ನ್ಯೂಸ್ ಪೇಪರ್ ಡ್ರೆಸ್ ಧರಿಸಿ, ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ ಪುನೀತ್ ನಾಯಕಿ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದ ಬೆಳ್ಳಿ ಬೊಂಬೆ ಅದಾ ಶರ್ಮಾ. ಸದಾ ಒಂದಲ್ಲಾ ಒಂದು ಫೋಟೋ, ವಿಡಿಯೋ ಪೋಸ್ಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಆಕ್ಟೀವ್ ಆಗಿರುವವರು ಅದಾ ಶರ್ಮಾ.
ತಮ್ಮ ಫ್ಯಾಶನ್ ಸೆನ್ಸ್ ನಿಂದಲೇ ಹಲವು ಬಾರಿ ಸುದ್ದಿ ಆಗಿರುವ ಅದಾ ಶರ್ಮಾ, ಇತ್ತೀಚೆಗಷ್ಟೆ ನ್ಯೂಸ್ ಪೇಪರ್ ಡ್ರೆಸ್ ಧರಿಸಿದ್ದರು.! ಹೌದು, ಫೆಮಿನಾ ಬ್ಯೂಟಿ ಅವಾರ್ಡ್ಸ್-2019 ಇತ್ತೀಚೆಗಷ್ಟೇ ನಡೆದಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅದಾ ಶರ್ಮಾ ಆಯ್ಕೆ ಮಾಡಿಕೊಂಡಿದ್ದ ಉಡುಪು 'ನ್ಯೂಸ್ ಪೇಪರ್ ಡ್ರೆಸ್'.!
ನ್ಯೂಸ್ ಪೇಪರ್ ನಿಂದಲೇ ಸಿದ್ಧ ಪಡಿಸಿದ್ದ ಗೌನ್ ನ ಅದಾ ಶರ್ಮಾ ಧರಿಸಿದ್ದರು. ಸುದ್ದಿ ಪತ್ರಿಕೆಯಿಂದ ರೆಡಿ ಮಾಡಲಾಗಿದ್ದ ಗೌನ್ ನ ಅದಾ ಶರ್ಮಾ ಕ್ಯಾರಿ ಮಾಡಿರುವ ರೀತಿ ನೋಡಿ ಹಲವರು ಕ್ಲೀನ್ ಬೌಲ್ಡ್ ಆಗಿದ್ದಾರೆ.

ನ್ಯೂಸ್ ಪೇಪರ್ ಗೌನ್ ತೊಟ್ಟಿರುವ ಅದಾ ಶರ್ಮಾ ಫೋಟೋಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಲಭ್ಯವಾಗಿದೆ. ಅಂದ್ಹಾಗೆ, ಈ ವಿಭಿನ್ನ ಗೌನ್ ನ ಸಿದ್ಧ ಪಡಿಸಿದವರು ಸ್ವತಃ ಅದಾ ಶರ್ಮಾ ಮತ್ತು ಫ್ಯಾಶನ್ ಸ್ಟೈಲಿಸ್ಟ್ ಜೂಹಿ ಅಲಿ.
ಸಿನಿಮಾ ವಿಚಾರಕ್ಕೆ ಬಂದರೆ, 'ಕಮಾಂಡೋ-3', 'ಚಾರ್ಲಿ ಚಾಪ್ಲಿನ್-2' ಚಿತ್ರಗಳ ಚಿತ್ರೀಕರಣದಲ್ಲಿ ಅದಾ ಶರ್ಮಾ ಬಿಜಿಯಾಗಿದ್ದಾರೆ. 1920, 'ಭಾಗಿ-2', 'ಹಾರ್ಟ್ ಅಟ್ಯಾಕ್' ಮುಂತಾದ ಚಿತ್ರಗಳಿಂದ ಜನಪ್ರಿಯತೆ ಗಳಿಸಿದವರು ಅದಾ ಶರ್ಮಾ.


Click it and Unblock the Notifications











