ನನಗೆ ಪುನೀತ್ ರಾಜ್ ಕುಮಾರ್ ಅವರೇ ಸ್ಫೂರ್ತಿ, ಅಪ್ಪುಗೆ ಸಲಾಂ ಹೊಡೆದ ಬಾಲಿವುಡ್‌ನ ಖ್ಯಾತ ನಟಿ..!

ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಅಸಂಖ್ಯಾತ ಜನರ ಪರಮಾತ್ಮ ಪುನೀತ್ ರಾಜ್‌ಕುಮಾರ್ ಅಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದವರಿಗೆ ಕೂಡ ಅಚ್ಚು ಮೆಚ್ಚು.

ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ ಚಿತ್ರರಂಗದ ಅನೇಕ ತಾರೆಯರ ಫೇವರೆಟ್ ವ್ಯಕ್ತಿ ಅಂದರೆ ಅಪ್ಪು. ಉದಾಹರಣೆಗೆ ಅದಾ ಶರ್ಮಾ. ಹೌದು, ಅದಾ ಶರ್ಮಾ. ಬಾಲಿವುಡ್‌ನ ಕೆಂಗುಲಾಬಿ. ಸದಾ ಕಾಲ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುವ ಮೂಲಕ ಕಣ್ಮನ ಸೆಳೆಯುವ ಅದಾ ಶರ್ಮಾ ಕನ್ನಡ ಚಿತ್ರರಂಗಕ್ಕೆ ಸರಿಯಾಗಿ 09 ವರ್ಷಗಳ ಹಿಂದೆ ಬಂದಿದ್ದರು. ಪುನೀತ್ ರಾಜ್ ಕುಮಾರ್ ಅವರ ರಣ ವಿಕ್ರಮ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಕನ್ನಡಿಗರ ಹೃದಯವನ್ನು ಗೆಲ್ಲುವ ಪ್ರಯತ್ನವನ್ನು ಮಾಡಿದ್ದರು.

Adah Sharma Remembers Puneeth Rajkumar on 9Years of Rana Vikrama says she aims to be like him

ಇಂಥಾ ಅದಾ ಶರ್ಮಾ ಸದ್ಯ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಸರಳತೆ ವಿನಯತೆಯನ್ನು ನೆನಪು ಮಾಡಿಕೊಂಡು ನಾನು ಅವರಂತೆಯೇ ಹೆಸರು ಮಾಡಬೇಕು ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅದಾ ಶರ್ಮಾ, 09 ವರ್ಷಗಳ ಹಿಂದೆ ನಾನು ಕನ್ನಡದ ದೊಡ್ಡ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿದೆ, ಬೆಂಗಳೂರು ವಿಮಾನ ನಿಲ್ದಾಣದಿಂದ ನಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಹೋಗುವಷ್ಟರಲ್ಲಿ ಸುಮಾರು 50 ಹೋಡಿಂಗ್‌ಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರ ಫೋಟೊ ಇತ್ತು. ಎಲ್ಲವೂ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೇ ಎಂದು ಹೇಳಿದ್ದಾರೆ.

ಇನ್ನು ಚಿತ್ರೀಕರಣದ ಸ್ಥಳದಲ್ಲಿ ಅವರನ್ನು ನೋಡಲು ಎಷ್ಟೊಂದು ಜನ ಕಾಯುತ್ತಿದ್ದರು ಎಂದು ನೆನಪು ಮಾಡಿಕೊಂಡಿರುವ ಅದಾ ಶರ್ಮಾ ಸುಮಾರು ಜನ ಇಂತಹ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿದ್ದೀಯಾ ನೀನೆ ಅದೃಷ್ಟವಂತೆ ಎಂದು ಹೇಳುತ್ತಿದ್ದರು ಎಂದು ಹೇಳಿದ್ದಾರೆ.

ಅವರ ಜೊತೆ ಆಕ್ಟ್ ಮಾಡುವಾಗ ನಾನು ತುಂಬಾ ನರ್ವಸ್ ಆಗಿದ್ದೆ ಆದರೆ ಅವರದ್ದು ಸಂಪೂರ್ಣ ತದ್ವಿರುದ್ದ ವ್ಯಕ್ತಿತ್ವವಾಗಿತ್ತು ಎಂದಿರುವ ಅದಾ ತುಂಬಾ ವಿನಯದಿಂದ ಅವರು ನನ್ನ ಜೊತೆ ನಡೆದುಕೊಂಡರು ಎಂದು ಹೇಳಿದ್ದಾರೆ. ತನ್ನ ಸ್ಟಾರ್‌ಡಮ್‌ನ ಬೇರೆಯವರ ಮುಖದಲ್ಲಿ ನಗು ಮೂಡಿಸಲು ಬಳಸಿಕೊಂಡು, ತನ್ನೆಲ್ಲ ಅಭಿಮಾನಿಗಳನ್ನು ವ್ಯೆಯಕ್ತಿಕವಾಗಿ ಭೇಟಿ ಮಾಡುತ್ತಿದ್ದ ಪುನೀತ್ ಪ್ರತಿದಿನ ಸೆಟ್‌ಗೆ ಸರಿಯಾದ ಸಮಯಕ್ಕೆ ಬರುತ್ತಿದ್ದರು ಎಂದು ಹೇಳಿರುವ ಅದಾ ಶರ್ಮಾ ಅವರು ಅದ್ಭುತ ಡ್ಯಾನ್ಸರ್ ಆಗಿದ್ದರು ಕೂಡ ರಿಹರ್ಸಲ್ ತಪ್ಪಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನನಗೆ ಕನ್ನಡ ಭಾಷೆ ಗೊತ್ತಿರದ ಕಾರಣ ನನಗೆ ಅನುವಾದ ಮಾಡಿ ಹೇಳುತ್ತಿದ್ದರು, ತಮ್ಮ ಪತ್ನಿ ಮತ್ತು ಕುಟುಂಬದ ಕುರಿತು ಮಾತನಾಡುತ್ತಿದ್ದರು ಎಂದು ಹೇಳಿರುವ ಅದಾ ಶರ್ಮಾ, 45 ಡಿಗ್ರಿ ಬಿಸಿಲಿನಲ್ಲಿ ಕೂಡ ಎಲ್ಲರ ಉತ್ಸಾಹ ಕಡಿಮೆಯಾಗದಂತೆ ಅವರು ಸೆಟ್‌ನಲ್ಲಿ ನೋಡಿಕೊಳ್ಳುತ್ತಿದ್ದರು, ಎಲ್ಲರ ಜೊತೆ ಹೊಂದಿಕೊಂಡು ಅಭಿನಯಿಸುತ್ತಿದ್ದರು ಎಂದು ಹೇಳಿದ್ದಾರೆ. ನನಗೆ ಅವರೇ ಸ್ಫೂರ್ತಿ ಮುಂದೊಂದು ದಿನ ನಾನು ಸ್ಟಾರ್ ಆದರೆ ನಾನು ಅವರಂತೆಯೇ ನಡೆದುಕೊಳ್ಳಬೇಕು ಅವರಂತೆಯೇ ತೆರೆ ಮೇಲೆ ಮತ್ತು ತೆರೆಯ ಹಿಂದೆ ಇರಬೇಕು ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನೀವು ಎಲ್ಲಿಯೇ ಇದ್ದರು ನಿಮಗೆ ನನ್ನ ಧನ್ಯವಾದ ಪುನೀತ್ ರಾಜ್ ಕುಮಾರ್ ಎಂದಿರುವ ಅದಾ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಕೂಡ ತಮಗೆ ಅತ್ಯುತ್ತಮ ಚಿತ್ರವನ್ನು ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X