Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯಲಕ್ಷ್ಮಿ ಹೊಸ ವಿಡಿಯೋ: ಚಿತ್ರರಂಗದಿಂದಲೇ ಟಾರ್ಗೆಟ್ ಎಂದ ನಟಿ!
ಕನ್ನಡದ ನಟಿ ವಿಜಯಲಕ್ಷ್ಮಿ ಅವರು ಕರ್ನಾಟಕಕ್ಕೆ ಹಿಂದಿರುಗಿದ ಬಳಿಕ ಸಾಕಷ್ಟು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ವಿಜಯಲಕ್ಷ್ಮಿ ವಿಡಿಯೋಗಳನ್ನು ಮಾಡುತ್ತಾ, ತಮ್ಮ ನೋವನ್ನು ತೋಡಿಕೊಂಡಿದ್ದರು. ಸಾಲು, ಸಾಲು ವಿಡಿಯೋಗಳನ್ನು ಹರಿಬಿಟ್ಟು ತಮ್ಮ ಸ್ಥಿತಿಯ ಬಗ್ಗೆ ವಿಜಯಲಕ್ಷ್ಮಿ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆಕೆಯ ಯಾವುದೇ ವಿಡಿಯೋಗಳು ರಿಲೀಸ್ ಆಗಿರಲಿಲ್ಲ.
ವಿಜಯಲಕ್ಷ್ಮಿ ಅವರ ಕಷ್ಟಗಳು ತೀರಿ ಬಹುಶಃ ಕೊಂಚ ನೆಮ್ಮದಿಯಿಂದ ಇದ್ದಾರೆ ಎನ್ನಲಾಗಿತ್ತು. ಅದರೆ ಈಗ ವಿಜಯಲಕ್ಷ್ಮಿ ಮತ್ತೆ ಗುಡುಗಿದ್ದಾರೆ. ವಿಜಯಲಕ್ಷ್ಮಿ ಮತ್ತೊಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ತಮಗೆ ಪದೇ, ಪದೇ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಕರ್ನಾಟಕ ಬಿಟ್ಟು ಹೋಗುವುದಾಗಿ ಹೇಳಿಕೊಂಡಿದ್ದಾರೆ.
ಚಪ್ಪಲಿಯಲ್ಲಿ
ಹೊಡೆದೆ
ಎಂದು
ಜಗ್ಗೇಶ್
ವಿವಾದ
ಮಾಡಿದರು:
ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡೋದಾಗಿ ಬಂದಿದ್ದ, ಯೋಗೇಶ್ ಅವರಿಂದ ಅನ್ಯಾಯ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕನ್ನಡ ಸಿನಿಮಾರಂಗದಲ್ಲಿ ಕೆಲವರು ಬೇಕಂತಲೇ ತನ್ನ ವಿರುದ್ಧ ಪಿತೂರಿ ಮಾಡಿ ಎಲ್ಲದಕ್ಕೂ ಅಡ್ಡಿ ಆಗುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ಬಾರಿ ವಿಜಯಲಕ್ಷ್ಮಿ ಏನು ಹೇಳಿದ್ದಾರೆ. ಎನ್ನುವುದನ್ನು ಮುಂದೆ ಓದಿ...

ದುಡ್ಡು ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರಂತೆ ಯೋಗೇಶ್!
ಹೊಸ ವಿಡಿಯೋದಲ್ಲಿ ನಟಿ, ಯೋಗೇಶ್ ಬಗ್ಗೆ ಮಾತನಾಡಿದ್ದಾರೆ. "ಜನಸ್ನೇಹಿ ಯೋಗೇಶ್ ಅವರು ಮತ್ತೆ ಸಂದರ್ಶನ ಕೊಟ್ಟಿದ್ದಾರೆ. ನನ್ನ ತಾಯಿ ತೀರಿಹೋದ ಬಳಿಕ ಏನೆಲ್ಲಾ ಆಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾವು ಅವರಿಗೆ ಏನು ದುಡ್ಡು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ನನ್ನ ಕಣ್ಣಮುಂದೆ ವಾಣಿಜ್ಯ ಮಂಡಳಿಯಿಂದ ಆತನಿಗೆ 35 ಸಾವಿರ ಹಣವನ್ನು ನೀಡದೆ. ಅಕೌಂಟ್‌ಗೆ ಎಷ್ಟೋ ದುಡ್ಡು ಬಂದಿದೆ ಅಂತೆಲ್ಲಾ ಮಾತನಾಡುತ್ತಿದ್ದಾರೆ. ಹಾಗಾಗಿ ನಾನು ಹೊಸ ನಿರ್ಧಾರ ತೆಗೆದುಕೊಂಡಿದ್ದೇನೆ."

ನಾವು ಅನಾಥರಾಗಿ ಇರುವುದೇ ಕೆಲವರಿಗೆ ಇಷ್ಟ: ವಿಜಯಲಕ್ಷ್ಮಿ!
"ಕನ್ನಡ ಚಿತ್ರರಂಗದಲ್ಲೂ ನಾನು ಇಲ್ಲಿ ಇರುವುದು ಯಾರಿಗೂ ಇಷ್ಟ ಇಲ್ಲ. ಹಾಗಾಗಿ ನಾನು ಏನು ಮಾಡ್ತೀನಿ ಅಂದರೆ, ನನಗೆ ಬಂದಿರುವ ದುಡ್ಡನ್ನು ಯಾಮಾರಿಸಿದ್ದೇನೆ ಎಂದು ಹೇಳುತ್ತಿದ್ದಾರೆ ಅಲ್ವ. ಹಾಗಾಗಿ ನಾನು ಎಲ್ಲಾ ದುಡ್ಡನ್ನು ವಾಣಿಜ್ಯ ಮಂಡಳಿಗೆ ಕೊಟ್ಟು, ನನ್ನ ಅಕ್ಕನನ್ನು ಕರೆದುಕೊಂಡು ಎಲ್ಲಾದರು ಹೋಗಿ ಬಿಡುತ್ತೇನೆ. ಕರ್ನಾಟಕದಲ್ಲಿ ನಾವು ಇರುವುದು ಯಾರಿಗೂ ಇಷ್ಟ ಇಲ್ಲ. ಹಾಗಾಗಿ ನಾವು ಅನಾಥರಾಗಿಯೇ ಎಲ್ಲಾದರೂ ಹೋಗಿ ಬಿಡುತ್ತೀವಿ. ನಮ್ಮ ಪರಿಸ್ಥಿರಿ ಏನು ಎಂದು ಎಲ್ಲರಿಗೂ ಗೊತ್ತು, ಆದರೆ ಮತ್ತೇ, ಮತ್ತೆ ನನಗೆ ಅವಮಾನ ಮಾಡಲಾಗುತ್ತಿದೆ. ಹಾಗಾಗಿ ನಾನು ಇಲ್ಲಿ ಇರುವುದಿಲ್ಲ."
ನಟಿ
ವಿಜಯಲಕ್ಷ್ಮಿಗೆ
ಲೈಂಗಿಕ
ಕಿರುಕುಳ,
ಬೆದರಿಕೆ:
ರಾಜಕಾರಣಿ
ಬಂಧನ

ನನ್ನ ಕೆರಿಯರ್ ಹಾಳು ಮಾಡಿದರು ಜಗ್ಗೇಶ್: ವಿಜಯಲಕ್ಷ್ಮಿ!
"ಈ ಹಿಂದೆ ಕೂಡ ನನಗೆ ಅವಮಾನ ಮಾಡಿ, ನನ್ನ ಕೆರಿಯರ್ ಹಾಳು ಮಾಡಿ ಇಲ್ಲಿಂದ ಕಳಿಸಿದ್ದರು. ಜಗ್ಗೇಶ್ ಅವರು ನನ್ನ ಜೀವನವನ್ನು ಹಾಳು ಮಾಡಿದರು. ನನಗೆ ಚಪ್ಪಲಿಯಲ್ಲಿ ಹೊಡೆದಿರುವುದಾಗಿ ಹೇಳಿ ವಿವಾದ ಎಬ್ಬಿಸಿ, ನನ್ನ ಸಿನಿಮಾ ಕೆರಿಯರ್ ಹಾಳು ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಹಲವರಿಗೆ ನಾನು ಇಲ್ಲಿ ಇರುವುದು, ಬದುಕುವುದು ಇಷ್ಟ ಇಲ್ಲ. ಚಿತ್ರರಂಗದಲ್ಲಿ ಇರುವವರೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನನ್ನನ್ನು ಬದುಕಲು ಬಿಡೋದಿಲ್ಲ. ಹಾಗಾಗಿ ನಾನು ಎಲ್ಲಾ ದುಡ್ಡು ವಾಣಿಜ್ಯ ಮಂಡಳಿಗೆ ಕೊಟ್ಟು ಅಕ್ಕನ ಜೊತೆಗೆ ಎಲ್ಲಾದರು, ಯಾರಿಗೂ ಸಿಗದ ಹಾಗೆ ಹೋಗಿ ಬಿಡುತ್ತೇನೆ."

ನಾನು ಬೀದಿಗೆ ಬೀಳಬೇಕು ಎನ್ನುವ ಇಂಗಿತ ಚಿತ್ರರಂಗದಲ್ಲಿ ಇದೆ:
ನಾವು ಎಲ್ಲಾ ಬಿಟ್ಟು ಕರ್ನಾಟಕಕ್ಕೆ ಬಂದರೆ, ಇಲ್ಲಿ ಹೀಗೆಲ್ಲಾ ಆಗುತ್ತಿದೆ. ನಾವು ಬೀದಿಗೆ ಬರಬೇಕು ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಇರುವವರ ಆಸೆ ಆಗಿದೆ. ನಾನು ಎಲ್ಲಾ ಕಳೆದುಕೊಂಡು, ಹಾಳಾಗಿ ಹೋಗಬೇಕು ಎನ್ನುವುದೇ ಕನ್ನಡ ಚಿತ್ರರಂಗದಲ್ಲಿ ಇರೋರು ಬಯಸುತ್ತಿದ್ದಾರೆ. ಎಲ್ಲಾ ಕಳೆದುಕೊಂಡು ಬೀದಿಗೆ ಬಂದಳು ಎನ್ನಬೇಕಲ್ಲ ಅದಕ್ಕೆ, ಹೀಗೆ ಮಾಡುತ್ತಿದ್ದಾರೆ. ನನ್ನನ್ನು ನೆಮ್ಮದಿ ಆಗಿ ಬದುಕಲು ಬಿಡುತ್ತಿಲ್ಲ. ಹಾಗಾಗಿ ನಾನು ಅಕ್ಕನ ಜೊತೆಗೆ ಎಲ್ಲಾದರು ಹೋಗಿ ಬಿಡುತ್ತೇನೆ. ಎಂದು ಹೊಸ ವಿಡಿಯೋದಲ್ಲಿ ನಟಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.