'ಅಮ್ಮ ನಾ ಸೇಲಾದೆ.. ಅಮೆರಿಕಾ ಪಾಲಾದೆ..' ಎಂದ ಶರಣ್

Recommended Video

ನನ್ನ ಕೈಯಲ್ಲಿ ಆಗದೇ ಇರೋದೆಲ್ಲ ಮಾಡಿದ್ದೀನಿ..! | Bharaate | Yoo Yoo | FILMIBEAT KANNADA

'ಅಮ್ಮ ನಾ ಸೇಲಾದೆ...ಅಮೆರಿಕಾ ಪಾಲಾದೆ..' ಎಂದು ಆಗ ಕಾಶೀನಾಥ್ ಹಾಡಿದ್ದರು. 'ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು' ಚಿತ್ರದ ಈ ಹಾಡು ಫುಲ್ ಫೇಮಸ್ ಆಗಿತ್ತು.

ಇದೀಗ ಇದೇ ಹಾಡು ಕನ್ನಡದ ಮತ್ತೊಂದು ಹೊಸ ಸಿನಿಮಾದಲ್ಲಿ ಮರು ಬಳಕೆ ಆಗುತ್ತಿದೆ. ಈ ಬಾರಿ ಸೇಲ್ ಆಗಿ ಅಮೆರಿಕಾ ಪಾಲಾಗಿರುವುದು ನಟ ಶರಣ್. 'ಅಧ್ಯಕ್ಷ ಇನ್ ಅಮೆರಿಕಾ' ಸಿನಿಮಾದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ.

Will Be Releasing Today

ಇಂದು (ಸಪ್ಟೆಂಬರ್ 10) ಸಂಜೆ 4 ಗಂಟೆಗೆ ಹೊಸ ಶೈಲಿಯ 'ಅಮ್ಮ ನಾ ಸೇಲಾದೆ... ಅಮೆರಿಕಾ ಪಾಲಾದೆ...' ಹಾಡು ಬಿಡುಗಡೆ ಆಗುತ್ತಿದೆ. ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದು, ಮೊದಲ ಎರಡು ಸಾಲುಗಳನ್ನು ಮಾತ್ರ ಹಳೆ ಸಾಲುಗಳನ್ನೆ ಉಳಿಸಿಕೊಂಡಿದ್ದಾರೆ.

ಟಿಪ್ಪು ಹಾಡಿಗೆ ಧ್ವನಿ ನೀಡಿದ್ದಾರೆ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಶರಣ್ ಜೊತೆಗೆ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಯೋಗನಂದ್ ಮುದ್ದಾನ್ ಅವರದ್ದಾಗಿದೆ.

2014 ರಲ್ಲಿ ಬಂದ 'ಅಧ್ಯಕ್ಷ' ಸಿನಿಮಾ ಸೂಪರ್ ಹಿಟ್ ಆಗಿದ್ದು, ಅದೇ ಜೋಶ್ ನಲ್ಲಿ 'ಅಧ್ಯಕ್ಷ ಇನ್ ಅಮೆರಿಕಾ' ನಿರ್ಮಾಣ ಆಗುತ್ತಿದೆ. ಸಿನಿಮಾ ಅಕ್ಟೋಬರ್ 4 ರಂದು ಬಿಡುಗಡೆ ಆಗುತ್ತಿದೆ.

More from Filmibeat

English summary
Actor Sharan's Adhyaksha In America movie 'Amma Na Sale Ade..' song will be releasing today (September 10th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X