ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆಡಂ ಪಾಷಾ ಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾಗೆ ತೀವ್ರ ಅನಾರೋಗ್ಯ ಉಂಟಾಗಿರುವ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Recommended Video
ಆಸ್ಪತ್ರೆಗೆ ದಾಖಲಾದ ಡ್ರ್ಯಾಗ್ ಕ್ವೀನ್ | Adam Pasha | Filmibeat Kannada
ಕೆಲವು ದಿನಗಳಿಂದ ಆಡಂ ಪಾಷಾಗೆ ಜಾಂಡಿಸ್ ಆಗಿತ್ತು. ಆರಂಭದಲ್ಲಿ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ಅವರಿಗೆ ಅನಾರೋಗ್ಯ ಹೆಚ್ಚಾದ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 20 ರಂದು ಆಡಂ ಪಾಷಾ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಂ ಪಾಷಾಗೆ ಡ್ರಗ್ಸ್ ಪ್ರಕರಣದ ರೂವಾರಿ ಅನಿಕಾ ಜೊತೆಗೆ ಸಂಬಂಧವಿತ್ತು ಎನ್ನಲಾಗಿದೆ.

ಅನಿಕಾ ತಮಗೆ ಆತ್ಮೀಯರು ಎಂದು ಈ ಹಿಂದೆ ಒಮ್ಮೆ ಆಡಂ ಪಾಷಾ ಹೇಳಿಕೊಂಡಿದ್ದರು. 'ಅನಿಕಾ ನನ್ನ ಗೆಳತಿ, ಆದರೆ ಆಕೆಯ ವ್ಯವಹಾರದ ಬಗ್ಗೆ ನನಗೆ ಗೊತ್ತಿರಲಿಲ್ಲ' ಎಂದಿದ್ದರು ಆಡಂ ಪಾಷಾ.
ಅನಿಕಾ ಳಿಂದ ಡ್ರಗ್ಸ್ ತೆಗೆದುಕೊಂಡಿರುವ ಆರೋಪದ ಮೇಲೆ ಆಡಂ ಪಾಷಾ ಅನ್ನು ಬಂಧಿಸಲಾಗಿದೆ. ಆಡಂ ಪಾಷಾ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದರು.
More from Filmibeat
English summary
Former Bigg Boss contestant Adam Pasha shifted to KC General hospital from jail due to health issue.


Click it and Unblock the Notifications











