ಕನಸಿನ ಮನೆ ಬಗ್ಗೆ ಏನಂತಾರೆ ವೈಷ್ಣವಿ ಗೌಡ?

ಕನ್ನಡ ಕಿರುತೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಫೇಮಸ್ ಆದ ನಟಿಯರ ಸಾಲಿನಲ್ಲಿ ನಟಿ ವೈಷ್ಣವಿ ಗೌಡ ಕೂಡ ಒಬ್ಬರು. ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ವೈಷ್ಣವಿ ಜನಮನ ಗೆದ್ದಿದ್ದಾರೆ. ವೈಷ್ಣವಿ ಅಭಿನಯಕ್ಕೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಹಾಗಾಗಿ ವೈಷ್ಣವಿ ಏನೆ ಮಾಡಿದರು ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.

ಸದ್ಯ ಹೊಸ ಮನೆ ಖರೀದಿ ಮಾಡಿರುವ ವಿಚಾರದಲ್ಲಿ ವೈಷ್ಣವಿ ಸುದ್ದಿ ಆಗಿದ್ದಾರೆ. ಮನೆ ಒಂದನ್ನು ಖರೀದಿ ಮಾಡಬೇಕು ಎನ್ನುವ ಆಸೆ ಇದೆ ಎಂದು ವೈಷ್ಣವಿ ಬಿಗ್ ಬಾಸ್‌ನಲ್ಲಿ ಇರುವಾಗ ಹೇಳಿಕೊಂಡಿದ್ದರು. ಅಂತೆಯೇ ಈಗ ವೈಷ್ಣವಿ ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಿ ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ತಮ್ಮ ಮನೆಯ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ನಟಿ ವೈಷ್ಣವಿ "ಮೊದಲಿನಿಂದಲೂ ಮನೆಯನ್ನು ಖರೀದಿಸಬೇಕು ಎನ್ನುವ ಆಸೆ ಇತ್ತು. ಈಗ ನಮಗೆ ಬೇಕಾದ ರೀತಿಯಲ್ಲೆ ಮನೆ ಸಿಕ್ಕಿದೆ. ಮನೆ ಖರೀದಿ ಬಳಿಕ ನಮ್ಮ ಅಭಿರುಚಿಗೆ ತಕ್ಕ ಹಾಗೆ ವಿನ್ಯಾಸ ಮಾಡಿಸಿಕೊಂಡಿದ್ದೇವೆ. ದೇವರ ಕೋಣೆ ತುಂಬಾ ಇಷ್ಟ ಆಯ್ತು. ನನಗೆ ಮನೆ ವಿಶಾಲವಾಗಿ, ಸರಳವಾಗಿ ಇರಬೇಕು. ಇನ್ನು ಬಿಳಿಯ ಬಣ್ಣ ಅಂದರೆ ನನಗೆ ತುಂಬಾ ಇಷ್ಟ. ಇದು ಪಾಸಿಟಿವಿಟಿ ಹೆಚ್ಚಾಗಿಸುತ್ತದೆ" ಎಂದಿದ್ದಾರೆ.

Actress Vaishnavi Gowda Talk About Her New House

ವೈಷ್ಣವಿ ಗೌಡ ಬಿಗ್ ಬಾಸ್‌ನಲ್ಲಿದ್ದಾಗ ಮನೆ ಖರೀದಿಸುವ ಬಗ್ಗೆ ಹೇಳಿಕೊಂಡಿದ್ದರು. ಅದರಂತೆಯೇ ವೈಷ್ಣವಿ ಗೌಡ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾರೆ. ಈ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮೇ 8 ರಂದು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಸಮಾರಂಭದಲ್ಲಿ ಬಿಗ್ ಬಾಸ್ ಸ್ನೇಹಿತರು ಹಾಗೂ ಅಗ್ನಿ ಸಾಕ್ಷಿ ಬಳಗ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿ, ವೈಷ್ಣವಿ ಅವರಿಗೆ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸದ ನಂತರ ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಇದರಲ್ಲಿ ವೈಷ್ಣವಿ ಅವರು, ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗದ ಬಗ್ಗೆ ವೀಡಿಯೋ ಮಾಡುತ್ತಿರುತ್ತಾರೆ. ಕೆಲ ಸೆಲಬ್ರಿಟಿಗಳ ಜೊತೆಗೂ ವೀಡಿಯೋ ಮಾಡುತ್ತಾರೆ. ಇತ್ತೀಚೆಗಷ್ಟೆ 'ಬಹುಕೃತ ವೇಷಂ' ಸಿನಿಮಾದಲ್ಲಿ ನಟಿಸಿರುವ ವೈಷ್ಣವಿ ಅವರು ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಈಗಾಗಲೇ ಧಾರಾವಾಹಿಯ ಶೂಟಿಂಗ್ ಆರಂಭವಾಗಿದೆಯಂತೆ. ಕೆಎಸ್ ರಾಮ್ ಜೀ ನಿರ್ದೇಶನದ 'ಡಾಕ್ಟರ್ ಕರ್ಣ' ಎಂಬ ಧಾರಾವಾಹಿಯಲ್ಲಿ ವೈಷ್ಣವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Actress Vaishnavi Gowda Talk About Her New House

More from Filmibeat

English summary
Actress Vaishnavi Gowda Talk About Her New House, She Love Pooja Room, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X