ವಿದೇಶದಲ್ಲಿ 'ಅಧ್ಯಕ್ಷ': ಹೆಚ್ಚಾಯ್ತು ಶರಣ್ - ರಾಗಿಣಿ ನಗುವಿನ ಸದ್ದು

ಕಳೆದ ಶುಕ್ರವಾರ ಬಿಡುಗಡೆಯಾದ 'ಅಧ್ಯಕ್ಷ ಇನ್ ಅಮೆರಿಕಾ' ಸಿನಿಮಾ ಯಶಸ್ವಿಯಾಗಿ ಸಾಗುತ್ತಿದೆ. ಶರಣ್ ಹಾಗೂ ರಾಗಿಣಿ ದ್ವಿವೇದಿ ನಗುವಿನ ಸದ್ದು ಮತ್ತಷ್ಟು ಜೋರಾಗಿದೆ.

ಈ ಸಿನಿಮಾ ಇದೀಗ ವಿಶೇಷದಲ್ಲಿಯೂ ಬಿಡುಗಡೆ ಆಗುತ್ತಿದೆ. ಇಂದಿನಿಂದ ಜರ್ಮನಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ನಿನ್ನೆ ಅಮೆರಿಕಾದಲ್ಲಿ ಸಿನಿಮಾ ತೆರೆ ಕಂಡಿತ್ತು. ಅಮೆರಿಕಾದ 25ಕ್ಕೂ ಹೆಚ್ಚು ಸ್ಕ್ರೀನ್ ಗಳು ಸಿನಿಮಾಗೆ ಸಿಕ್ಕಿವೆ. ವಿದೇಶದ ಕನ್ನಡಿಗರು ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ವಿಮರ್ಶಕರಿಂದ ಒಳ್ಳೆಯ ಮಾತುಗಳನ್ನು ಪಡೆದ ಈ ಸಿನಿಮಾ, ಪ್ರೇಕ್ಷಕರಿಗೂ ಖುಷಿ ನೀಡುತ್ತಿವೆ.

'ಅಧ್ಯಕ್ಷ ಇನ್ ಅಮೇರಿಕಾ' ಅಂದಾಕ್ಷಣ ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಿರಬಹುದು ಎಂದುಕೊಂಡಿದ್ದರು ಅದು ತಪ್ಪು. ಮಲಯಾಳಂ ಭಾಷೆಯ 'ಟು ಕಂಟ್ರಿಸ್' ಚಿತ್ರದ ರೀಮೇಕ್ ಇದು. ಕನ್ನಡದ ನೇಟಿವಿಟಿಗೆ ತಕ್ಕಂತೆ ಮಾಡುವಲ್ಲಿ ನಿರ್ದೇಶಕ ಯೋಗಾನಂದ್ ಮುದ್ದಾನ್ ಯಶಸ್ಸು ಕಂಡಿದ್ದಾರೆ. ಶರಣ್ ಸಿನಿಮಾಗಳಲ್ಲಿ ಏನೆಲ್ಲ ಇರಬೇಕು ಎನ್ನುವುದನ್ನ ಅರಿತುಕೊಂಡಿರುವ ನಿರ್ದೇಶಕರು, ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಚಿತ್ರಕತೆ ಮಾಡಿ ಗಮನ ಸೆಳೆದಿದ್ದಾರೆ.

Adhyaksha In America Movie Shows In Germany And Usa

ನಗಿಸುವುದಕ್ಕೆ ಸಿನಿಮಾ ಮಾಡುವ ಶರಣ್ ಅವರ ಕಾಮಿಡಿ ಟೈಂ ಸಖತ್ ಮಜಾ ಕೊಡುತ್ತೆ. ಅಧ್ಯಕ್ಷನಿಗೆ ಸಾಥ್ ಕೊಟ್ಟಿರುವ ಶಿವರಾಜ್ ಕೆ.ಆರ್ ಪೇಟೆ ಕೂಡ ಪಂಚ್ ಮೇಲೆ ಪಂಚ್ ಕೊಡ್ತಾರೆ. ಸಿನಿಮಾ ಪೂರ್ತಿ ಸಾಧುಕೋಕಿಲಾ ಕಚಗುಳಿ ನಗೆಗಡಲಲ್ಲಿ ತೇಲಿಸುತ್ತೆ. ರಂಗಾಯಣ ರಘು ಹಾಸ್ಯ ಮತ್ತಷ್ಟು ಕಿಕ್ ಕೊಡುತ್ತೆ. ತಬಲಾ ನಾಣಿ ಸಿಗ್ನೇಚರ್ ಪಾತ್ರ ನಿರ್ವಹಿಸಿದ್ದು ನಗು ಹೆಚ್ಚಿಸುತ್ತಾರೆ. ಸುಂದರ್ ವೀಣಾ ಬಂದಾಗೆಲ್ಲ ನಗು ಮೂಡಿಸುತ್ತಾರೆ. ಇವರ ಜೊತೆ ಅವಿನಾಶ್, ಪದ್ಮಜಾ ರಾವ್, ಚಿತ್ರಾ ಶಣೈ, ಅಶೋಕ್, ಪ್ರಕಾಶ್ ಬೆಳವಾಡಿ, ಮಕರಂದ್ ದೇಶಪಾಂಡೆ ಉತ್ತಮ ಸಾಥ್ ನೀಡಿದ್ದಾರೆ. ಯಾವ ಪಾತ್ರವೂ ಬೇಡ ಎನಿಸಲ್ಲ.

Adhyaksha In America Movie Shows In Germany And Usa

'ಅಧ್ಯಕ್ಷ ಇನ್ ಅಮೇರಿಕಾ' ರಾಗಿಣಿ ದ್ವಿವೇದಿ ನಟನೆಯ 25ನೇ ಸಿನಿಮಾವಾಗಿದೆ.

More from Filmibeat

English summary
Actor Sharan's Adhyaksha In America movie shows in germany and usa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X