ಮಿನುಗುತಾರೆ ಕಲ್ಪನಾ ಲುಕ್ ರಿಕ್ರಿಯೇಟ್ ಮಾಡಿದ ವೈಷ್ಣವಿ

ಹಿಂದಿನ ಕಾಲದ ಫೇಮಸ್ ನಟಿಯರು ,ಹಿರಿಯ ಕಲಾವಿದರ ಲುಕ್‌ಗಳನ್ನು ರಿಕ್ರಿಯೇಟ್ ಮಾಡೋದು ಈಗ ಟ್ರೆಂಡ್ ಆಗುತ್ತಿದೆ. ಸಾಕಷ್ಟು ಸೆಲೆಬ್ರೆಟೀಸ್‌ಗಳ ಫೇಮಸ್‌ ಲುಕ್‌ಗಳನ್ನು ಈ ರೀತಿಯಾಗಿ ಮರು ಸೃಷ್ಟಿ ಮಾಡೋದು, ಹಾಗೇ ಅವರಂತೆ ಕಾಣಲು ಪ್ರಯತ್ನ ಮಾಡೋದು ಸೋಶಿಯಲ್ ಮೀಡಿಯಾದಲ್ಲಿ ಚಾಲ್ತಿಯಲ್ಲಿದೆ. ಇದೀಗ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ವೈ‍ಷ್ಣವಿ ಗೌಡ ಕೂಡ ಇಂತದ್ದೆ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾಗದ ನಟಿ ಕಲ್ಪನಾ ಲುಕ್ ರಿಕ್ರಿಯೇಟ್ ಮಾಡಿ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್‌ ಮುಗಿಸಿಕೊಂಡು ಸಧ್ಯ ಫೊಟೋಶೂಟ್, ಜಾಹಿರಾತು ಶೂಟ್‌ಗಳಲ್ಲಿ ಬ್ಯುಸಿ ಆಗಿರುವ ವೈಷ್ಣವಿ ಹಿರಿಯ ನಟಿ ಕಲ್ಪನಾ ಲುಕ್‌ನಲ್ಲಿ ಫೊಟೋ ಶೂಟ್ ಮಾಡಿಸಿದ್ದಾರೆ. ತಮ್ಮದೇ ಅಫೀಶಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಫೊಟೋಶೂಟ್ ಮೇಕಿಂಗ್ ವೀಡಿಯೊವನ್ನು ನಟಿ ವೈಷ್ಣವಿ ಪೋಸ್ಟ್ ಮಾಡಿದ್ದಾರೆ. ಇದು ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಕಲ್ಪನಾರಂತೆ ಕಾಣುತ್ತಿದ್ದೀರ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಹಾಗೇ ಈ ವಿಡೀಯೋದಲ್ಲಿ ಕಲ್ಪನಾ ಲುಕ್ಕಿಗೆ ಬೇಕಾಗುವ ಮೇಕಪ್ ಸಾಮಾಗ್ರಿಗಳು, ಸ್ಕಿನ್ ಕೇರ್ ಹೇಗೆ ಮಾಡಬೇಕು, ಮೇಕಪ್‌ಗು ಮುನ್ನ ತ್ವಚೆಯನ್ನು ಹೇಗೆ ಶುಚಿಗೊಳಿಸಬೇಕು ಎಂದೆಲ್ಲ ವೈಷ್ಣವಿ ತಿಳಿಸಿಕೊಟ್ಟಿದ್ದಾರೆ. ಹಾಗೆ ಮೇಕಪ್ ಆರ್ಟಿಸ್ಟ್ ನಮ್ರತಾ ವೈಷ್ಣವಿಗೆ ಮೇಕಪ್‌ ಲುಕ್‌ಗೆ ಸಹಾಯ ಮಾಡಿದ್ದು, ಸೌಮ್ಯ ಗೌಡ ಹೇರ್‌ಸ್ಟೈಲ್ ಮಾಡಿದ್ದಾರೆ. ಹಾಗೆ ಕೆಂಪು ಮತ್ತು ನೀಲಿ ಬಣ್ಣದ ಬಾರ್ಡರ್ ಸ್ಯಾರಿ ಉಟ್ಟು, ಮಿನುಗುತಾರೆ ಕಲ್ಪನಾರಂತೆಯೇ ದೊಡ್ಡ ಕೆಂಪು ಬಿಂದಿ, ಹಿಂದಿನ ಕಾಲದಲ್ಲಿ ಬಳಸುತ್ತಿದ್ದಂತ ಆಭರಣಗಳು ಮುಖ್ಯವಾಗಿ ಕಲ್ಪನಾರಂತೆಯೇ ಕಾಣಲು ದಪ್ಪ ಹುಬ್ಬು ಮತ್ತು ದಪ್ಪ ಕಾಜಲ್ ಹಾಕಿ ಕಲ್ಪನಾ ಲುಕ್ ರಿಕ್ರಿಯೇಟ್ ಮಾಡಿದ್ದಾರೆ.

Actress Vaishnavi Gowda re-created Minuguthare Kalpanas look

ಈ ಬಗ್ಗೆ ಮಾತನಾಡಿರುವ ವೈಷ್ಣವಿ, ನನಗೆ ಮುಂಚಿನಿಂದಲೂ ಮಿನುಗುತಾರೆ ಕಲ್ಪನಾ ಮೇಡಂ ಅಂದರೆ ತುಂಬ ಇಷ್ಟ. ಅವರ ಸಿನಿಮಾಗಳು, ನಟನೆಯನ್ನು ನಾನು ನೋಡಿ ಕಲಿಯಲು ಪ್ರಯತ್ನ ಮಾಡುತ್ತಿದೆ. ಹಾಗೆ ಸಾಕಷ್ಟು ಕಲಾವಿದರಿಂದ ಕಲ್ಪನಾ ಅವರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಮನೆಯಲ್ಲಿ ಕುಳಿತು ಕಲ್ಪನಾ ಅವರ ಹಾಡುಗಳನ್ನು ಕೇಳುತ್ತಿದ್ದೆ. ಆಗ ಅವರ ಈ ಲುಕ್‌ನ್ನು ಯಾಕೆ ಪ್ರತ್ನಿಸಬಾರದು ಎನ್ನಿಸಿತ್ತು. ಒಂದಷ್ಟು ರಿಸರ್ಚ್ ಮಾಡಿ ಪ್ರಯತ್ನ ಮಾಡೇ ಬಿಡೋಣ ಎಂದು ತೀರ್ಮಾನಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡೆ. ಅದರ ರಿಸಲ್ಟ್ ಇವತ್ತು ನಿಮ್ಮಮುಂದೆ ಇದೆ. ಹೇಗಿದೆ ಎಂದು ನೀವೆ ಹೇಳಬೇಕು ಎಂದಿದ್ದಾರೆ.

ಕಲ್ಪನಾ ಲುಕ್ ರೀಕ್ರಿಯೆಟ್ ನಲ್ಲಿ ಒಂದಷ್ಟು ಫೊಟೋಗು ಫೋಸ್ ಕೊಟ್ಟ ವೈಷ್ಣವಿ ಇನ್ನು ಅದನ್ನು ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಸದ್ಯಕ್ಕೆ ಮೇಕಿಂಗ್ ವೀಡಿಯೋ ಮಾತ್ರ ಬಿಟ್ಟಿರುವ ವೈಷ್ಣವಿ ಆದಷ್ಟು ಬೇಗ ಫೊಟೋಗಳನ್ನು ಶೇರ್ ಮಾಡಲಿದ್ದಾರೆ.

Actress Vaishnavi Gowda re-created Minuguthare Kalpanas look

ವೈಷ್ಣವಿ ಗೌಡ. ಈ ಹೆಸರು ಹೇಳೋದಕ್ಕಿಂತ ಸನ್ನಿಧಿ ಎಂದು ಹೇಳಿದರೆ ಎಲ್ಲರಿಗೂ ಥಟ್ ಎಂದು ನೆನಪಾಗುತ್ತದೆ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದಿಂದ ವೈಷ್ಣವಿ ಅವರು ಕರ್ನಾಟಕದ ಮನೆಮಾತಾಗಿದ್ದರು. ಎಲ್ಲಾ ಕಡೆ ವೈಷ್ಣವಿ ಅವರನ್ನು ಅವರ ಅಭಿಮಾನಿಗಳು ಸನ್ನಿಧಿ ಅಂತಲೇ ಕರೆಯುತ್ತಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಅವರ ಅಭಿನಯಕ್ಕೆ ಎಲ್ಲಾ ಹಡುಗರು ಫಿದಾ ಆಗಿದ್ದರು, ಹುಡುಗಿ ಸಿಕ್ಕರೆ ಸನ್ನಿಧಿ ಅವರ ಹಾಗೆಯೇ ಇರಬೇಕು ಎಂದು ಆಸೆ ಪಡುವ ಮಟ್ಟಿಗೆ ವೈಷ್ಣವಿ ಮೋಡಿ ಮಾಡಿದ್ದರು.

Actress Vaishnavi Gowda re-created Minuguthare Kalpanas look

ಅಗ್ನಿಸಾಕ್ಷಿ ಸೀರಿಯಲ್ ಮುಗಿದರು ಕೂಡ ವೈಷ್ಣವಿ ಅವರನ್ನು ಜನ ಸನ್ನಿಧಿ ಎಂದೇ ಗುರುತ್ತಿಸುತ್ತಿದ್ದರು. ಅಗ್ನಿಸಾಕ್ಷಿ ಧಾರವಾಹಿಯ ನಂತರ ವೈಷ್ಣವಿ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲವಾದರೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಸಿದ ನಂತರ ವೈಷ್ಣವಿ ಅವರ ಜನಪ್ರಿಯತೆ ಇನ್ನು ಹೆಚ್ಚಾಯಿತು. ಬಿಗ್‌ಬಾಸ್‌ ನಲ್ಲಿ ವೈಷ್ಣವಿ ಅವರ ಪ್ರಶಾಂತ ಸ್ವಭಾವ, ಶಾಂತ ಚಿತ್ರ, ಎಲ್ಲರನ್ನು ಪ್ರೀತಿಸುವ ಮತ್ತು ಸಮಾನತೆಯಿಂದ ಕಾಣುವ ಅವರ ಗುಣ ಎಲ್ಲರಿಗು ಹಿಡಿಸಿತ್ತು. ಇನ್ನು ಸ್ವಲ್ಪ ಪ್ರಯತ್ನ ಪಟ್ಟಿದ್ದರೂ ವೈಷ್ಣವಿ ಅವರೆ ಬಿಗ್‌ಬಾಸ್ ಸೀಸನ್ 8 ಗೆಲ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಬಿಗ್‌ಬಾಸ್‌ನಲ್ಲಿ ಪ್ರಖ್ಯಾತಿ ಮತ್ತು ಅಭಿಮಾನವನ್ನು ಗಳಿಸಿದ್ದರು.ಈಗ ಮಿನುಗುತಾರೆ ಕಲ್ಪನಾ ಲುಕ್ ರಿಕ್ರಿಯೆಟ್ ಮಾಡಿ ಸುದ್ದಿಯಲ್ಲಿದ್ದಾರೆ.

More from Filmibeat

English summary
Minuguthare Kalpana look recreation by actress Vaishnavi Gowda. She shared making video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X