»   » ಬಾಕ್ಸಾಫೀಸಲ್ಲಿ ಅದ್ದೂರಿ ಚಿತ್ರಕ್ಕೆ ಭರ್ಜರಿ ಓಪನಿಂಗ್

ಬಾಕ್ಸಾಫೀಸಲ್ಲಿ ಅದ್ದೂರಿ ಚಿತ್ರಕ್ಕೆ ಭರ್ಜರಿ ಓಪನಿಂಗ್

Posted By:
Subscribe to Filmibeat Kannada

ಅಂಬಾರಿ ಬಳಿಕ ಎ ಪಿ ಅರ್ಜುನ್ ಆಕ್ಷನ್ ಕಟ್‌ನಲ್ಲಿ ಮೂಡಿಬಂದಿರುವ ದ್ವಿತೀಯ 'ಅದ್ದೂರಿ' ಚಿತ್ರಕ್ಕೆ ಬಾಕ್ಸಾಫೀಸಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಇತ್ತೀಚೆಗಿನ ಮೀಡಿಯಂ ಬಜೆಟ್ ಚಿತ್ರಗಲ್ಲಿ 'ಅದ್ದೂರಿ'ಗೆ ಸಿಕ್ಕಿರುವ ಓಪನಿಂಗ್ ಗಾಂಧಿನಗರದ ಪಂಡಿತರನ್ನು ಉಕ್ಕಿರಿ ಬಿಕ್ಕಿರಿಗೊಳಿಸಿದೆ.

ಮೀಡಿಯಂ ಬಜೆಟ್ ಚಿತ್ರಗಳಾದ 'ಗೋವಿಂದಾಯ ನಮಃ' ಹಾಗೂ 'ಜಾನೂ' ಚಿತ್ರಗಳಿಗೆ ಹೋಲಿಸಿದರೆ ಅದ್ದೂರಿಗೆ ಏನೂ ಅಷ್ಟಾಗಿ ಹೈಪ್ ಇರಲಿಲಿಲ್ಲ. ಆದರೆ ಅದ್ದೂರಿ ಚಿತ್ರ ಉಳಿದೆರಡು ಚಿತ್ರಗಳಿಗಿಂತ ಬಾಕ್ಸಾಫೀಸರಲ್ಲಿ ಒಂಚೂರು ಸೌಂಡು ಜಾಸ್ತಿನೇ ಮಾಡಿದೆ. ಇದಕ್ಕೆ ಕಾರಣವಾಗಿದ್ದು ಚಿತ್ರದ ಹಾಡುಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆರಂಭದಿಂದಲೂ 'ಅದ್ದೂರಿ' ಚಿತ್ರತಂಡ ಕುತೂಹಲ ಉಳಿಸಿಕೊಂಡು ಬಂದಿತ್ತು. ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರೆಲ್ಲರ ಊಹೆಗಳು ಉಲ್ಟಾಪಲ್ಟಾ ಆಗುವಂತೆ ಭರ್ಜರಿ ಓಪನಿಂಗ್ ಸಿಕ್ಕಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ 'ಅದ್ದೂರಿ' ಚಿತ್ರ ವಿತರಕ ಬಾಷಾ ಮೂಕ ವಿಸ್ಮಿತರಾಗಿದ್ದಾರಂತೆ. ವಿತರಕರ ಜೇಬು ಕೂಡ 'ಅದ್ದೂರಿ'ಯಾಗಿಯೇ ಭರ್ತಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. "ಹೊಸಬರ ಚಿತ್ರಕ್ಕೆ ವ್ಯಕ್ತವಾದ ಅನಿರೀಕ್ಷಿತ ಪ್ರತಿಕ್ರಿಯೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಯೂತ್‌ಫುಲ್ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ" ಎಂದಿದ್ದಾರೆ ವಿತರಕ ಬಾಷಾ.

ಮಧ್ಯಾಹ್ನ ಆಟ ಹಾಗೂ ಸಂಜೆ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಮತ್ತೊಂದು ಬ್ಲಾಕ್ ಬಸ್ಟರ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಈಗಾಗಲೆ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಚುರುಕಾಗಿದ್ದು ಚಿತ್ರದ ಗಳಿಕೆ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ ಬಾಷಾ.

ಮೈಸೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಕೇಂದ್ರಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿ ಕೇಂದ್ರಗಳೂ 'ಅದ್ದೂರಿ' ಚಿತ್ರ ಅದ್ದೂರಿಯಾಗಿಯೇ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿರುವ ರಾಜ್ಯದ 116 ಕೇಂದ್ರಗಳ ಎಲ್ಲೂ ಎರಡನೇ ಮಾತು ಕೇಳಿಬಂದಿಲ್ಲವಂತೆ . ಎಲ್ಲರದ್ದೂ ಒಂದೇ ಮಾತು ಚಿತ್ರ ಸೂಪರ್.

ಕೊಳ್ಳೆಗಾಲ, ಶಿಕಾರಿಪುರ, ಸಾಗರ, ಕಡೂರು, ರಾಮನಗರ ಹಾಗೂ ಹಿರಿಯೂರುನಲ್ಲೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸರ್ಜಾ ಕುಟುಂಬದ ಮತ್ತೊಂದು ಕುಡಿ ಧ್ರುವ ಸರ್ಜಾ ನಿರೀಕ್ಷೆಯಂತೆ ಚೊಚ್ಚಲ ಚಿತ್ರದಲ್ಲೇ ಗಮನಸೆಳೆದಿದ್ದಾರೆ. ನೋಡಲು ದೃಢಕಾಯ, ಆಕ್ಷನ್ ಚಿತ್ರಗಳಿಗೆ ಹೇಳಿ ಮಾಡಿಸಿದ ಮೈಕಟ್ಟಿಗೆ ಪ್ರೇಕ್ಷಕರು ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ.

ಚೊಚ್ಚಲ ಚಿತ್ರದ ಮೂಲಕ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗುತ್ತೇನೆ ಎಂಬ ವಿಶ್ವಾಸ ಧ್ರುವ ಸರ್ಜಾ ವ್ಯಕ್ತಪಡಿಸಿದ್ದರು. ಆದರೆ ಅವರು ಡಿಸ್ಟಿಂಕ್ಷನ್‍‌ನಲ್ಲಿ ಪಾಸಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಬಾಲ್ಡ್ ವಿನ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಧ್ರುವ ಸರ್ಜಾ 94 ಕೆ.ಜಿ ತೂಕದ ದಢೂತಿ ಆಸಾಮಿ ಆಗಿದ್ದರು. 'ಅದ್ದೂರಿ' ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು 64 ಕೆ ಜಿಗೆ ಇಳಿಸಿಕೊಂಡು ಸ್ಮಾರ್ಟ್ ಅಂಡ್ ಫಿಟ್ ಆಗಿದ್ದು ವಿಶೇಷ. (ಒನ್‌ಇಂಡಿಯಾ ಕನ್ನಡ)

English summary
Its looks like the good times have started for Kannada films. After the great business done by films like Govindaya Namaha and Jaanu at the Box Office, the latest releases Addhuri also opened with a big bang. The film released over 116 theatres all over the state and it has not heard a single negative report emanating from these theatres said the distributor Basha.
Please Wait while comments are loading...