ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ದ ಫ್ಲ್ಯಾಟ್ ಖರೀದಿಸಿದ ಅದಾ ಶರ್ಮಾ?

ಈ ವರ್ಷ ಬಿಡುಗಡೆಯಾಗಿ ಭಾರೀ ವಿವಾದ ಮತ್ತು ಖ್ಯಾತಿ ಗಳಿಸಿದ ದಿ ಕೇರಳ ಸ್ಟೋರಿ ಸಿನಿಮಾದ ನಟಿ ಅದಾ ಶರ್ಮಾ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ದ ಮುಂಬೈ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ನಟ ಸುಶಾಂತ್ 2020 ರಲ್ಲಿ ಅಸಹಜವಾಗಿ ಸಾವಿಗಿಡಾಗಿದ್ದರು. ಬಳಿಕ ಆ ಫ್ಲ್ಯಾಟ್ ಖಾಲಿಯಾಗಿತ್ತು.

ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ದ ಬಾಂದ್ರಾದ ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್‌ನಲ್ಲಿ ಅದಾ ಶರ್ಮಾ ಫ್ಲ್ಯಾಟ್ ಖರೀದಿಸುತ್ತಿದ್ದಾರೆ ಎಂದು ಬಾಲಿವುಡ್ ಪಾಪರಾಜೋ ಪೋಸ್ಟ್ ಮಾಡಿದೆ. ಇದಾದ ಬೆನ್ನಲ್ಲೇ ನಟಿ ಅದಾ ಶರ್ಮಾ ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ದ ಫ್ಲ್ಯಾಟ್ ಖರೀದಿಸಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳು ವೈರಲ್ ಆಗಿವೆ.

adah-sharma-bought-sushant-singh-rajputs-flat-report

ಎಂಟರ್‌ಟೈನ್ಮೆಂಟ್ ಪೋರ್ಟಲ್ ಟೆಲ್ಲಿಚಕ್ಕರ್ (TellyChakkar ) ಅದಾ ಶರ್ಮಾ ಅವರ ತಂಡದೊಂದಿಗೆ ಸಂಪರ್ಕದಲ್ಲಿದ್ದು ಫ್ಲ್ಯಾಟ್ ಖರೀದಿಸಿರುವ ಸುದ್ದಿ 'ನಿಜ' ಎಂದು ದೃಢಪಡಿಸಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಫ್ಲಾಟ್ ಅನ್ನು ಅದಾ ಶರ್ಮಾ ಖರೀದಿಸುವ ಸುದ್ದಿಯನ್ನು ಟೆಲ್ಲಿಚಕ್ಕರ್ ಪ್ರತ್ಯೇಕವಾಗಿ ವರದಿ ಮಾಡಿದೆ. ಆದರೆ, ಅದಾ ಶರ್ಮಾ ಈ ಫ್ಲ್ಯಾಟ್‌ಗೆ ಯಾವಾಗ ತೆರಳುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ, ಮನೆಯ ಬಾಡಿಗೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿತ್ತು. ಅನೇಕರು ಮನೆಯನ್ನು ಖರೀದಿಸಲು ಆಸಕ್ತಿ ತೋರಿಸಿದ್ದರು. ಇನ್ನು, ಪೋರ್ಟಲ್ ಇನ್‌ಸ್ಟಾಗ್ರಾಮ್‌ನಲ್ಲಿ ಅದಾ ಫ್ಲಾಟ್ ಖರೀದಿಸಿದ ವರದಿಯನ್ನು ಸಹ ಹಂಚಿಕೊಂಡಿದೆ. ಅದಕ್ಕೆ ಸಾಕಷ್ಟು ಮಂದಿ ಅದಾ ಶರ್ಮಾ ಅವರ ಧೈರ್ಯವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

ಅದಾ ಶರ್ಮಾ ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಅವರ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಪಿಂಕ್‌ವಿಲ್ಲಾ ಕೂಡ ಈ ಬಗ್ಗೆ ವಿಡಿಯೋ ಹಂಚಿಕೊಂಡಿದೆ. ನಟಿ ಬಾಂದ್ರಾದ ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡುತ್ತಿರುವುದು, ವಿಡಿಯೋದಲ್ಲಿ ಮನೆಯ ಟೆರೇಸ್ ಮೇಲೆ ನಿಂತಿರುವುದನ್ನು ಕಾಣಬಹುದು. ಇದರ ಜೊತೆಗೆ ಅನೇಕ ಮಾಧ್ಯಮಗಳು ಅದಾ ಶರ್ಮಾ ಅವರನ್ನು ಸುತ್ತುವರೆದು, ಫ್ಲ್ಯಾಟ್ ಖರೀದಿಸಿದ್ದಾರೋ ಇಲ್ಲವೋ ಎಂದು ಪ್ರಶ್ನಿಸುತ್ತಿದ್ದಾರೆ.

ಆದರೆ, ಫ್ಲ್ಯಾಟ್ ಖರೀದಿ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದೆ, ಏನೇ ಆದರೂ ಮೊದಲು ನಿಮಗೆ ತಿಳಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ. ಆದರೆ ಅವರು ಸುಶಾಂತ್ ಸಿಂಗ್ ರಜಪೂತ್ ಅವರು ವಾಸವಿದ್ದ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂದು ಅನೇಕ ಮೂಲಗಳು ಹೇಳಿದ್ದು, ಅಭಿಮಾನಿಗಳು ಆಕೆಯನ್ನು ಹೊಗಳುತ್ತಿದ್ದಾರೆ.

adah-sharma-bought-sushant-singh-rajputs-flat-report

ನಟ ಸುಶಾಂತ್ ಸಿಂಗ್ ರಜಪೂತ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ನಿಧನರಾದರು. 2021 ರಲ್ಲಿ ಅವರು ವಾಸಿಸುತ್ತಿದ್ದ ಮುಂಬೈ ಮನೆ ಬಾಡಿಗೆಗೆ ಇದೆ ಎಂದು ವರದಿಯಾಗಿತ್ತು. ಮನೆಯಿಂದ ನೇರವಾಗಿ ಸುಂದರ ಸಮುದ್ರ ಕಾಣುವ ಈ ಎರಡು ಅಂತಸ್ತಿನ ಆಸ್ತಿಗಾಗಿ ಮನೆಗಾಗಿ ನಟ ತಿಂಗಳಿಗೆ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ವರದಿಯಾಗಿದೆ.

ಅಸಹಜವಾಗಿ ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು, ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪ್ರಕರಣದ ಹಣಕಾಸು ಮತ್ತು ಮಾದಕವಸ್ತು ಸಂಬಂಧಿತ ಕೋನಗಳನ್ನು ತನಿಖೆ ನಡೆಸುತ್ತಿದೆ. ಮೂರು ವರ್ಷ ಕಳೆದರೂ ಸಿಬಿಐಗೆ ಅವರ ಸಾವಿನ ತನಿಖೆಯನ್ನು ಮುಗಿಸಲು ಇನ್ನು ಸಾಧ್ಯವಾಗಿಲ್ಲ.

More from Filmibeat

English summary
Adah Sharma bought Sushant Singh Rajput's flat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X