ಹಾರ್ದಿಕ್ ಪಾಂಡ್ಯ ಜೊತೆ 'ಐರಾವತ' ಬೆಡಗಿಯ ಲವ್ವಿ-ಡವ್ವಿ : ಸುದ್ದಿ ನೋಡಿ ಗರಂ ಆದ ಊರ್ವಶಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ನಟಿ ಊರ್ವಶಿ ರೌಟೇಲಾ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಊರ್ವಶಿ ಲಿಂಕ್ ಅಪ್ ವಿಚಾರವೆ ಜಾಸ್ತಿ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಊರ್ವಶಿ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಒಟ್ಟಿಗೆ ಓಡಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಆಗಾಗ ಹರಿದಾಡುತ್ತಲೆ ಇತ್ತು. ಈ ಬಗ್ಗೆ ಊರ್ವಶಿ ಈಗ ಸಖತ್ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳನ್ನು ನೋಡಿ ಊರ್ವಶಿ ಸಿಟ್ಟಾಗಿದ್ದಾರೆ.
ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಊರ್ವಶಿ ಇನ್ಸ್ಟಾಗ್ರಾಮ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮಾಧ್ಯಮ ಮತ್ತು ಯೂಟ್ಯೂಬ್ ಚಾನಲ್ ಅವರಲ್ಲಿ ನಾನು ಬೇಡಿಕೊಳ್ಳುತ್ತಿದ್ದೇನೆ ದಯವಿಟ್ಟು ಇಂತಹ ಸುದ್ದಿಗಳನ್ನು ಯಾರು ಹಾಕಬೇಡಿ. ನನಗು ಒಂದು ಕುಟುಂಬವಿದೆ. ನಾನು ಅವರಿಗೆ ಉತ್ತರಿಸಬೇಕು. ಇದರಿಂದ ನನಗೆ ತುಂಬ ಸಮಸ್ಯೆ ಆಗುತ್ತಿದೆ" ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ನಟಿ ಊರ್ವಶಿ ಸಹಾಯಕ್ಕಾಗಿ ಮಾಜಿ ಪ್ರಿಯತಮ ಹಾರ್ದಿಕ್ ಪಾಂಡ್ಯ ಸಹಾಯ ಕೇಳಿದ್ದಾರೆ ಎನ್ನುವ ಸುದ್ದಿಯ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿದ್ದಾರೆ. ಇಬ್ಬರ ನಡುವೆ ಲವ್ ರಿಲೇಶನ್ ಶಿಪ್ ಬಗ್ಗೆ ಗಾಸಿಪ್ ಹರಡಲು ಕಾರಣವಾಗಿದ್ದು ಈ ಹಿಂದೆ ಪಾರ್ಟಿಯೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ ವರ್ಲ್ಡ್ ಕಪ್ ಸಮಯದಲ್ಲಿ ಪಾಸ್ ಬೇಕು ಅಂತ ಊರ್ವಶಿ ಹಾರ್ದಿಕ್ ಗೆ ಮೆಸೇಜ್ ಮಾಡಿದ್ದರು ಎನ್ನುವ ಸದ್ದು ಕೂಡ ಭಾರಿ ಸದ್ದು ಮಾಡಿತ್ತು. ಆದ್ರೀಗ ಗಾಸಿಪ್ ಮಾಡುತ್ತಿರುವವರಿಗೆ ಊರ್ವಶಿ ಖಾರವಾಗಿಯೆ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ಲವ್ವಿ- ಡವ್ವಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.


Click it and Unblock the Notifications











