ರಾಮ್ ಗೋಪಾಲ್ ವರ್ಮ ಶಿಷ್ಯನ ಚಿತ್ರದಲ್ಲಿ ಯಜ್ಞಾ ಶೆಟ್ಟಿ
ನಟಿ ಯಜ್ಞಾ ಶೆಟ್ಟಿ ಆಗಾಗ ಸಿನಿಮಾ ಮಾಡಿದರೂ ಒಳ್ಳೆಯ ಪಾತ್ರಗಳನ್ನು ಮಾಡುತ್ತಾರೆ. ಕಿರುತೆರೆಯ 'ವಾರಸ್ಧಾರ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಯಜ್ಞಾ ಶೆಟ್ಟಿ ಈಗ ಮತ್ತೆ ಹೊಸ ಸಿನಿಮಾ ಮಾಡುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮ ಅವರ ಜೊತೆಗೆ ಕೆಲಸ ಮಾಡಿದ್ದ ಬಾಲಾಜಿ ಈಗ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರದ ಲೀಡ್ ರೋಲ್ ನಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ತೆಲುಗಿನಲ್ಲಿ ಚಿತ್ರಕ್ಕೆ 'ನಯೀಮ್ ಡೈರೀಸ್' ಎಂಬ ಶೀರ್ಷಿಕೆ ಫಿಕ್ಸ್ ಆಗಿದೆ. ಕನ್ನಡದಲ್ಲಿ ಇನ್ನೂ ಹೆಸರು ನಿಗದಿ ಆಗಿಲ್ಲ. ಸಿನಿಮಾದಲ್ಲಿ ನಾಯಕನಾಗಿ ವಸಿಷ್ಟ ಕಾಣಿಸಿಕೊಳ್ಳುತ್ತಿದ್ದಾರೆ. ನಯೀಮ್ ಎಂಬ ಪಾತ್ರವನ್ನು ವಸಿಷ್ಟ ನಿರ್ವಹಿಸುತ್ತಿದ್ದಾರೆ.

ತಮ್ಮ ಕೆರಿಯಲ್ ನಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ಯಜ್ಞಾ ಶೆಟ್ಟಿ ಈ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಜೊತೆಗೆ 'ಅಪರೇಷನ್ ನಕ್ಷತ್ರ' ಎಂಬ ಚಿತ್ರದಲ್ಲಿ ಕೂಡ ಯಜ್ಞಾ ನಟಿಸುತ್ತಿದ್ದಾರೆ.


Click it and Unblock the Notifications











