ಆದಿಪುರುಷ್ ಕರ್ನಾಟಕ ಫಸ್ಟ್ ಡೇ ಕಲೆಕ್ಷನ್ ಎಷ್ಟು? ಕ್ರಾಂತಿ ದಾಖಲೆ ಬ್ರೇಕ್ ಆಯ್ತಾ?

ನಿನ್ನೆ ( ಜೂನ್ 16 ) ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ರಾಮಾಯಣ ಕಥೆಯನ್ನಾಧರಿಸಿದ ಚಿತ್ರವಾದ ಆದಿಪುರುಷ್‌ನಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಚಿತ್ರ ಮೂಲ ಹಿಂದಿ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಇನ್ನು ಬಿಡುಗಡೆಗೂ ಮುನ್ನವೇ ಮಿಶ್ರ ಅಭಿಪ್ರಾಯವನ್ನು ಪಡೆದುಕೊಂಡಿದ್ದ ಆದಿಪುರುಷ್ ಟೀಸರ್ ಬಿಡುಗಡೆಯಾದಾಗ ಕೆಟ್ಟ ವಿಎಫ್ಎಕ್ಸ್ ಕಾರಣದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

Adipurush collects 8 crores on day 1 in Karnataka and failed to break Darshans Kranti record

ಬಳಿಕ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ ಸುಧಾರಿಸಿಕೊಂಡ ಚಿತ್ರತಂಡ ಹೈಪ್ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿತ್ತು. ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ಎಂಬ ವಿಶೇಷತೆ ಹೊಂದಿರುವ ಆದಿಪುರುಷ್ ಬಿಡುಗಡೆಯಾದ ಬಳಿಕ ದಾಖಲೆಯ ಕಲೆಕ್ಷನ್ ಮಾಡಬಹುದು ಎಂಬ ಊಹೆ ಇತ್ತು. ಆದರೆ ಚಿತ್ರ ಮೊದಲ ಪ್ರದರ್ಶನದ ಬಳಿಕ ಹೆಚ್ಚಾಗಿ ನೆಗೆಟಿವ್ ಪ್ರತಿಕ್ರಿಯೆ ಪಡೆದುಕೊಂಡ ಕಾರಣ ನಿರೀಕ್ಷಿಸಿದ್ದಕ್ಕಿಂತ ತುಸು ಕಡಿಮೆಯೇ ಮೊದಲ ದಿನ ಗಳಿಕೆಯಾಗಿದೆ ಎಂದು ಹೇಳಬಹುದು.

ಚಿತ್ರತಂಡ ಇಲ್ಲಿಯವರೆಗೂ ಮೊದಲ ದಿನದ ಅಧಿಕೃತ ಕಲೆಕ್ಷನ್ ಅನ್ನು ಪ್ರಕಟಿಸದೇ ಇದ್ದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಚಿತ್ರ ಮೊದಲ ದಿನ ಎಷ್ಟು ಗಳಿಸಿರಬಹುದು ಎಂಬು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಗಳ ಪ್ರಕಾರ ಆದಿಪುರುಷ್ ಚಿತ್ರ ಮೊದಲ ದಿನ ಭಾರತದಲ್ಲಿ 95 ಕೋಟಿ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 130 ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಮೊದಲ ದಿನದ ಗಳಿಕೆಯಲ್ಲಿ ಮೂರು ಬಾರಿ ನೂರು ಕೋಟಿ ಕ್ಲಬ್ ಸೇರಿದ ಏಕೈಕ ನಟ ಎನಿಸಿಕೊಂಡಿದ್ದಾರೆ.

ಹೀಗೆ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿರುವ ಆದಿಪುರುಷ್ ಕರ್ನಾಟಕದಲ್ಲಿಯೂ ಸಹ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ಕನ್ನಡ, ಹಿಂದಿ ಹಾಗೂ ತೆಲುಗು ಈ ಮೂರು ಅವತರಣಿಕೆಗಳೂ ಸಹ ಬಿಡುಗಡೆಯಾದ ಕಾರಣ ರಾಜ್ಯದಲ್ಲಿ ಆದಿಪುರುಷ್ ಮೊದಲ ದಿನ 8.17 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಆದಿಪುರುಷ್ 2023ರಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಇನ್ನು ಕರ್ನಾಟಕದಲ್ಲಿ ಆದಿಪುರುಷ್ ಪಡೆದುಕೊಂಡಿದ್ದ ಪ್ರದರ್ಶನಗಳು ಹಾಗೂ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಕಂಡು ಈ ವರ್ಷ ರಾಜ್ಯದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆ ಬರೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆದಿಪುರುಷ್ ಈ ದಾಖಲೆ ಮಾಡುವಲ್ಲಿ ವಿಫಲವಾಗಿದ್ದು 12.85 ಕೋಟಿ ಗಳಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.

2023ರಲ್ಲಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

1. ಕ್ರಾಂತಿ - 12.85 ಕೋಟಿ ರೂಪಾಯಿ ಗ್ರಾಸ್

2. ಆದಿಪುರುಷ್ - 8.17 ಕೋಟಿ ರೂಪಾಯಿ ಗ್ರಾಸ್

3. ಕಬ್ಜ - 8 ಕೋಟಿ ರೂಪಾಯಿ ಗ್ರಾಸ್

4. ಪಠಾಣ್ - 6.50 ಕೋಟಿ ರೂಪಾಯಿ ಗ್ರಾಸ್

5. ವಾರಿಸು - 5.65 ಕೋಟಿ ರೂಪಾಯಿ ಗ್ರಾಸ್

More from Filmibeat

English summary
Adipurush collects 8 crores on day 1 in Karnataka and failed to break Darshan's Kranti record. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X