ಗೋಲ್ಡನ್ ಸ್ಟಾರ್ ಜತೆ 'ಬುಗುರಿ' ಆಡಲಿರುವ ವೇದಿಕಾ

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಜತೆ 'ಬುಗುರಿ' ಆಡುವ ಚೆಲುವೆ ಯಾರು ಎಂಬುದು ಕನ್ಫರ್ಮ್ ಆಗಿದೆ. ಜೂನ್.7ರಂದು ಸೆಟ್ಟೇರುತ್ತಿರುವ 'ಬುಗುರಿ' ಚಿತ್ರದ ಮುಹೂರ್ತಕ್ಕೆ ಈ ಚೆಲುವೆಯ ಆಗಮನವಾಗುತ್ತಿದೆ.

ಈಕೆ ಬೇರಾರು ಅಲ್ಲ ಈ ಹಿಂದೆ ಗೋಲ್ಡನ್ ಸ್ಟಾರ್ ಜೊತೆ 'ಸಂಗಮ' ಚಿತ್ರದಲ್ಲಿ ಅಭಿನಯಿಸಿದ್ದ ವೇದಿಕಾ. ಎಸ್.ವಿ.ಬಾಬು ನಿರ್ಮಿಸಿದ್ದ ಚಿತ್ರಕ್ಕೆ ರವಿ ವರ್ಮಾ ಗುಬ್ಬಿ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿನ ವೇದಿಕಾ ಅವರ ಪಾತ್ರ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. [ಗೋಲ್ಡನ್ ಸ್ಟಾರ್ ಗಣೇಶ್ 'ಬುಗುರಿ' ಆಟ ಶುರು]

'ಸಂಗಮ' (2008) ಚಿತ್ರದ ಬಳಿಕ ವೇದಿಕಾ ಕನ್ನಡ ಚಿತ್ರರಂಗಕ್ಕೆ ಹುಳಿದ್ರಾಕ್ಷಿಯಾದರು. ಐದು ವರ್ಷಗಳ ಗ್ಯಾಪ್ ನ ಬಳಿ ಇದೀಗ ಮತ್ತೆ ಗಣೇಶ್ ಜೊತೆ ಅಭಿನಯಿಸುತ್ತಿದ್ದಾರೆ. ಗಣೇಶ್ 'ಬುಗುರಿ'ಗೆ ಬಣ್ಣದ ತುಂಬಲಿದ್ದಾರೆ. [ಸಂಗಮ ಚಿತ್ರ ವಿಮರ್ಶೆ]

'ದಿಲ್ ರಂಗೀಲಾ' ಬಳಿಕ ಗಣೇಶ್ ಸಹಿ ಹಾಕಿರುವ ಚಿತ್ರ ಇದಾಗಿದೆ. ಎಂ.ಡಿ.ಶ್ರೀಧರ್ ಅವರು ಆಕ್ಷನ್ ಕಟ್ ಹೇಳುತ್ತಿರುವ 'ಬುಗುರಿ' ಚಿತ್ರ ಫೋಟೋಶೂಟ್ ಈಗಾಗಲೆ ಮುಗಿದಿದೆ. ಈ ಹಿಂದೆ ಶ್ರೀಧರ್ ಅವರು ಗಣೇಶ್ ಜೊತೆ 'ಚೆಲ್ಲಾಟ' ಹಾಗೂ 'ಕೃಷ್ಣ' ಚಿತ್ರಗಳನ್ನು ಮಾಡಿದ್ದಾರೆ.

ಇದೀಗ ಆರು ವರ್ಷಗಳ ಗ್ಯಾಪ್ ಬಳಿಕ ಮತ್ತೊಮ್ಮೆ ಇಬ್ಬರೂ ಕೈಜೋಡಿಸಿದ್ದಾರೆ. ಅಂದಹಾಗೆ 'ಬುಗುರಿ' ಪಕ್ಕಾ ಸ್ವಮೇಕ್ ಚಿತ್ರ ಎಂಬುದು ವಿಶೇಷ. ಗಣೇಶ್ ಅಭಿನಯದ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರ ಶತಕ ಬಾರಿಸಿದೆ. 'ದಿಲ್ ರಂಗೀಲಾ' ಚಿತ್ರ ಅರ್ಧ ಸೆಂಚುರಿ ಪೂರೈಸಿದೆ.

ಅದಕ್ಕೂ ಮುಂಚಿನ 'ಆಟೋರಾಜ' ಚಿತ್ರವೂ ಐವತ್ತು ದಿನಗಳ ಪ್ರದರ್ಶನ ಕಂಡಿದೆ. ಆದರೆ ಅದ್ಯಾಕೋ ಏನೋ 'ಸಕ್ಕರೆ' ಚಿತ್ರ ಸಿಹಿಯಾಗಲಿಲ್ಲ. ಒಟ್ಟಾರೆಯಾಗಿ ಗಣೇಶ್ ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. 'ಬುಗುರಿ' ಚಿತ್ರದ ಟೈಟಲ್ ಅವರ ಅಭಿಮಾನಿಗಳಿಗೂ ಸಖತ್ ಇಷ್ಟವಾಗಿದೆ. (ಏಜೆನ್ಸೀಸ್)

More from Filmibeat

English summary
After a long break actress Vedhika is back to Kannada. Vedhika plays opposite to Golden Star Ganesh in 'Buguri' (Pegtop). The shooting for Buguri starts from 7th of June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X