ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?

By Harshitha

ಇಷ್ಟು ದಿನ ಇಡೀ ಭಾರತದಲ್ಲಿ #HumFitTohIndiaFit ಚಾಲೆಂಜ್ ಚಾಲ್ತಿಯಲ್ಲಿ ಇತ್ತು. ಹೇಳಿ ಕೇಳಿ ಈ ಚಾಲೆಂಜ್ ಪ್ರತಿಯೊಬ್ಬರ ಫಿಟ್ನೆಸ್ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೂ ದೊಡ್ಡ ದೊಡ್ಡ ತಾರೆಯರು, ಹೆಸರಾಂತ ಕ್ರಿಕೆಟಿಗರು, ಖ್ಯಾತ ಸೆಲೆಬ್ರಿಟಿಗಳು ಈ ಚಾಲೆಂಜ್ ನ ಒಪ್ಪಿಕೊಂಡು ಜನ ಸಾಮಾನ್ಯರಿಗೆ ಸ್ಫೂರ್ತಿ ತುಂಬಿದರು.

ಆದ್ರೀಗ, #HumFitTohIndiaFit ಚಾಲೆಂಜ್ ಸೈಡಿಗೆ ಹೋಗಿದೆ. ಕಿಕಿ ಚಾಲೆಂಜ್ (#KiKiChallenge) ಟಾಪ್ ಟ್ರೆಂಡಿಂಗ್ ನಲ್ಲಿದೆ. ಅದು ಭಾರತದಲ್ಲಿ ಮಾತ್ರ ಅಲ್ಲ, ವಿಶ್ವದಾದ್ಯಂತ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಿಕಿ ಚಾಲೆಂಜ್ ಸ್ವಲ್ಪ ಡೇಂಜರಸ್ ಅಂತ ಗೊತ್ತಿದ್ದರೂ, ಸವಾಲನ್ನು ಸ್ವೀಕರಿಸಿ ಹಲವರು ಪೆಟ್ಟು ಮಾಡಿಕೊಂಡಿದ್ದಾರೆ. ಈ ಚಾಲೆಂಜ್ ನಿಂದಾಗಿ ಎಷ್ಟೋ ಅವಘಡಗಳು ಸಂಭವಿಸಿದೆ. ಅಷ್ಟಕ್ಕೂ ಈ ಚಾಲೆಂಜ್ ಸ್ಪೇನ್, ಈಜಿಪ್ಟ್ ಹಾಗೂ UAE ನಲ್ಲಿ ಬ್ಯಾನ್ ಆಗಿದೆ.

ಕಿಕಿ ಚಾಲೆಂಜ್ ಮಾಡಲು ಹೋಗಿ ಆಗಿರುವ ಅನಾಹುತಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದರೂ, ನಟಿಯರಾದ ಅದಾ ಶರ್ಮಾ ಹಾಗೂ ನೋರಾ ಫತೇಹಿ ಅದೇ ಚಾಲೆಂಜ್ ನ ಸ್ವೀಕರಿಸಿ ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಏನು ಹೇಳಬೇಕು.?!

ಅಷ್ಟಕ್ಕೂ, ಏನೀ ಕಿಕಿ ಚಾಲೆಂಜ್.? ಅದರಿಂದ ಆಗಿರುವ ಅವಾಂತರಗಳು ಏನು.? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ, ನೋಡಿ...

ಏನಿದು ಕಿಕಿ ಚಾಲೆಂಜ್.?

ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು.

ಹೊಸ ತಿರುವು ಕೊಟ್ಟ ಶಿಗ್ಗಿ ಗೆಳೆಯ

ಶಿಗ್ಗಿ ಗೆಳೆಯ ಅದೇ 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾರಿನಿಂದ ಕೆಳಗೆ ಇಳಿದು ರೋಡ್ ನಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.!

ಚಲಿಸುತ್ತಿರುವ ಕಾರಿನಿಂದ ಇಳಿದು ಡ್ಯಾನ್ಸ್.!

ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು.

ಡೇಂಜರಸ್ ಸ್ಟಂಟ್.!

'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಸ್ಪೇನ್, ಈಜಿಪ್ಟ್ ಹಾಗೂ UAE ಸೇರಿದಂತೆ ಕೆಲ ದೇಶಗಳಲ್ಲಿ ಈ ಸವಾಲನ್ನು ಬ್ಯಾನ್ ಮಾಡಲಾಗಿದೆ.

ಭಾರತದಲ್ಲಿ ನಿಂತಿಲ್ಲ.!

'ಕಿಕಿ' ಸವಾಲನ್ನು ಸ್ವೀಕರಿಸಬೇಡಿ ಅಂತ ಪಂಜಾಬ್, ಉತ್ತರ ಪ್ರದೇಶ ಹಾಗೂ ಮುಂಬೈ ಪೊಲೀಸರು ಜನಸಾಮಾನ್ಯರಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ, ನೆಟ್ಟಿಗರು ಮಾತ್ರ ಈ ಡ್ಯಾನ್ಸ್ ಚಾಲೆಂಜ್ ನ ಬಿಡುವ ಹಾಗೇ ಕಾಣುತ್ತಿಲ್ಲ.

ತಾರೆಯರು ಹೀಗೆ ಮಾಡ್ತಿದ್ದಾರಲ್ಲ.!

ಇನ್ನೂ ತಾರೆಯರು ಕೂಡ ಕಮ್ಮಿ ಏನಿಲ್ಲ. ''ಕಿಕಿ ಚಾಲೆಂಜ್'ನ ಸ್ವೀಕರಿಸದೇ ಇರಲು ಆಗಲೇ ಇಲ್ಲ'' ಎಂದು ನಿಂತ ಕಾರಿನಿಂದ ಇಳಿದು, ಡ್ಯಾನ್ಸ್ ಮಾಡಿದ್ದಾರೆ'' ನಟಿ ಅದಾ ಶರ್ಮಾ.

ದೇಸಿ ಟಚ್ ಕೊಟ್ಟ ನೋರಾ ಫತೇಹಿ

ಇನ್ನೂ ಬಾಲಿವುಡ್ ನಟಿ ನೋರಾ ಫತೇಹಿ ಕೂಡ 'ಕಿಕಿ ಚಾಲೆಂಜ್' ಗೆ ದೇಸಿ ಟಚ್ ಕೊಟ್ಟು ವಿಡಿಯೋ ಮಾಡಿದ್ದಾರೆ.

ತಾರೆಯರು ಮಾಡಿದ್ದು ಸರಿನಾ.?

ತಾರೆಯರು ಮಾಡಿದ್ದು ಸರಿನಾ.?

ತಾರೆಯರೇ 'ಕಿಕಿ ಚಾಲೆಂಜ್' ಕ್ರೇಜ್ ಗೆ ಕ್ಲೀನ್ ಬೋಲ್ಡ್ ಆಗಿರುವಾಗ, ಇನ್ನೂ ಜನ ಸಾಮಾನ್ಯರು ಕಮ್ಮಿನಾ.? ತಾರೆಯರಿಗಿಂತ ಒಂದು ಸ್ಟೆಪ್ ಮುಂದಕ್ಕೆ ಹೋಗಿ, ಅಪಾಯಕಾರಿ ಡ್ಯಾನ್ಸ್ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಹಾಗ್ನೋಡಿದ್ರೆ, ಸಮಾಜಕ್ಕೆ ತಾರೆಯರು ಮಾದರಿ ಆಗಿರಬೇಕು. ''ಕಿಕಿ' ಸ್ಟಂಟ್ ಡೇಂಜರಸ್... ಅದನ್ನ ಮಾಡಬೇಡಿ'' ಅಂತ ಪೊಲೀಸರೇ ಮನವಿ ಮಾಡಿಕೊಳ್ಳುತ್ತಿರುವಾಗ, ನೋರಾ ಫತೇಹಿ ಹಾಗೂ ಅದಾ ಶರ್ಮಾ ಮಾಡಿರುವ ಕೆಲಸ ಸರಿ ಅಂತೀರಾ.? ಇದಕ್ಕೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....

More from Filmibeat

English summary
Bollywood Actress Adah Sharma and Nora Fatehi accepts Dangerous KiKi Challenge. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X