ಚಂದನವನದಲ್ಲಿ ಮಿಂಚಲು ಬರ್ತಿದ್ದಾರೆ 'ಅಧಿಕ ಪ್ರಸಂಗಿ'ಗಳು
'ಅಧಿಕ ಪ್ರಸಂಗಿ' ಅಂದ್ರೆ ಒಂಥರ ವಿಚಿತ್ರ, ಅದರಲ್ಲೂ ಅದೇ ಬೇಸ್ ಮೇಲೆ ಇಂಥ ಸಿನಿಮಾ ಬರ್ತಾ ಇರೋದು ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ. ಹೌದು, 'ಅಧಿಕ ಪ್ರಸಂಗಿ' ಅಂತಾನೆ ಕನ್ನಡದಲ್ಲೊಂದು ಅದ್ಭುತ ಪ್ರಯೋಗಾತ್ಮಕ ಸಿನಿಮಾ ರೆಡಿಯಾಗ್ತಿದೆ.
ಈಗಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನಲ್ಲೇ ತನ್ನ ಝಲಕ್ ತೋರಿಸಿದೆ. ಹುಡುಗಿಯೊಬ್ಬಳು ತನ್ನ ಹುಡುಗನಿಗೆ ಸಿಗರೇಟ್ ಹಚ್ಚುವ ಪೋಸ್ಟರ್ ಸ್ಯಾಂಡಲ್ವುಡ್ ಮಂದಿಯ ಗಮನ ಸೆಳೆಯುತ್ತಿದೆ.
ಸಾಕಷ್ಟು ಸಿನಿಮಾಗೆ ಸಹ ನಿರ್ದೇಶಕನಾಗಿ ಎರಡೂ ಚಿತ್ರಕ್ಕೆ ಸಂಭಾಷಣೆ ಹಾಗೂ ಸಾಹಿತ್ಯವನ್ನು ಬರೆದು ಮತ್ತು ಕಿರುಚಿತ್ರವನ್ನು ನಿರ್ದೇಶನ ಮಾಡಿ ತನ್ನ ಕ್ರಿಯೇಟಿವಿಟಿಯನ್ನು ಗಾಂಧಿನಗರಕ್ಕೆ ಪ್ರದರ್ಶಿಸಿದ್ದ ಯುವ ನಿರ್ದೇಶಕ ರಾಕಿ ಸೋಮ್ಲಿ ಈಗ 'ಅಧಿಕ ಪ್ರಸಂಗಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮೊದಲ ಚಿತ್ರವಾದರೂ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೆ ಇಂಡಸ್ಟ್ರಿಗೆ ಇಳಿದಿದ್ದಾರೆ. ಸಿನಿಮಾ ಅಂದ್ರೆ ಕೇವಲ ಶೋಕಿ ಅಲ್ಲ, ಇದರಲ್ಲಿ ಪರಿಶ್ರಮ ಪಟ್ಟರೆ ಬದುಕು ಕಟ್ಟಿಕೊಳ್ಳ ಬೇಕೆನ್ನುವುದು ರಾಕಿ ಸೋಮ್ಲಿ ಅವರ ಜೀವನದ ಕನಸು. ಈಗ ಆ ಕನಸಿಗೆ ಚಾಲನೆ ದೊರೆತಿದೆ.ಇನ್ನೇನು ಸದ್ಯದಲ್ಲೇ 'ಅಧಿಕ ಪ್ರಸಂಗಿ' ಸಿನಿಮಾ ಸೆಟ್ಟೇರಲಿದೆ.

ಚಿತ್ರದ ನಾಯಕನಾಗಿ ಸುಕೇತ್ ಕಾಣಿಸಿಕೊಳ್ಳಲಿದ್ದಾರೆ. ಸುಕೇತ್ ಗೆ ನಟನೆ ಹೊಸತೇನಲ್ಲ. ರಂಗಾಯಣದ ನಾಟಕಗಳಲ್ಲಿ ಅಭಿನಯಿಸುತ್ತಾ ರಂಗಭೂಮಿಯ ಅನುಭವ ಇದ್ದು ಸಾಕಷ್ಟು ನಾಟಕವನ್ನು ಮಾಡಿ ತಮ್ಮ ಒಳಗಿರುವ ಪ್ರತಿಭೆಯನ್ನು ಈಗಾಗಲೇ ಹೊರಹಾಕಿದ್ದಾರೆ. ಈಗ 'ಅಧಿಕ ಪ್ರಸಂಗಿ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುಕೇತ್ ಗೆ ಜೋಡಿಯಾಗಿ ಜಾನ್ವಿ ರೆಡ್ಡಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಮೂಲತಃ ಡ್ಯಾನ್ಸರ್ ಆಗಿರುವ ಜಾನ್ವಿ ರೆಡ್ಡಿ ಈಗ ಸಿನಿ ಜರ್ನಿ ಶುರು ಮಾಡಿದ್ದಾರೆ. ಪೋಸ್ಟರ್ನಲ್ಲಿ ಈ ಪೇರ್ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದೆ.

ಉಳಿದಂತೆ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ವಿಜಯ್ ಚೆಂಡೂರು ಹಾಗೂ ಇತರೆ ಹಿರಿಯ ಕಲಾವಿದರು ಸಾಥ್ ನೀಡಲಿದ್ದಾರೆ. ಚಿತ್ರದ ಮತ್ತೊಂದು ಹೈಲೆಟ್ ಏನೆಂದರೆ, ಸುದ್ದಿ ವಾಹಿನಿಗಳಲ್ಲಿ ತನ್ನ ಆಂಕರಿಂಗ್ ಸ್ಟೈಲ್ ನ ಮೂಲಕ ವೀಕ್ಷಕರ ಮನಗೆದ್ದಿದ್ದ ನಿರೂಪಕ ಮಂಜುನಾಥ್ ದಾವಣಗೆರೆ ಈ ಸಿನಿಮಾದ ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಮಂಜುನಾಥ್ ಕೂಡ ಈ ಸಿನಿಮಾದ ಬಗ್ಗೆ ಬಹಳ ಎಕ್ಸೈಟ್ ಆಗಿದ್ದಾರೆ. ಇನ್ನೂ ಕಥೆಗೆ ಆರ್. ಸಿದ್ದರಾಜು ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಶಿವು ಪುತ್ರ ಕ್ಯಾಮೆರಾ ಕೈಚಳಕ ಇದ್ದು, ರಾಬರ್ಟ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಬೆಂಗಳೂರು ಸಕಲೇಶಪುರ ಹಾಗೂ ಹೊರ ದೇಶಗಳ ಸ್ಪೆಷಲ್ ಲೊಕೇಷನ್ಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ 'ಅಧಿಕ ಪ್ರಸಂಗಿ' ಸಿನಿಮಾ ಮಾತ್ರ ಈಗಿನ ಯುವಜನರಿಗೆ ಹೇಳಿ ಮಾಡಿಸಿದಂತ ಸಿನಿಮಾವಾದರು ಎಲ್ಲ ವರ್ಗದವರಿಗೂ ಇಷ್ಟವಾಗುವಂತ ಕಥೆ ಇದಾಗಿದೆ ಪ್ರೇಕ್ಷಕನ ಮನಸ್ಸನ್ನ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತಿದೆ ಚಿತ್ರತಂಡ.


Click it and Unblock the Notifications