'ಸೂರ್ಯವಂಶ'ದ ಸೇವಂತಿ ವಿಜಯಲಕ್ಷ್ಮಿಯ ಕಣ್ಣೀರ ಕಥೆ
Recommended Video

'ನಾಗಮಂಡಲ', 'ಸೂರ್ಯವಂಶ' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ವಿಜಯಲಕ್ಷ್ಮಿ ಎಲ್ಲಿ ಹೋದ್ರು, ಏನ್ ಮಾಡ್ತಿದ್ದಾರೆ ಎಂಬ ಕುತೂಹಲ, ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿತ್ತು.
ಹೀಗಿರುವಾಗ, ದಿಢೀರ್ ಅಂತ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ, ಹಾಗಿದ್ರೆ, ಏನ್ ವಿಶೇಷ ಇರಬಹುದು ಅಂದುಕೊಂಡವರು ಇದ್ದಾರೆ. ಇದೊಂದು ಖುಷಿಯ ವಿಚಾರವಾದ್ರು, ಇನ್ನೊಂದು ರೀತಿಯಲ್ಲಿ ಬೇಸರದ ಸಂಗತಿ. ಯಾಕಂದ್ರೆ, ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟವರು, ಸೂಪರ್ ಸ್ಟಾರ್ ನಟರ ಜೊತೆ ಅಭಿನಯಿಸಿದವರು ಈಗ ಅವಕಾಶಕ್ಕಾಗಿ ಕೇಳಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ ಎಂಬುದು ಶೋಚನೀಯ.

''ನಾನು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದೀನಿ. ನನಗೆ ಯಾರಾದರೂ ಸಿನಿಮಾದಲ್ಲಿ ಅಭಿನಯಸುವುದಕ್ಕೆ ಅವಕಾಶ ಕೊಟ್ರೆ ಖಂಡಿತಾ ಮಾಡ್ತೀನಿ. ನನಗೆ ಆಕ್ಟಿಂಗ್ ಬಿಟ್ರೆ ಬೇರೆನೂ ಗೊತ್ತಿಲ್ಲ. ನಟನೆಯೇ ಎಲ್ಲ. ನನ್ನ ಕುಟುಂಬವನ್ನ ನಾನೇ ಪೋಷಿಸಬೇಕು'' ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ.
ಅಂದ್ಹಾಗೆ, ವಿಜಯಲಕ್ಷ್ಮಿ ಅವರು ಕನ್ನಡದಲ್ಲಿ ಕೊನೆಯದಾಗಿ 2011ರಲ್ಲಿ 'ನಾನಲ್ಲ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ. ಈ ಮಧ್ಯೆ, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದ ವಿಜಯಲಕ್ಷ್ಮಿ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು.
ಇದೀಗ, ತುಂಬಾ ವರ್ಷದ ನಂತರ ಕನ್ನಡ ಜನರ ಮುಂದೆ ಬಂದಿದ್ದು, ಜೀವನ ಕಂಡುಕೊಳ್ಳಲು ಮುಂದಾಗಿದ್ದಾರೆ. 'ನಾಗಮಂಡಲ', 'ಜೋಡಿಹಕ್ಕಿ', 'ಭೂಮಿ ತಾಯಿಯ ಚೊಚ್ಚಲ ಮಗ', 'ಸ್ವಸ್ತಿಕ್', 'ಹಬ್ಬ', 'ಸೂರ್ಯ ವಂಶ' ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











