For Quick Alerts
  ALLOW NOTIFICATIONS  
  For Daily Alerts

  ಈ ಹಿಟ್ ಹೀರೋ ಸಿನಿಮಾ ಬಂದು 2 ವರ್ಷ ಆಯ್ತು

  By ಜೀವನರಸಿಕ
  |

  ಕೆಲವು ಹೀರೋಗಳು ಒಂದು ಸಿನಿಮಾ ಗೆಲ್ಲೋಕೆ ಐದಾರು ಸಿನಿಮಾ ಮಾಡಿರ್ತಾರೆ. ಅದು ಗೆಲ್ಲೋ ವೇಳೆಗೆ ಇವ್ರು ಮರೆತೇ ಹೋಗಿರ್ತಾರೆ. ಆದರೆ, ಮೊದಲ ಸಿನಿಮಾನೇ ಸೂಪರ್ ಡ್ಯೂಪರ್ ಹಿಟ್, ಗೆದ್ದು ಎರಡು ವರ್ಷ ಆಗ್ತಿದ್ರೂ ಈ ನಟನ ಮತ್ತೊಂದು ಸಿನಿಮಾ ಬಂದಿಲ್ಲ.

  ಧ್ರುವ ಸರ್ಜಾ 2012ರಲ್ಲಿ ಎಂಟ್ರಿಕೊಟ್ಟ ಸಿನಿಮಾ 'ಅದ್ದೂರಿ'ಯಲ್ಲೇ ಭರ್ಜರಿ ಭರವಸೆ ಹುಟ್ಟಿಸಿದ ನಟ. ಮೊದಲ ಸಿನಿಮಾ ಗೆದ್ದಿದೆ ಅಂದ್ರೆ ನಿರ್ಮಾಪಕರು ಸಾಲು ಸಾಲಾಗಿ ಹೀರೋ ಮನೆಮುಂದೆ ನಿಲ್ತಾರೆ, ಮತ್ತೊಂದು ಸಿನಿಮಾ ಗೆದ್ದ ಸಿನಿಮಾ ಜೊತೆಗೇ ತೆರೆಗೆ ಬರುತ್ತೆ. ಆದ್ರೆ ಈ ವಿಷಯದಲ್ಲಿ ಧ್ರುವ ದುರದೃಷ್ಟವಂತ ನಟ. [ಕೈ ಸುಟ್ಟುಕೊಂಡ ನಿರ್ಮಾಪಕನ ಕೈ ಹಿಡಿದ ಅದ್ದೂರಿ]

  ಅದ್ದೂರಿ ಬಂದು ಇನ್ನೊಂದು ತಿಂಗಳಿಗೆ ಎರಡು ವರ್ಷ. ಎರಡು ವರ್ಷ ಕಳೆದ್ರೂ ಧ್ರುವ ಸರ್ಜಾ ಇನ್ನೂ ಎರಡನೇ ಸಿನಿಮಾದ ಗುಂಗಿನಲ್ಲೇ ಇದ್ದಾರೆ. 'ಬಹಾದ್ದೂರ್' ಬಹಳ ಅದ್ಧೂರಿಯಾಗಿ ಬರುತ್ತೆ ಅಂತ ಪ್ರೇಕ್ಷಕರೂ ಕಾಯ್ತಾನೇ ಇದ್ದಾರೆ. ಆದರೆ 'ಬಹದ್ದೂರ್' ತೆರೆಗೆ ಬರುವುದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕು.

  ತಿಂಗಳಿಗೊಬ್ಬ, ವಾರಕ್ಕೊಬ್ಬ ಸಿನಿಮಾ ಹೀರೋ ಹುಟ್ಟುವ ಈ ದಿನಗಳಲ್ಲಿ ಒಬ್ಬ ಹೀರೋ ಗೆದ್ರೆ ಮಾತ್ರ ಅವ್ನ ಮತ್ತೊಂದು ಸಿನಿಮಾಗಾಗಿ ಜನರು ಕಾದಿರುತ್ತಾರೆ. ಅಂತಾದ್ರಲ್ಲಿ ಧ್ರುವ ಸರ್ಜಾ ಇಷ್ಟು ಲೇಟ್ ಮಾಡಿದ್ರೆ ಜನರು ಮತ್ತೆ ಅದ್ದೂರಿ ಸಿನಿಮಾ ನೋಡಿ ಬರಬೇಕಷ್ಟೆ.

  English summary
  Kannada films young actor Dhruva Sarja back to silver screen after a gap of two years. He made his acting debut in the 2012 released successful film, Addhuri which brought him much appreciation and popularity. Now his latest movie 'Bahaddoor' all set to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X