಎಂಟ್ರಿಕೊಟ್ಟ ನಟಿ ಊರ್ವಶಿ

ಶಿವಣ್ಣನಿಗೆ ಅಮ್ಮನಾಗಿ ಎಂಟ್ರಿಕೊಟ್ಟ ನಟಿ ಊರ್ವಶಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಶಿವಲಿಂಗ' ಆಗಿರುವ ಸುದ್ದಿ ನಿಮಗೆ ಗೊತ್ತಿದೆ. ಮೊಟ್ಟ ಮೊದಲ ಬಾರಿ ಶಿವಣ್ಣನಿಗೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಈ ಹಿಂದೆ ಓದಿದ್ರಿ.

ಇನ್ನೂ 'ಸಿಐಡಿ ಅಧಿಕಾರಿ'ಯಾಗಿ ಅಣ್ಣಾವ್ರ ಮಗ ಲಾಂಗು ಬಿಟ್ಟು ಕೈಲಿ ಗನ್ ಹಿಡಿದಿರುವ ಪೋಟೋಗಳನ್ನ ನಾವೇ ನಿಮಗೆ ಮೊದಲು ತೋರಿಸಿದ್ವಿ. ಇದೀಗ ಇದೇ 'ಶಿವಲಿಂಗ' ಅಡ್ಡದಿಂದ ಮತ್ತೊಂದು ಖಾಸ್ ಖಬರ್ ಹೊರಬಂದಿದೆ.

shivalinga

ಬಹುಭಾಷಾ ನಟಿ ಊರ್ವಶಿ ಗೊತ್ತು ತಾನೆ? ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಜೊತೆ ನಟಿಸಿದ್ದ ನಟಿ ಊರ್ವಶಿ 'ಶಿವಲಿಂಗ' ಚಿತ್ರದಲ್ಲಿ ಮಿಂಚಲಿದ್ದಾರೆ. ಅದು ಯಾವ ಪಾತ್ರದಲ್ಲಿ ಅಂದ್ರಾ...ಶಿವರಾಜ್ ಕುಮಾರ್ ರವರ ತಾಯಿ ಪಾತ್ರದಲ್ಲಿ! [ಸ್ಯಾಂಡಲ್ ವುಡ್ ನಲ್ಲಿ ಸೊಲ್ಲಾಪುರ ಬೆಡಗಿ ಸೆಕೆಂಡ್ ಇನ್ನಿಂಗ್ಸ್]

ಹೌದು, ಕಳೆದ ವರ್ಷವಷ್ಟೆ ನಿಜಬದುಕ್ಕಲ್ಲಿ ಗಂಡು ಮಗುವಿಗೆ ತಾಯಿಯಾದ ನಟಿ ಊರ್ವಶಿ, ಇದೀಗ ರೀಲ್ ನಲ್ಲೂ ತಾಯಿಯಾಗ್ತಿದ್ದಾರೆ. ಅದು ಶಿವಣ್ಣನಂತಹ ಸ್ಟಾರ್ ನಟನಿಗೆ. ಈಗಾಗಲೇ 'ಶಿವಲಿಂಗ' ಚಿತ್ರತಂಡ ಊರ್ವಶಿ ಜೊತೆ ಮಾತುಕತೆ ನಡೆಸಿದ್ದು, ಯಾವುದೇ ಅಂಜಿಕೆಯಿಲ್ಲದೆ ಊರ್ವಶಿ, ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

Actress Urvashi is roped in to play mother for Shivanna in Shivalinga

ಕೆಲ ವರ್ಷಗಳಿಂದ ಸಂಸಾರ, ಮನೆ, ಮಗು ಅನ್ನುವುದರಲ್ಲೇ ಬಿಜಿಯಾಗಿದ್ದ ಊರ್ವಶಿ, ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ, ಇಷ್ಟವಾದ ಪಾತ್ರಗಳಿಗಾಗಿ ಮಾತ್ರ ಬಣ್ಣ ಹಚ್ಚುತ್ತಿದ್ದರು. ಇದೀಗ, 'ಶಿವಲಿಂಗ' ಚಿತ್ರದಲ್ಲೂ ನಟಿ ಊರ್ವಶಿಗೆ ಪ್ರಮುಖ ಪಾತ್ರವಿರುವ ಕಾರಣ ಓಕೆ ಅಂದಿದ್ದಾರಂತೆ. [ಲಾಂಗು, ಮಚ್ಚಿಗೆ ಗುಡ್ ಬೈ ಹೇಳಿದ ಹ್ಯಾಟ್ರಿಕ್ ಹೀರೋ]

ಡಿಸೆಂಬರ್ ನಲ್ಲಿ ಸೆಟ್ಟೇರಿದ 'ಶಿವಲಿಂಗ', ಆಗಲೇ ಮೊದಲನೇ ಹಂತದ ಚಿತ್ರೀಕರಣವನ್ನ ಪೂರೈಸಿದೆ. ಶಿವಣ್ಣನ ಜೊತೆ ನಟಿ ವೇದಿಕಾ ಜೋಡಿಯಾಗಿದ್ದಾರೆ. 'ಸಿಐಡಿ ಅಧಿಕಾರಿ' ಪಾತ್ರವನ್ನ ನಿರ್ವಹಿಸುತ್ತಿದ್ದರೂ, ಶಿವಣ್ಣ ಸೂಪರ್ ಸ್ಟೈಲಿಶ್ 'ಶಿವಲಿಂಗ'ನಾಗಿದ್ದಾರೆ. 'ಶಿವಲಿಂಗ' ಚಿತ್ರದ ಎಕ್ಸ್ ಕ್ಲೂಸಿವ್ ಸ್ಟಿಲ್ ಇಲ್ಲಿದೆ.

Shivanna in Shivalinga

'ಗೋವಿಂದಾಯ ನಮಃ', 'ಶ್ರಾವಣಿ ಸುಬ್ರಮಣ್ಯ' ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಕೆ.ಎ.ಸುರೇಶ್, 'ಶಿವಲಿಂಗ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ನಟಿ ಊರ್ವಶಿ ಚಿತ್ರತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    Multilingual Actress Urvashi is roped in to play 'Mother' for Century Star Shivarajkumar for his upcoming movie Shivalinga. P.Vasu is directing the film, which also features Vedika in the lead.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada