ತುಳು ಧ್ವಜ ಅಪಮಾನಿಸಿದ ವ್ಯಕ್ತಿ: ಸಿಡಿದೆದ್ದ ನಟಿ ಅದ್ವಿತಿ ಶೆಟ್ಟಿ

ಕರ್ನಾಟಕದ ಪ್ರಾದೇಶಿಕ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಕರಾವಳಿ ಭಾಗದಲ್ಲಿ ತುಳು ಭಾಷೆ ಮಾತನಾಡುವರ ಸಂಖ್ಯೆ ಹೆಚ್ಚಿದೆ. ಕರಾವಳಿಯ ಕೆಲವು ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಹೋರಾಟ, ಅಭಿಯಾನವೂ ಆಗಾಗ ನಡೆಯುತ್ತಲೇ ಇದೆ.

ಇಲ್ಲೊಬ್ಬ ವ್ಯಕ್ತಿ ತುಳು ಧ್ವಜ ಹೋಲುವಂತೆ ಚಪ್ಪಲಿ ವಿನ್ಯಾಸಗೊಳಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನ ಗಮನಿಸಿ ನಟಿ ಅದ್ವಿತಿ ಶೆಟ್ಟಿ ವಿರೋಧಿಸಿದ್ದಾರೆ.

ಕರ್ನಾಟಕ ರಾಜ್ಯ ವಿಭಜನೆಗೂ ಶುರುವಾಯಿತು ಕೂಗು

'ಪ್ರತಿಯೊಂದು ಮಾತೃಭಾಷೆಯನ್ನು ಗೌರವಿಸಬೇಕು. ಅಪಮಾನ ಮಾಡುವಂತಹ ಕೆಲಸ ಮಾಡಬಾರದು' ಎಂದು ನಟಿ ಅದ್ವಿತಿ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ.

Adhvithi Shetty Outrage Against Those Who Created Tulunadu Slipper Design on Social Media

'ಇದನ್ನು ಸಹಿಸಲು ಸಾಧ್ಯವಿಲ್ಲ. ನನ್ನ ಮಾತೃಭಾಷೆ ತುಳು. ನಾನೊಬ್ಬ ತುಳುವ ಎಂದು ಹೇಳಿಕೊಳ್ಳಲು ನನಗೆ ಹಮ್ಮೆ ಇದೆ. ನಿಜಕ್ಕೂ ಇದು ನೋವು ಉಂಟು ಮಾಡಿದೆ. ನಮ್ಮ ಸುತ್ತಲೂ ಇಂತಹ ವಿಷಯಗಳು ನಡೆಯುತ್ತಿದೆ. ಇಂತಹ ದ್ವೇಷವನ್ನು ಏಕೆ ಹರಡಿಸಬೇಕು, ಏಕೆ ಮಾತನಾಡಬೇಕು' ಎಂದು ನಟಿ ಅದ್ವಿತಿ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಬೇಸರ ವ್ಯಕ್ತಪಡಿಸಿದರು.

'ಕನ್ನಡ ಭಾಷೆಯನ್ನು ಇಷ್ಟ ಪಡುವಷ್ಟೇ ತುಳು ಭಾಷೆಯನ್ನು ಇಷ್ಟ ಪಡುತ್ತೇನೆ. ದಯವಿಟ್ಟು ಈ ಆರೋಪಿಗಳನ್ನು ಪತ್ತೆ ಹಚ್ಚಿ' ಎಂದು ವಿನಂತಿಸಿದ್ದಾರೆ.

Adhvithi Shetty Outrage Against Those Who Created Tulunadu Slipper Design on Social Media

Recommended Video

ಸಮಂತಾಗಾಗಿ The Family Man 2 ಸಿನಿಮಾ ನೋಡಿ ಮೆಚ್ಚಿಕೊಂಡ Ramya | Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಅದ್ವಿತಿ ಶೆಟ್ಟಿ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ಪ್ರಸ್ತುತ, ಕಾರ್ತಿಕ್ ಜಯರಾಂ ಅಭಿನಯಿಸುತ್ತಿರುವ ಐರಾವನ್ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actress Adhvithi Shetty outrage against those who created tulunadu slipper design on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X