»   » ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?

ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?

Posted By:
Subscribe to Filmibeat Kannada

ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ, ನಿರ್ಮಾಪಕ ರಾಮು ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ತಮಿಳು ರೀಮೆಕ್ ಸಿನಿಮಾ 'ರಾಜ್ ವಿಷ್ಣು' ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ.

ಈಗಾಗಲೇ ಮೇಲುಕೋಟೆಯಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಚಿತ್ರತಂಡ ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರಕ್ಕೆ ನಿರ್ದೇಶಕ ಕೆ ಮಾದೇಶ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಶರಣ್ 'ರಾಜ್ ವಿಷ್ಣು'ನಿಂದ ಮಲ್ಲು ಕುಟ್ಟಿ ರೆಮ್ಯಾ ನಂಬೀಸನ್ ಔಟ್]

ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ ನಾಯಕಿಯಾಗಿ ಆಯ್ಕೆಯಾಗಿದ್ದ ರೆಮ್ಯಾ ನಂಬೀಸನ್ ಚಿತ್ರತಂಡದಿಂದ ಔಟ್ ಆದ ಜಾಗಕ್ಕೆ ಇದೀಗ ಹೊಸ ನಾಯಕಿಯೊಬ್ಬರು ಎಂಟ್ರಿಯಾಗಿದ್ದಾರೆ

ತಮಿಳು ಚಿತ್ರ 'ರಜಿನಿ ಮುರುಗನ್' ಸಿನಿಮಾದಲ್ಲಿ ತಮಿಳು ನಟ ಶಿವ ಕಾರ್ತಿಕೇಯನ್ ಮತ್ತು ಕಾಮಿಡಿ ನಟ ಸೂರಿ ಅವರು ಮಿಂಚಿದ್ದರು. ಇದೀಗ ಕನ್ನಡಕ್ಕೆ ರೀಮೆಕ್ ಆಗುತ್ತಿರುವ 'ರಾಜ್ ವಿಷ್ಣು' ಸಿನಿಮಾದಲ್ಲಿ ಮತ್ತೆ ತುಂಡು ಹೈಕಳಾದ 'ಅಧ್ಯಕ್ಷ-ಉಪಾಧ್ಯಕ್ಷರು' ಒಂದಾಗಿದ್ದಾರೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]

ಅಂದಹಾಗೆ ಇದೀಗ ಚಿತ್ರಕ್ಕೆ ಹೊಸದಾಗಿ ಆಯ್ಕೆಯಾಗಿರುವ ಸುಂದರಿ ಯಾರು ಅನ್ನೋದರ ಸಂಪೂರ್ಣ ಮಾಹಿತಿ ಕೆಳಗಿನ ಸ್ಲೈಡುಗಳಲ್ಲಿ....

ರೆಮ್ಯಾ ಜಾಗಕ್ಕೆ ಮರಾಠಿ ಚೆಲುವೆ

ಡೇಟ್ ಕ್ಲ್ಯಾಷ್ ನಿಂದ 'ರಾಜ್ ವಿಷ್ಣು' ಚಿತ್ರದಿಂದ ಔಟ್ ಆದ ಮಲಯಾಳಂ ಬೆಡಗಿ ರೆಮ್ಯಾ ನಂಬೀಸನ್ ಅವರ ಜಾಗಕ್ಕೆ ಇದೀಗ ಹೊಸದಾಗಿ ಮರಾಠಿ ಬೆಡಗಿ ಎಂಟ್ರಿಯಾಗುತ್ತಿದ್ದಾರೆ.[ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ]

ಯಾರು ಆ ಚೆಲುವೆ?

ಮರಾಠಿ ಚಿತ್ರರಂಗದ ಖ್ಯಾತ ನಟಿ ವೈಭವಿ ಶಾಂಡಿಲ್ಯ ಅವರು ಶರಣ್ ಮತ್ತು ಚಿಕ್ಕಣ್ಣ ಜುಗಲ್ ಬಂದಿಯ 'ರಾಜ್-ವಿಷ್ಣು' ಸಿನಿಮಾದಲ್ಲಿ ನಾಯಕಿ ನಟಿಯಾಗಿ ಮಿಂಚಲಿದ್ದಾರೆ.

ಸ್ಯಾಂಡಲ್ ವುಡ್ ಗೆ ಮೊದಲ ಎಂಟ್ರಿ

ನಟಿ ವೈಭವಿ ಅವರು 'ರಾಜ್ ವಿಷ್ಣು' ಚಿತ್ರದಲ್ಲಿ ಶರಣ್ ಅವರಿಗೆ ನಾಯಕಿಯಾಗುವ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬರುತ್ತಿದ್ದಾರೆ.

ಮರಾಠಿ ಚಿತ್ರ 'ಜನೀವಾ' ನಟಿ

ಮರಾಠಿ ಚಿತ್ರ 'ಜನೀವಾ' ದಲ್ಲಿ ಖ್ಯಾತಿ ಪಡೆದುಕೊಂಡ ನಟಿ ವೈಭವಿ ಶಾಂಡಿಲ್ಯ ಅವರು ತದನಂತರ ತಮಿಳು ಚಿತ್ರವೊಂದರಲ್ಲಿ ಮಿಂಚಿದರು.

ಸಂತಾನಂ ಜೊತೆ ತಮಿಳಿನಲ್ಲಿ

ಕಾಮಿಡಿ ನಟ ಸಂತಾನಂ ಅವರ ಜೊತೆ 'ಸರ್ವರ್ ಸುಂದಂರಂ' ಎಂಬ ತಮಿಳು ಚಿತ್ರದಲ್ಲಿ ನಟಿಸಿ ದಕ್ಷಿಣ ಭಾರತದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದರು.

ಕಥಕ್ ಡ್ಯಾನ್ಸರ್

ನಟಿ ವೈಭವಿ ಶಾಂಡಿಲ್ಯ ಅವರು ಥಿಯೇಟರ್ ಆರ್ಟಿಸ್ಟ್ ಆಗಿದ್ದು, ಜೊತೆಗೆ ಖ್ಯಾತ ಕಥಕ್ ನೃತ್ಯ ಪಟು ಕೂಡ ಆಗಿದ್ದಾರೆ.

ಸೆಟ್ ಗೆ ಹಾಜರ್

ಮುಂದಿನ ವಾರ ಸೋಮವಾರದಿಂದ (ಏಪ್ರಿಲ್ 25) ಚಿತ್ರದ ಶೂಟಿಂಗ್ ಆರಂಭವಾಗಲಿರುವುದರಿಂದ ಏಪ್ರಿಲ್ 22ಕ್ಕೆ ಶೂಟಿಂಗ್ ಸೆಟ್ ಗೆ ನಟಿ ವೈಭವಿ ಶಾಂಡಿಲ್ಯ ಅವರು ಹಾಜರಾಗುತ್ತಿದ್ದಾರೆ.

English summary
Sharan starrer 'Raj-Vishnu' had its muhurath at Melkote and the cast has started shooting for it from Monday. The film made under Ramu Productions is directed by K Madesh. Earlier reports Actress Ramya Nambeesan was roped in as the heroine of the film. And now according to the latest reports coming from the sets, Actress Vaibhavi Shandilya has replaced

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada