ಉಪೇಂದ್ರ ಅಣ್ಣನ ಮಗ ನಿರಂಜನ್ ಗೆ ಜೋಡಿಯಾದ ದೆಹಲಿ ಮಾಡೆಲ್

ರಿಯಲ್ ಸ್ಟಾರ್ ಉಪೇಂದ್ರ ಅಣ್ಣ ಸುನೀಂದ್ರ ಅವರ ಪುತ್ರ ನಿರಂಜನ್ ಚಿತ್ರರಂಗಕ್ಕೆ ಬಂದಿದ್ದಾರೆ. ನಿರಂಜನ್ ನಾಯಕನಟರಾಗಿ ನಟಿಸುತ್ತಿರುವ ಮೊದಲ ಸಿನಿಮಾಗೆ 'ಅದ್ದೂರಿ 2' ಎಂದು ಶೀರ್ಷಿಕೆ ಇಡಲಾಗಿದೆ.

ಇದೀಗ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆ. ನಿರಂಜನ್ ಗೆ ನಟಿ ಝಾರ ಯಾಸ್ಮಿನ್ ಜೋಡಿಯಾಗಿದ್ದಾರೆ. ದೆಹಲಿ ಮೂಲದ ಮಾಡೆಲ್ ಆಗಿರುವ ಈಕೆ ಈ ಹಿಂದೆ ಪಂಜಾಬಿ ಹಾಡುಗಳಲ್ಲಿ ನಟಿಸಿದ್ದರು. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾ.

'ಅದ್ದೂರಿ 2' ಸಿನಿಮಾಗಾಗಿ ಆಡಿಷನ್ ನಡೆಸಿದ್ದು, ಅದರಲ್ಲಿ 300ಕ್ಕೂ ಹೆಚ್ಚು ಹುಡುಗಿಯರು ಭಾಗಿಯಾಗಿದ್ದರಂತೆ. ಆ ಪೈಕಿ ಝಾರ ಯಾಸ್ಮಿನ್ ಗೆ ಅವಕಾಶ ಸಿಕ್ಕಿದೆ. ಸಿನಿಮಾದ ಪಾತ್ರ ಹಾಗೂ ನಿರಂಜನ್ ಗೆ ಒಳ್ಳೆಯ ಜೋಡಿ ಎಂಬ ಕಾರಣಕ್ಕೆ ಝಾರ ಯಾಸ್ಮಿನ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

actress zaara yesmin will be playing female lead role in addhuri 2 kannada movie

'ಅದ್ದೂರಿ' ಸಿನಿಮಾ ನಿರ್ಮಾಣ ಮಾಡಿದ್ದ ಸಿ ಎಂ ಆರ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೂ ಬಂಡವಾಳ ಹಾಕಿದೆ. ರಮೇಶ್ ವೆಂಕಟೇಶ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. 'ಅದ್ದೂರಿ 2' ಎಂಬ ಕಾರಣಕ್ಕೆ ಇದು ಆ ಸಿನಿಮಾದ ಸೀಕ್ವಲ್ ಅಂತವಂತೆ.

actress zaara yesmin will be playing female lead role in addhuri 2 kannada movie

ನಿರಂಜನ್ ಈ ಹಿಂದೆ ತಮ್ಮ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ಅಭಿನಯದ 'ಸೆಕೆಂಡ್ ಹಾಫ್' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಪೂರ್ಣ ಪ್ರಮಾಣ ನಾಯಕನಾಗಿ 'ಅದ್ದೂರಿ 2' ಇವರ ಮೊದಲ ಸಿನಿಮಾ.

More from Filmibeat

English summary
Actress Zaara Yesmin will be playing female lead role in 'Addhuri 2' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X