»   » ಸಿನೆಮಾ ನಟಿಯರ ಹೊಕ್ಕಳ ವಿಷ್ಯ ಬ್ಯಾಡವೋ ಶಿಷ್ಯ!

ಸಿನೆಮಾ ನಟಿಯರ ಹೊಕ್ಕಳ ವಿಷ್ಯ ಬ್ಯಾಡವೋ ಶಿಷ್ಯ!

By: ರವಿಕಿಶೋರ್
Subscribe to Filmibeat Kannada

ಬಹುಶಃ ಸೆನ್ಸಾರ್ ಮಂಡಳಿ ಹೊಕ್ಕಳುವರೆಗೂ ಪರ್ಮಿಷನ್ ಕೊಟ್ಟಿದೆ ಅಂಥ ಕಾಣುತ್ತದೆ! ಹಾಗಾಗಿ ಕ್ಯಾಮೆರಾ ಅಲ್ಲಿಯವರೆಗೂ ಸರಾಗವಾಗಿ ಹರಿದಾಡಿ ಹೊಕ್ಕಳ ಶೃಂಗಾರವನ್ನು ಸೆರೆಹಿಡಿಯುತ್ತದೆ. ಈಗ ಬಿಕಿನಿಗಿಂತಲೂ ಹೊಕ್ಕಳಿಗಿಂತಲೂ ಸ್ವಲ್ವ ಕೆಳಗೆ ಸೀರೆ ಉಟ್ಟ ಸೀನ್ ಗಳೇ ಸಿನೆಮಾಗಳಲ್ಲಿ ಸಖತ್ ಕ್ಲಿಕ್ ಆಗಿವೆ.

ಅದು ಯಾವುದೇ ಚಿತ್ರರಂಗವಿರಬಹುದು. ಹೊಕ್ಕಳ ಸೀನಂತೂ ಇದ್ದೇ ಇರುತ್ತದೆ. ಸೆನ್ಸಾರ್ ಮಂಡಳಿ ಕೂಡ ಈ ಬಗ್ಗೆ ನೋ ಅಬ್ಜೆಕ್ಷನ್. ಹೊಕ್ಕಳ ಸನ್ನಿವೇಶಗಳು ಎಷ್ಟೇ ರಸಭರಿತವಾಗಿದ್ದರೂ ಸೆನ್ಸಾರ್ ಮಂಡಳಿ ಕತ್ತರಿ ಕೂಡ ತನ್ನ ಹರಿತವನ್ನು ಕಳೆದುಕೊಳ್ಳುತ್ತದೆ.

ಅಷ್ಟರ ಮಟ್ಟಿಗೆ ಈ ಹೊಕ್ಕಳ ಸೀನ್ ಭಾರತೀಯ ಚಿತ್ರರಂಗದಲ್ಲಿ ಹಾಸುಹೊಕ್ಕಾಗಿದೆ. ಈ ಹೊಕ್ಕಳ ಸೀನ್ ಗಳನ್ನು ಸೆರೆಹಿಡಿಯುವುದರಲ್ಲಿ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೈ ಪಳಗಿದೆಯಂದೇ ಹೇಳಬೇಕು. ಅವರಷ್ಟು ಸೊಗಸಾಗಿ ತಾರೆಯರ ಹೊಕ್ಕಳನ್ನು ತೋರಿಸಿದ ಮತ್ತೊಬ್ಬ ಸೊಗಸುಗಾರ ನಿರ್ದೇಶಕ ಕನ್ನಡದಲ್ಲಿ ಸಿಗಲಾರ!

ಹೊಕ್ಕಳಲ್ಲೇ ಶೃಂಗಾರಕಾವ್ಯ ಬಿಡಿಸಿದ ನಯನತಾರಾ

ನಯನತಾರಾ ಅಭಿನಯದಲ್ಲಷ್ಟೆ ಅಲ್ಲ ತೆರೆಯ ಮೇಲೆ ಶೃಂಗಾರಕಾವ್ಯ ಬಿಡಿಸುವಲ್ಲೂ ಅಷ್ಟೇ ಚತುರೆ. ಅಂಕುಡೊಂಕು ಮೈಯಲ್ಲಿ ಕಚಗುಳಿ ಇಟ್ಟಂತೆ ತಮ್ಮ ಹೊಕ್ಕಳನ್ನು ತೋರಿಸುವ ಕಲೆ ನಯನತಾರಾಗಷ್ಟೇ ಗೊತ್ತು.

ತ್ರಿಷಾ ಹೊಕ್ಕಳ ಸೌಂದರ್ಯಕ್ಕೆ ಪಡ್ಡೆಗಳು ಢಮಾರ್

ಮೊದಲೇ ನಡು ಸಣ್ಣ. ಇನ್ನು ಹೊಕ್ಕಳು ತೋರಿಸಿದರಂತೂ ಪಡ್ಡೆಗಳು ಢಮಾರ್. ತಮ್ಮ ದೇಹ ತೂಕತಪ್ಪದಂತೆ ಹಲವಾರು ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ಯಾವುದೇ ಮುಲಾಜಿಲ್ಲದಂತೆ ತಮ್ಮ ಹೊಕ್ಕಳನ್ನು ಪ್ರದರ್ಶಿಸಿದ ಅಭಿನೇತ್ರಿ.

ಕಿಕ್ ಕೊಡುವ ಇಲಿಯಾನಾ ಹೊಕ್ಕಳ ಸೀನ್

ಚಿತ್ರದಲ್ಲಿ ತುಟಿಗೆ ತುಟಿ ಒತ್ತುವ ಸೀನ್ ಇದೆ ಎಂದು ಹೇಳಿ ಹಲವಾರು ಚಿತ್ರಗಳನ್ನು ತಿರಸ್ಕರಿಸಿ ತಾರೆ ಇಲಿಯಾನಾ. ಆದರೆ ಹೊಕ್ಕಳನ್ನು ಪ್ರದರ್ಶಿಸಬೇಕಾದರೆ ಮಾತ್ರ ಯಾವುದೇ ಕ್ಯಾತೆ ತೆಗೆಯಲ್ಲವಂತೆ. ಒಂದಷ್ಟು ಪಗಾರ ಹೆಚ್ಚಿಗೆ ಕೊಟ್ಟರೆ ಆಯಿತು ಅಷ್ಟೇ. ತ್ರಿಷಾರಂತೆಯೇ ಇಲಿಯಾನಾ ಸಹ 'ಫಿಗರ್' ಕಾಪಾಡಿಕೊಂಡು ಬಂದಿದ್ದಾರೆ.

ಮರಳು ಮಾಡುವ ಯೋಗ ಟೀಚರ್ ಅನುಷ್ಕಾ ಶೆಟ್ಟಿ

ಬೆಂಗಳೂರು ಮೂಲಕ ತಾರೆ ಅನುಷ್ಕಾ ಶೆಟ್ಟಿ. ಯೋಗಾಸನ ಮಾಡಿ ತಮ್ಮ ದೇಹದ ಸೌಂದರ್ಯವನ್ನು ವರ್ಧಿಸಿಕೊಂಡ ತಾರೆ. ಹೆಚ್ಚಾಗಿ ಸೀರೆಯಲ್ಲೇ ಪ್ರೇಕ್ಷರನ್ನು ಸೆಳೆದ ತಾರೆಯಾದರೂ ಈಕೆಯ ಹೊಕ್ಕಳ ಸೌಂದರ್ಯಕ್ಕೆ ಮರುಳಾಗದವರಿಲ್ಲ.

ಕಣ್ಣಿಗೆ ದಾವಣಗೆರೆ ಬೆಣ್ಣೆ ಕಾಜಲ್ ಅಗರವಾಲ್

ಕಾಜಲ್ ಅಗರವಾಲ್ ಕನ್ನಡಕ್ಕೆ ಬಂದರೆ ಈ ರೀತಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಾಗಲೆ ದಕ್ಷಿಣ ಚಿತ್ರರಂಗದಲ್ಲಂತೂ ತಮ್ಮ ಸೌಂದರ್ಯವನ್ನು ಹಿತಮಿತವಾಗಿ ತೋರಿದ್ದಾರೆ. ಒಮ್ಮೆ ಪುರುಷರ ನಿಯತಕಾಲಿಕೆಯೊಂದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರಾದರೂ ಹೊಕ್ಕಳ ಸೌಂದರ್ಯದಲ್ಲಂತೂ ದಾವಣಗೆರೆ ಬೆಣ್ಣೆಯೇ.

ತಮನ್ನಾ ಭಾಟಿಯಾ 24 ಕ್ಯಾರೆಟ್ ಸೌಂದರ್ಯ

ತಮನ್ನಾ ಹೊಕ್ಕಳ ಸೌಂದರ್ಯಕ್ಕೆ ಮರುಳಾಗದವೇ ಇಲ್ಲ ಎನ್ನಬಹುದು. ಮೊದಲೇ ಈಕೆ ದಂತದಗೊಂಬೆ. ಇನ್ನು ಹೊಕ್ಕಳು ಪ್ರದರ್ಶಿಸಿದರಂತೂ ಪ್ರೇಕ್ಷಕರ ಪರಿಸ್ಥಿತಿ ಥಿಯೇಟರ್ ನಲ್ಲೇ ಹರೋಹರ!

ಯಾರ ತಪಸಿನ ಫಲವೋ ಇದು ತಾಪಸಿ ಪನ್ನು

ದಕ್ಷಿಣ ಚಿತ್ರರಂಗದಲ್ಲಿ ಇದೆಲ್ಲಾ ಕಾಮನ್ ಬಿಡ್ರಿ ಎನ್ನುವ ತಾಪಸಿ, ಹೊಕ್ಕಳ ಸೀನ್ ಗೆ ಯಾವುದೇ ತಕರಾರು ಮಾಡಲ್ಲವಂತೆ. ಆದರೆ ಲಿಪ್ ಲಾಕ್ ಕಿಸ್ ಮಾತ್ರ ಬೇಡಪ್ಪಾ ಎನ್ನುತ್ತಾರೆ. ಹೊಕ್ಕಳ ಸೀನ್ ಗೆ ಮಾತ್ರ ತಮ್ಮ ಅಭ್ಯಂತರವಿಲ್ಲ ಎನ್ನುತ್ತಾರೆ.

ಶೃತಿ ತಪ್ಪದ ಶೃಂಗಾರಮುಖಿ ಶ್ರುತಿ ಹಾಸನ್

ಕ್ಯಾಮೆರಾ ಮುಂದೆ ಹೊಕ್ಕುಳ ಪ್ರದರ್ಶನಕ್ಕೆ ಶ್ರುತಿ ಹಾಸನ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಳುಕುವ ಸೊಂಟದ ಜೊತೆಗೆ ಕುಲುಕುವ ಹೊಕ್ಕಳನ್ನು ತೋರಿಸಿ ಚಿತ್ರರಸಿಕರ ಮನಸ್ಸು ಚಿತ್ರಾನ್ನ ಮಾಡುವ ಕಲೆ ಶ್ರುತಿಗೆ ಸಿದ್ಧಿಸಿದೆ.

ಹೃದಯ ಕಲಕುವ ಶ್ರಿಯಾ ಸರನ್

ಕನ್ನಡದ 'ಚಂದ್ರ' ಚಿತ್ರದಲ್ಲಿ ಅಭಿನಯಿಸುತ್ತಿರುವ ಈ ಬೆಳದಿಂಗಳ ಬಾಲೆ ಈಗಾಗಲೆ ತಮ್ಮ ಹೊಕ್ಕಳನ್ನು ಹಲವಾರು ಚಿತ್ರಗಳಲ್ಲಿ ಪ್ರದರ್ಶಿಸಿದ್ದಾರೆ. ಆದರೂ ಪ್ರೇಕ್ಷರು ಇನ್ನೂ ಮೋಹ ಮಾತ್ರ ನಯಾಪೈಸೆಯಷ್ಟೂ ಕಡಿಮೆಯಾಗಿಲ್ಲ.

ಅಂಜಲಿ ಎಂಬ ಶೃಂಗಾರದ ರಸಗೊಂಬೆ

ಈಗೀಗಷ್ಟೆ ತಮ್ಮ ಕೋಮಲ ಪಾದವನ್ನು ಚಿತ್ರರಂಗದಲ್ಲಿ ಊರುತ್ತಿರುವ ತಾರೆ. ಈಕೆಯೂ ಅಷ್ಟೇ ತಮ್ಮ ಸೊಗಸಾದ ಮೈಯ ಜೊತೆಗೆ ಹೊಟ್ಟೆ ಮೇಲಿನ ಸಣ್ಣ ಕುಳಿಯನ್ನೂ ಪ್ರದರ್ಶಿಸಿ ಪ್ರೇಕ್ಷಕರನ್ನು ಮೈಮರೆಸುತ್ತಿದ್ದಾರೆ. ಲಿಪ್ ಲಾಕ್ ಚುಂಬನಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


ಸೀರೆ, ಹೊಕ್ಕಳು, ಅದರ ಮೇಲೆ ದ್ರಾಕ್ಷಿ ಹಣ್ಣು, ಸೇಬಿನ ಹಣ್ಣು....ಅಬ್ಬಬ್ಬಬ್ಬಾ ವಿಶ್ವಾಮಿತ್ರನಂತಹ ಕಠೋರ ತಪಸ್ವಿ ಕೂಡ ಕ್ಲೀನ್ ಬೌಲ್ಡ್. ಇಷ್ಟೆಲ್ಲಾ ಸೊಗಸಾಗಿ ಹೊಕ್ಕಳನ್ನು ತೋರಿಸಬೇಕಾದರೆ ಸಿನೆಮಾ ತಾರೆಗಳು ಅದರ ಸೌಂದರ್ಯದ ಕಡೆಗೂ ಗಮನಕೊಡಬೇಕಾಗುತ್ತದೆ.

ಕೆಲವರಂತೂ ತಮ್ಮ ಅಂಕುಡೊಂಕು ಹೊಕ್ಕಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ರಿಪೇರಿ ಮಾಡಿಸಿಕೊಂಡದ್ದೂ ಉಂಟು. ಚಿತ್ರದಲ್ಲಿ ಹೊಕ್ಕಳು ತೋರಿಸಬೇಕು ಎಂದರೂ ಒಂದಷ್ಟು ಜಾಸ್ತಿ ಸಂಭಾವನೆಯನ್ನೇ ತೆರಬೇಕಾಗುತ್ತದೆ. ಹಾಗಾಗಿ ಹೊಕ್ಕುಳು ಎಂಬುದು 'ಸಿನೆಮಾ ಶಾಸ್ತ್ರ'ದ ಒಂದು ಭಾಗವಾಗಿದೆ.

ನಯನತಾರಾ, ತ್ರಿಷಾ, ಕಾಜಲ್ ಅಗರವಾಲ್, ತಾಪಸಿ, ಇಲಿಯಾನಾ ಡಿ ಕ್ರೂಜ್, ಅನುಷ್ಕಾ ಶೆಟ್ಟಿ, ತಮನ್ನಾ, ಶ್ರುತಿ ಹಾಸನ್, ಶ್ರಿಯಾ ಸರನ್, ಅಂಜನಿ ಎಂಬ ಹತ್ತು ತಾರೆಗಳ ಹೊಕ್ಕಳ ಶೃಂಗಾರ ಕಾವ್ಯ ಇಲ್ಲಿದೆ ನೋಡಿ.

English summary
In glam slot, there are different types of scenes like heroine wet in rain, hot kissing and smooching, wearing bikini and revealing costumes. There is another kind of hot scene that has most impressed the Indian movie buffs. That is navel show, which has one of the most striking feature.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada