'ಅಧ್ಯಕ್ಷ'ನ ಜೊತೆಗೆ ಸ್ವಿಲ್ಪರ್ ಜೂಬ್ಲಿ ಆಚರಿಸ್ತಾರೆ ರಾಗಿಣಿ ದ್ವಿವೇದಿ
Recommended Video
'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಸಿನಿಮಾ ಅಕ್ಟೋಬರ್ 4 ರಂದು ಬಿಡುಗಡೆ ಆಗುತ್ತಿದೆ.
ಈ ಸಿನಿಮಾದ ಮತ್ತೊಂದು ವಿಶೇಷ ಇದೀಗ ಬಹಿರಂಗವಾಗಿದೆ. 'ಅಧ್ಯಕ್ಷ ಇನ್ ಅಮೇರಿಕಾ' ರಾಗಿಣಿ ಅಭಿನಯದ 25ನೇ ಸಿನಿಮಾವಾಗಿದೆ. ಅಧ್ಯಕ್ಷನ ಜೊತೆಗೆ ಗ್ಲಾಮರ್ ಕ್ವೀನ್ ಸ್ವಿಲ್ಪರ್ ಜೂಬ್ಲಿ ಆಚರಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ಶರಣ್ ಜೊತೆಗೆ ರಾಗಿಣಿ ನಟಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ಹಾಡುಗಳು ಕೇಳುಗರ ಮನ ಗೆದ್ದಿವೆ. 'ಅಧ್ಯಕ್ಷ' ಹಾಡು, 'ಅಮ್ಮ ನಾ ಸೇಲಾದೆ' ಹಾಡು, 'ಸಲೀಮ್ ಅನಾರ್ಕಲಿ' ಹಾಡುಗಳು ಜನರ ಬಾಯಲಿ ಹರಿದಾಡುತ್ತಿದೆ.

ಸಿನಿಮಾದಲ್ಲಿ ಶರಣ್ ಹಾಗೂ ರಾಗಿಣಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು ಸಿನಿಮಾದಲ್ಲಿ ಇದ್ದಾರೆ. ಶರಣ್ ಅಭಿಮಾನಿಗಳು ಬಯಸುವ ಪಕ್ಕಾ ಕಾಮಿಡಿ ಸಿನಿಮಾ ಇದಾಗಿದೆ. ಯೂ ಟ್ಯೂಬ್ ನಲ್ಲಿ ಹಾಡುಗಳು ಹಾಡು ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.
ಶಿವರಾಜ್ ಕೆ ಆರ್ ಪೇಟೆ ಹಾಗೂ ಶರಣ್ ಕಾಂಬಿನೇಶನ್ ಟ್ರೇಲರ್ ನಲ್ಲಿ ಗಮನ ಸೆಳೆದಿದೆ. ಯೋಗಾನಂದ್ ಮುದ್ದನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ವಿಶ್ವ ಪ್ರಸಾದ್ ನಿರ್ಮಾಣ, ವಿವೇಕ್ ಕುಚ್ಚಿಬೊತ್ಲ ಸಹ ನಿರ್ಮಾಣ ಚಿತ್ರಕ್ಕಿದೆ.


Click it and Unblock the Notifications











