ಕನ್ನಡದ ಯಾವ ನಟಿ ಡಾ.ರಾಜ್ ಗೆ ಅತ್ಯುತ್ತಮ ಜೋಡಿ ಆಗಿದ್ದರು?

By Suneel

ಕನ್ನಡದ ಸಾಂಸ್ಕೃತಿಕ ರಾಯಭಾರಿ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ರವರು ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ನಟ. ಅಂದು ಇವರ ಜೊತೆ ನಟಿಸಲು ಅವಕಾಶ ಸಿಕ್ಕಿದರೆ ಸಾಕು ನಾನೇ ಧನ್ಯಳು ಎಂದು ಕಾದು ಕುಳಿತಿದ್ದ ಅದೆಷ್ಟೋ ಮಹಿಳಾ ಕಲಾವಿದೆಯರಿದ್ದರು.[ಅಣ್ಣಾವ್ರ ಹುಟ್ಟುಹಬ್ಬ: ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ]

ಆದರೆ ಇವರ ಜೊತೆ ಹಲವು ನಟಿಯರು ಅಭಿನಯಿಸಿದರು ಸಹ ಅತಿಹೆಚ್ಚು ಚಿತ್ರಗಳಲ್ಲಿ ಡಾ.ರಾಜ್ ಜೊತೆ ಕಾಣಿಸಿಕೊಂಡವರು ಬೆರಳೆಣಿಕೆಯಷ್ಟು. ಅಲ್ಲದೇ ಡಾ.ರಾಜ್ ಜೊತೆ ಈ ನಟಿಯರು ಅಭಿನಯಿಸಿದ್ರೆನೇ ನೋಡಲು ಚೆಂದ ಎಂದು ಕನ್ನಡ ಸಿನಿಪ್ರಿಯರು ಅಂದುಕೊಂಡಿದ್ದು ನಿಜ. ಅಣ್ಣಾವ್ರ ಜೊತೆ ಕಾಣಿಸಿಕೊಂಡು, ಅವರ ಜೊತೆ ಅಭಿನಯಿಸಲು ಇವರೇ ಉತ್ತಮ ನಾಯಕಿಯರು ಎಂದು ಜನಪ್ರಿಯರಾದ ಅಂತಹ ನಟಿಮಣಿಯರು ಯಾರು ಗೊತ್ತಾ?

ರಾಜ್-ಜಯಂತಿ

ರಾಜ್-ಜಯಂತಿ

ಡಾ.ರಾಜ್ ಜೊತೆ ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮೊದಲ ಸ್ಥಾನ ಬಹುಭಾಷಾ ನಟಿ ಜಯಂತಿ ಅವರದ್ದು. 36 ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿರುವ ಜಯಂತಿ ರವರು 'ಜೇಡರ ಬಲೆ', 'ಬಾಳು ಬೆಳಗಿತು', 'ದೇವರ ಮಕ್ಕಳು', 'ಪ್ರೇಮಮಯಿ' 'ಕುಲ ಗೌರವ' ಎಂಬ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದರು. ಡಾ.ರಾಜ್ ಜೊತೆ ಜಯಂತಿ ರವರ ಅಭಿನಯ ನೋಡಿದ ಕನ್ನಡ ಕಲಾ ರಸಿಕರು ಇಬ್ಬರ ಅಭಿನಯಕ್ಕೆ ಮನಸೋತಿದ್ದರು.

ರಾಜ್-ಭಾರತಿ

ರಾಜ್-ಭಾರತಿ

ಇನ್ನೂ ವರನಟ ನೊಂದಿಗೆ ಅತಿಹೆಚ್ಚು ಚಿತ್ರಗಳಲ್ಲಿ ನಟಿಸಿದ ಎರಡನೇ ನಟಿ ಭಾರತಿ ವಿಷ್ಣುವರ್ಧನ್. 1967 ರಲ್ಲಿ ತೆರೆಕಂಡ 'ರಾಜಶೇಖರ' ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಭಾರತಿ ವಿಷ್ಣುವರ್ಧನ್, ಡಾ.ರಾಜ್ ಜೊತೆ ಅಭಿನಯಕ್ಕೆ ಅತ್ಯುತ್ತಮ ಜೋಡಿ ಎಂದು ಜನಪ್ರಿಯರಾದರು. 'ಮಧು ಮಾಲತಿ', 'ಎಮ್ಮೆ ತಮ್ಮಣ್ಣ', 'ಮೇಯರ್ ಮುತ್ತಣ್ಣ', 'ಬಂಗಾರ ಮನುಷ್ಯ', 'ಬೀದಿ ಬಸವ', 'ದೂರದ ಬೆಟ್ಟ' ಗಳಂತಹ ಜನಮಾನಸದಲ್ಲಿ ಇಂದಿಗೂ ಜನಪ್ರಿಯವಾಗಿರುವ ಚಿತ್ರಗಳಲ್ಲಿ ಭಾರತಿ ವಿಷ್ಣುವರ್ಧನ್ ರವರು ರಾಜ್ ಕುಮಾರ್ ಜೊತೆ ಅಭಿನಯಿಸಿದ್ದಾರೆ. ಇವರ ಅತ್ಯುತ್ತಮ ಕೆಮಿಸ್ಟ್ರಿಯಿಂದ 28 ಕ್ಕೂ ಹೆಚ್ಚು ಚಿತ್ರಗಳು ಮೂಡಿಬಂದಿವು.

ರಾಜ್-ಲೀಲಾವತಿ

ರಾಜ್-ಲೀಲಾವತಿ

ಅತ್ಯಂತ ಸಹಜವಾದ ಅಭಿನಯದಿಂದ ಚಿತ್ರಪ್ರೇಮಿಗಳ ಮನಸೆಳೆದ ನಟಿ ಲೀಲಾವತಿ ರವರು ಡಾ.ರಾಜ್ ಜೊತೆ ಮೊದಲ ಬಾರಿಗೆ ಅಭಿನಯಿಸಿದ್ದು 1960 ರಲ್ಲಿ 'ರಣಧೀರ ಕಂಠೀರವ' ಚಿತ್ರದಲ್ಲಿ. ನಂತರ 'ನಂದಾ ದೀಪ', 'ಸಿಪಾಯಿ ರಾಮು', 'ಭಕ್ತ ಕುಂಬಾರ', 'ಗಾಳಿ ಗೋಪುರ', 'ಕನ್ಯಾರತ್ನ', 'ಮನ ಮೆಚ್ಚಿದ ಮಡದಿ' ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ತೆರೆಯ ಮೇಲೆ ರಾಜ್ ಕುಮಾರ್ ಜೊತೆ ಕನ್ನಡ ಸಿನಿಪ್ರಿಯರ ಮನಗೆದ್ದ ಲೀಲಾವತಿಯವರು ಸಹ 28 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಾಜ್-ಕಲ್ಪನಾ

ರಾಜ್-ಕಲ್ಪನಾ

ರಾಜ್ ಮತ್ತು ಕಲ್ಪನಾ ಜೊತೆಯಲ್ಲಿ ಅಭಿನಯಿಸಿದ ಚಿತ್ರಗಳನ್ನು ನೋಡುವುದು ಎಂದರೇ ಹಿರಿಯರಿಗೆ ಮಾತ್ರವಲ್ಲದೇ ಯುವ ಮನಸ್ಸುಗಳಿಗೂ ಇಂದಿಗೂ ಅಚ್ಚು ಮೆಚ್ಚು. ಚಿತ್ರದಲ್ಲಿ ಕಲ್ಪನಾ ನಾಚಿಕೊಂಡ ಹಲವು ಸಂದರ್ಭಗಳೇ ಅವರ ಚಿತ್ರಗಳನ್ನು ನೋಡುವ ಕುತೂಹಲ ಹೆಚ್ಚಿಸುತ್ತವೆ. ಮಿನುಗುತಾರೆ ಕಲ್ಪನಾ ರವರು ಡಾ.ರಾಜ್ ಜೊತೆ 19 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ದಾರಿ ತಪ್ಪಿದ ಮಗ', 'ಕರುಳಿನ ಕರೆ', 'ದೇವರ ಮಕ್ಕಳು', 'ನಂದಿ', 'ಬಂಗಾರದ ಹೂವು' ಖ್ಯಾತ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿದ್ದಾರೆ.

ರಾಜ್-ಆರತಿ

ರಾಜ್-ಆರತಿ

ಕನ್ನಡ ಚಿತ್ರರಂಗದ ಅಭಿನೇತ್ರಿ ಎಂತಲೇ ಕರೆಸಿಕೊಳ್ಳುವ ಆರತಿ ರವರು ಸಹ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಡಾ.ರಾಜ್ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದರು. ಡಾ.ರಾಜ್ ಅವರೊಂದಿಗೆ 13 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಚಾಪು ಮೂಡಿಸಿದ ಆರತಿ ರವರು 'ರಾಜ ನನ್ನ ರಾಜ', 'ಪ್ರೇಮದ ಕಾಣಿಕೆ', 'ಬಂಗಾರದ ಪಂಜರ', 'ಸಿಪಾಯಿ ರಾಮು' ಚಿತ್ರಗಳಿಂದ ಹೆಚ್ಚು ಖ್ಯಾತಿಗಳಿಸಿದರು.

More from Filmibeat

English summary
Actresses, who acted in more films with Dr. Raj Kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X