'ಅಧಿಕ ಪ್ರಸಂಗಿ'ಯಾದ ನಟಿ ಜಯಶ್ರೀ ಆರಾಧ್ಯ
ನಟಿ ಜಯಶ್ರೀ ಆರಾಧ್ಯ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಈಗ ಅವರ ಎರಡನೇ ಸಿನಿಮಾ ಶುರುವಾಗಿದೆ. ಈ ಚಿತ್ರದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದೆ.
'ಅಧಿಕ ಪ್ರಸಂಗಿ' ಎಂಬುದು ಜಯಶ್ರೀ ಮುಂದಿನ ಸಿನಿಮಾದ ಹೆಸರು. ಮೊದಲ ಸಿನಿಮಾದಲ್ಲಿ ಸ್ಕೂಲ್ ಹುಡುಗಿಯ ಪಾತ್ರ ಮಾಡಿದ್ದ ಇವರು ಈಗ ಬೇರೆ ರೀತಿಯ ಪಾತ್ರವನ್ನು ಪರದೆ ಮೇಲೆ ತೋರಿಸಲು ಸಿದ್ಧವಾಗಿದ್ದಾರೆ.
ಈ ಚಿತ್ರದಲ್ಲಿ ಜಯಶ್ರೀ ಮೋಸಿನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಮಾಡ್ರನ್ ಹುಡುಗಿಯ ತರ ಇದ್ದು ಸಿಕ್ಕಾಪಟ್ಟೆ ತರ್ಲೆ ಆಗಿದೆಯಂತೆ.

ರಂಗಾಯಣದ ಪ್ರತಿಭೆ ಸುಕೇಶ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ರಾಕೇಶ್ ಸೋಮ್ಲಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ರಂಗಾಯಣ ರಘು ಮತ್ತು ವಿಜಯ್ ಚೆಂಡೂರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ, ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿದ್ದು, ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
English summary
Actress Jayashree Aradhya' 'Adhiga Prasangi' kannada movie movie launched


Click it and Unblock the Notifications