For Quick Alerts
  ALLOW NOTIFICATIONS  
  For Daily Alerts

  ಶರಣ್‌ ಚಿತ್ರಕ್ಕೆ 'ಗುರು ಶಿಷ್ಯರು' ಎಂಬ ಹೆಸರು ಯಾಕೆ ಬಂತು..?

  |

  ನಟ ಶರಣ್‌ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ 'ಗುರು ಶಿಷ್ಯರು' ಚಿತ್ರ ನಾಳೆ(ಸಪ್ಟೆಂಬರ್ 23) ರಂದು ತೆರೆ ಕಾಣಲು ಸಜ್ಜಾಗಿದೆ. ವಿವಿಧ ವಿಶೇಷತೆಗಳಿಂದ 'ಗುರು ಶಿಷ್ಯರು' ಚಿತ್ರ ಪ್ರೇಕ್ಷರಲ್ಲಿ ಕಾತುರ ಹೆಚ್ಚಿಸಿದೆ. 'ಗುರು ಶಿಷ್ಯರು' ಚಿತ್ರ ಈಗಾಗಲೇ ಟ್ರೈಲರ್‌ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿದೆ.

  ಚಿತ್ರದ ಶೀರ್ಷಿಕೆಯೆ ಹೇಳುವಂತೆ ಇದೊಂದು ಗುರು-ಶಿಷ್ಯರ ಸಂಬಂಧದ ವಿಚಾರವನ್ನು ಕಥಾ ವಸ್ತುವಾಗಿಸಿಕೊಂಡಿರುವ ಸಿನಿಮಾವಾಗಿದೆ. ಶರಣ್‌ ಹಳ್ಳಿಗೆ ಬಂದ ಸಿಟಿ ಮೇಷ್ಟ್ರು ಪಾತ್ರದಲ್ಲಿ ನಟಿಸುತ್ತಿದ್ದು, ಗ್ರಾಮೀಣ ಕ್ರೀಡೆ ಖೋ-ಖೋವನ್ನು ಸಿನಿಮಾದ ಮುಖ್ಯ ವಿಚಾರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಟ್ರೈಲರ್‌ ನೋಡಿದ ಪ್ರೇಕ್ಷಕರು 'ಗುರು ಶಿಷ್ಯರು' ಚಿತ್ರದ ಬಗ್ಗೆ ಕಾತುರರಾಗಿದ್ದಾರೆ.

  ಈ ವಾರ ರಿಲೀಸ್‌ಗೆ ರೆಡಿಯಾಗಿರೋ ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ: ಗುರುಶಿಷ್ಯರಿಗೆ ಹೇಗಿದೆ ಕ್ರೇಜ್?ಈ ವಾರ ರಿಲೀಸ್‌ಗೆ ರೆಡಿಯಾಗಿರೋ ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ: ಗುರುಶಿಷ್ಯರಿಗೆ ಹೇಗಿದೆ ಕ್ರೇಜ್?

  'ಗುರು ಶಿಷ್ಯರು', ಈ ಹೆಸರು ಕನ್ನಡ ಚಿತ್ರರಂದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಹೆಸರು. ಹಿರಿಯ ನಟ ದ್ವಾರಕೀಶ್‌ ನಿರ್ಮಾಣದ ಸಾಹಸ ಸಿಂಹ ವಿಷ್ಣುವರ್ಧನ್‌, ದ್ವಾರಕೀಶ್‌,ಎಸ್‌.ಶಿವರಾಮ್‌, ಎಮ್‌.ಎಸ್‌ ಉಮೇಶ್‌ರಂತಹ ನಟ ದಿಗ್ಗಜರು ನಟಿಸಿರುವ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. 'ಗುರು ಶಿಷ್ಯರು' ಚಿತ್ರದ ಹಾಡುಗಳು ಇಂದಿಗೂ ಪ್ರಸ್ತುವಾಗಿದೆ. ಹೀಗಾಗಿ ಈ ಹೆಸರನ್ನು ನಟ ಶರಣ್‌ ಅಭಿನಯದ ಚಿತ್ರದಲ್ಲಿ ಯಾಕೆ ಮರುಬಳಕೆ ಮಾಡಿಕೊಂಡರು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈ ಬಗ್ಗೆ ಸ್ವತಃ ಚಿತ್ರದ ನಾಯಕ ಶರಣ್ ಮಾತನಾಡಿದ್ದಾರೆ.

  ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಶರಣ್‌, ಅಂದಿನ ಮತ್ತು ಇಂದಿನ 'ಗುರು ಶಿ‍ಷ್ಯರು' ಎರಡೂ ಚಿತ್ರಗಳು ಬೇರೆ ಬೇರೆ. ಚಿತ್ರದಲ್ಲಿನ ವಿಚಾರಗಳು ಬೇರೆ ಬೇರೆ. ಈ 'ಗುರು ಶಿಷ್ಯರು' ಎನ್ನುವ ಹೆಸರು ಯಾಕೆ ಬಂತು ಅಂದ್ರೆ, ಈ ಚಿತ್ರ ಒಬ್ಬ ಗುರು ಹಾಗೂ ಶಿಷ್ಯರ ಬಗ್ಗೆ ವಿಷಯಧಾರಿತ ಸಿನಿಮಾ. ಈ ಕಥೆನೆ ಹಾಗೆ ಇದೆ. ಎಲ್ಲೇ ಹೋದರು ಗುರುವಿನ ಜೊತೆ ಶಿಷ್ಯಂದಿರು ಕಾಣಿಸುತ್ತಾರೆ. ಗುರು ಇಲ್ಲದೇ ಶಿ‍ಷ್ಯ ಇಲ್ಲ. ಶಿಷ್ಯ ಇಲ್ಲದೇ ಗುರು ಇಲ್ಲ. ಈ ಸಿನಿಮಾಕ್ಕೆ ಎರಡು ಆತ್ಮಗಳು, ಎರಡು ಜೀವಗಳು. ಒಂದು ಖೋಖೋ ಆಟ, ಇನ್ನೊಂದು ಗುರು ಶಿಷ್ಯರ ಸಂಬಂಧ. ಈ ಚಿತ್ರದ ಬಗ್ಗೆ ಮಾತನಾಡುವಾಗ 'ಗುರು ಶಿ‍ಷ್ಯರು' ತರ ಟೈಟಲ್‌ ಬೇಕು ಎಂದರು. ಆಗ 'ಗುರು ಶಿಷ್ಯರು' ತರ ಯಾಕೆ ಅದೇ ಯಾಕೆ ಆಗಬಾರದು ಎಂದು ಆ ಕ್ಷಣಕ್ಕೆ ಅನಿಸಿತ್ತು ಎಂದರು.

  ಇನ್ನು ಆ 'ಗುರು ಶಿಷ್ಯರು' ದಾಖಲೆ ಬರೆದ ಚಿತ್ರ. ಆ ಹೆಸರನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದರೆ ಅದು ನಮಗೆ ಜವಾಬ್ದಾರಿಯ ಭಾರ. ಆ ಜವಾಬ್ದಾರಿಯ ಭಾರವನ್ನು ನಾವು ಎಷ್ಟು ಸಮರ್ಪಕವಾಗಿ, ಗೌರವ ಪೂರ್ವಕವಾಗಿ, ನಿಭಾಯಿಸುತ್ತೇನೆ ಎನ್ನುವುದು ಮುಖ್ಯ. ಯಾಕೆಂದರೆ 'ಗುರು ಶಿಷ್ಯರು' ಎನ್ನುವಂತಹ ಸಿನಿಮಾ ಒಂದೊಂದೇ ಸಾರಿ ಬರುತ್ತದೆ. ಮತ್ತೆ ಅಂತಹ ಚಿತ್ರಗಳನ್ನು ರಿಕ್ರೀಯೆಟ್‌ ಮಾಡಲು ಆಗುವುದಿಲ್ಲ. ಅದರ ಹತ್ತಿರವೂ ನಾವು ಹೋಗಬಾರದು. ಅದಕ್ಕಿರುವ ಸ್ಥಾನಮಾನ ಬೇರೆ. ಹಾಗಾಗಿ ಆ ಸಿನಿಮಾ ನಮ್ಮ 'ಗುರು ಶಿಷ್ಯರು' ಅಲ್ಲ ಎಂದರು ಶರಣ್‌.

  'ಗುರು ಶಿಷ್ಯರು' ಎನ್ನುವ ಸಂಬಂಧದ ಮೇಲೆ ಈ ಹೆಸರನ್ನು ಇಡಲಾಗಿದೆ. ನಮ್ಮ ಚಿತ್ರಕ್ಕೆ ಸಿಕ್ಕ ದೊಡ್ಡ ಆಶೀರ್ವಾದ ಅಂದರೆ, 1981ರಲ್ಲಿ ಬಂದ 'ಗುರು ಶಿಷ್ಯರು' ನಿರ್ಮಾಪಕರಾದ ದ್ವಾರಕೀಶ್‌ ಅವರು ಈ ಚಿತ್ರದ ಟೈಟಲ್‌ ಅನ್ನು ಲಾಂಚ್‌ ಮಾಡಿಕೊಟ್ಟರು. ದ್ವಾರಕೀಶ್‌ ಅವರ ಮನೆಯಲ್ಲೇ ಶುವಾಗಿದ್ದು ಈ ಸಿನಿಮಾ. ಸಿನಿಮಾ ಕತೆ ಹೇಳುತ್ತಿದ್ದಂತೆ ದ್ವಾರಕೀಶ್‌ ಚಿತ್ರದ ಟೈಟಲ್‌ 'ಗುರು ಶಿಷ್ಯರು' ಅಂತಾ ಗೆಸ್‌ ಮಾಡಿದ್ದರು. ಅದು 'ಗುರು ಶಿಷ್ಯರ ಚಿತ್ರದ ಒಂದು ಸಕರಾತ್ಮಕ ಆರಂಭ ಎಂದು ಶರಣ್‌ ಟೈಟಲ್‌ ಬಿಡುಗಡೆ ದಿನ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡರು.

  English summary
  Sandalwood actror Sharan opens up about Guru Shishyaru movie title. and he explain why they select Guru Shishyaru name as movie title.
  Friday, September 23, 2022, 11:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X